ಜನರು ಜಾಗೃತರಾದಾಗ ಮಾತ್ರ ದೌರ್ಜನ್ಯ ತಡೆಯಲು ಸಾಧ್ಯ : ನ್ಯಾಯಾಧೀಶ ಸಲಗರೆ

ಗದಗ 26: ನಮ್ಮ ಸಂವಿಧಾನ ನಮಗೆ ಏನು ಬೇಕೋ ಅದನ್ನೆಲ್ಲಾ ನೀಡಿದೆ. ಆದರೆ ನಮ್ಮ ಕರ್ತವ್ಯಗಳೇನು ಎಂಬುದನ್ನು ಮೊದಲು ಅರಿಯಬೇಕ. ನಮ್ಮಲ್ಲಿ ಇನ್ನೂ ಕೂಡಾ ಕಾನೂನಿನ ಙ್ಞಾನ ಇರದೇ ಇರುವುದರಿಂದ ಅತ್ಯಾಚಾರ, ದೌರ್ಜನ್ಶ, ಮೋಸ, ವಂಚನೆ ನಡೆಯುತ್ತಲೇ ಇವೆ. ಇವನ್ನೆಲ್ಲಾ ಹತೋಟಿಗೆ ತರಬೇಕಾದರೆ ಮೊದಲು ಜನರು ಪ್ರಙ್ಞಾವಂತರಾಗಬೇಕು. ನೀವು ಜಾಗೃತರಾದಾಗ ಮಾತ್ರ ಸುತ್ತ ಮುತ್ತಲಿನ ಅವ್ಯವಸ್ಥೆ ಸರಿಪಡಿಸಲು ಸಾದ್ಯ. ಅತ್ಯಾಚಾರ, ದೌರ್ಜನ್ಯ, ಮಕ್ಕಳ ಸಾಗಾಟ ಎಸಗುವವರಿಗೆ ಕಠಿಣ ಶಿಕ್ಷೆ ಮತ್ತು ದಂಡ ಇದೆ. ಎಲ್ಲಿಯಾದರೂ ದೌರ್ಜನ್ಯ ನಡೆಯುವುದು ಕಂಡು ಬಂದರೆ ಕೂಡಲೇ ಸಮೀಪದ ಪೊಲೀಸ ಠಾಣೆ, ಮಕ್ಕಳ ಸಹಾಯವಾಣಗೆ ದೂರು ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲು ಸಹಕರಿಸಿರಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಎಸ್.ಜಿ. ಸಲಗರೆ ಅವರು ನುಡಿದರು.

ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಪೊಲೀಸ ಇಲಾಖೆ, ವಾತರ್ಾ ಇಲಾಖೆ, ಶಿಕ್ಷಣ, ಆರೋಗ್ಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸರ್ಕಾರಿ ಮತ್ತು ಅರೇ ಸಕರ್ಾರಿ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹುಲಕೋಟಿಯ ಸ್ವಾಮಿ ವಿವೇಕಾನಂದ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಹಾಗೂ ಮಹಿಳೆಯರಿಗಾಗಿ ಏರ್ಪಡಿಸಿದ್ದ ಕಾನೂನು ಸಾಕ್ಷರತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹೆಣ್ಣು ಮಕ್ಕ ರಕ್ಷಣೆ ಪ್ರತಿಯೊಬ್ಬರ ಹೊಣೆ, ಅದಕ್ಕಾಗಿ ಸರ್ಕಾರ, ಭಾಗ್ಯಲಕ್ಷ್ಮಿ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಯೋಜನೆ ಹಾಕಿ ತಾರತಮ್ಯ ಹೊಡಿದೊಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಮಹಿಳೆಯರ ಸಂಖ್ಯೆ ಇಳಿಮುಖವಾಗಿದ್ದು ಅನುಪಾತ ಸರಿಪಡಿಸಲು ಜನರಲ್ಲಿ ತಾವುಗಳು ಜಾಗೃತಿ ಮೂಡಿಸಬೇಕು, ಗಂಡು ಮತ್ತು ಹೆಣ್ಣು ಸಮಾನರು ಎಂಬ ಭಾವನೆ ಜನರಲ್ಲಿ ಮೂಡಲು ತಾವುಗಳು ಕಾರ್ಯೋನ್ಮುಖರಾಗಬೇಕು. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನಿರುದ್ಯೋಗಿಗಳಿಗೆ ವರದಾನವಾಗಿದೆ, ಈ ಯೋಜನೆಯಲ್ಲಿ ಕೃಷಿಕರಿಗೆ ಕೂಲಿಕಾರರಿಗೆ ಸಾಕಷ್ಟು ಸೌಲಬ್ಯಗಳಿವೆ ಅದರ ಬಗ್ಗೆ ತಿಳುವಳಿಕೆ ಹೊಂದಿ ಸದುಪಯೋಗ ಪಡಿಸಿಕೊಳ್ಳಬೇಕು, ಪ್ರತಿಯೊಬ್ಬರೂ ಸಂವಿಧಾನ ಅಥರ್ೆಯಿಸಿಕೊಂಡು ಜೀವನ ಸಾಗಿಸಬೇಕು ಎಂದು ಸದಸ್ಯ ಕಾರ್ಯದಶರ್ಿ ಎಸ್.ಜಿ. ಸಲಗರೆ ಅವರು ನುಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಡಿಪಿಒ ದಿನೇಶ ಆರ್.ಎಂ. ಅವರು ಗಭರ್ಿಣ ಸ್ತ್ರಿ ಹಾಗೂ ಮಕ್ಕಳಿಗೆ ಇರುವ ಇಲಾಖೆ ಸೌಲಬ್ಯಗಳ ಕುರಿತು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಪ್ರಕಾಶ ಎಂ.ವಾಲಿ ಬಾಲ್ಯ ವಿವಾಹ ನಿಪ್ಷೇದ, ಮಕ್ಕಳ ಹಕ್ಕುಗಳ ಕುರಿತು, ವಕೀಲರಾದ ಸುವರ್ಣಾ ಆರ್. ಅಕ್ಕಿ ಮೂಲಬೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು, ಕೆ.ಎಂ.ಶಲವಡಿ ಬಾಲ ನ್ಯಾಯ ಮಂಡಳಿ ಕುರಿತು ಮಾತನಾಡಿದರು. ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿ ಬಸವರಾಜ ಸಂಶಿ ಅವರು ಪೋಕ್ಸೊ ಕಾಯ್ಧೆ, ಮಕ್ಕಳ ಕಳ್ಳ ಸಾಗಾಣಿಕೆ ಮತ್ತು ವಾಣಜ್ಯ ಲೈಂಗಿಕ ಶೋಷಣೆ ಯೋಜನೆ, ಮಾದಕ ಔಷದ ದುರ್ಬಳಕೆಗೆ ಬಲಿಯಾದವರಿಗೆ ಕಾನೂನು ಸೇವೆಗಳು ಮತ್ತು ಮಾದಕ ಔಷದ ವಿಪತ್ತಿನ ನಿಮರ್ೂಲನೆ ಯೋಜನೆ, ಕನರ್ಾಟಕ ಸಂತ್ರಸ್ಥರ ಪರಿಹಾರ ಯೋಜನೆ ಕುರಿತು ಮಾತನಾಡಿ ಮಕ್ಕಳಿಗೆ ಬಯಮುಕ್ತ ವಾತಾವರಣ ಕಲ್ಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಉಪನ್ಯಾಸ ನೀಡಿದರು. 

ಸಮಾರಂಬದ ಅದ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರಿಯಾ ಎಂ. ಪಾಟೀಲ ವಹಿಸಿದ್ದರು. ವೇದಿಕೆ ಮೇಲೆ ಮಕ್ಕಳ ಸಹಾಯವಾಣಿಯ ಪ್ರಭಾವತಿ ಬೆಟಗೇರಿ ಹಾಗೂ ವಕೀಲರು, ಶಿಕ್ಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದಶರ್ಿ ವಾಯ್.ಡಿ.ತಳವಾರ ವಕೀಲರು ನಿರೂಪಿಸಿದರು.