ಸಮಾಜದ ಹಿರಿಯರ ಮೇಲೆ ದೌರ್ಜನ್ಯ: ದುಷ್ಟ ಶಕ್ತಿಗಳ ವಿರುದ್ಧ ಗದಗ ಜಿಲ್ಲಾ ಸವಿತಾ ಸಮಾಜದ ಎಚ್ಚರಿಕೆ : ಕೃಷ್ಣ ಹಡಪದ
Violence against elders of the society: Gadag District Savita Samaj warns against evil forces: Krish
ಗದಗ 31: ಗದಗ ಜಿಲ್ಲಾ ಸವಿತಾ ಸಮಾಜದ ಗಮನಕ್ಕೆ ಬಂದಿರುವಂತೆ, ಬೆಟಗೇರಿ ಸವಿತಾ ಸಮಾಜದಲ್ಲಿ ಕೆಲವು ದುಷ್ಟ ಶಕ್ತಿಗಳು ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪುರ ಅವರ ಮೇಲೆ ದೌರ್ಜನ್ಯ ಮತ್ತು ಬೆದರಿಕೆಗಳನ್ನು ನಡೆಸುತ್ತಿದ್ದಾರೆ. ಅವರು ಸಮಾಜದ ಸದಸ್ಯರನ್ನು ಬೆದರಿಸಿ, ಸಮಾಜದಿಂದ ಹೊರಗಿಡುವ ಬೆದರಿಕೆ ಹಾಕುತ್ತಿದ್ದಾರೆ. ಈ ದುಷ್ಟ ಶಕ್ತಿಗಳು ಸಮಾಜದ ಏಕತೆ ಮತ್ತು ಸಹಕಾರವನ್ನು ಭಂಗಪಡಿಸಲು ಪ್ರಯತ್ನಿಸುತ್ತಿದ್ದಾರೆ ಇಂಥ ಕೆಟ್ಟ ಪರಿಸ್ಥಿತಿಯನ್ನು ಗದಗ ಜಿಲ್ಲಾ ಸವಿತಾ ಸಮಾಜ ಸಹಿಸಲು ಸಾಧ್ಯವಿಲ್ಲ. ಈ ವಿಚಾರವಾಗಿ ಬೆಟಿಗೇರಿ ಸವಿತಾ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಏನು ಮಾಡುತ್ತಿದ್ದಾರೆ ಕಾಣದೆ ಕಣ್ಣಿನಂತೆ ಕೇಳದ ಕಿವಿಯಂತೆ ಆಡದೆ ಬಾಯಿಯಂತೆ ಕುಂತಿರುವುದು ನೋಡಿದರೆ ಈ ಪದಾಧಿಕಾರಿಗಳೇ ದುಷ್ಟ ಶಕ್ತಿಗಳಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿರಬಹುದು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್ ಹಡಪದ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು ಅವರು ಪತ್ರ ಹೇಳಿಕೆಯಲ್ಲಿ ಮಾತನಾಡಿ ನಾವು ಈ ದುಷ್ಟ ಶಕ್ತಿಗಳಿಗೆ ಮತ್ತು ಬೆಂಬಲಿಸುವವರಿಗೆ ಎಚ್ಚರಿಕೆ ಕೊಡುತ್ತೇವೆ, ತಮ್ಮ ಕೃತ್ಯಗಳನ್ನು ನಿಲ್ಲಿಸಿ, ಸಮಾಜದ ಹಿರಿಯರಿಗೆ ಮತ್ತು ಸದಸ್ಯರಿಗೆ ಗೌರವ ಕೊಡಬೇಕು. ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪುರ ಅವರು ಸಮಾಜದಲ್ಲಿ ಆಗುವಂತಹ ಅನ್ಯಾಯಗಳನ್ನು ತಡೆಯಲು ಧ್ವನಿ ಎತ್ತಿದ್ದಕ್ಕೆ ಅವರನ್ನು ಸಮಾಜದಿಂದ ನಡೆಯುವ ಸಭೆ ಸಮಾರಂಭಗಳಿಗೆ ಆಹ್ವಾನ ಕೊಡದೆ ಇರುವುದು ಮತ್ತು ಯಾರು ಸಹ ಅವರಿಗೆ ಸಂಬಂಧಿಸಿದ ಸಮಾರಂಭಗಳಿಗೆ ಕರೆಯಬಾರದು ಎಂದು ಹೇಳುತ್ತಿದ್ದಾರೆ.
ಇದು ಸಮಾಜದ ಹಿರಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಬೆದರಿಕೆಯ ಒಂದು ಭಾಗವಾಗಿದೆ. ನಾವು ಈ ದುಷ್ಟ ಶಕ್ತಿಗಳಿಗೆ ತಿಳಿಸುತ್ತೇವೆ, ತಮ್ಮ ಕೃತ್ಯಗಳನ್ನು ನಿಲ್ಲಿಸಿ, ಸಮಾಜದ ಹಿರಿಯರಿಗೆ ಮತ್ತು ಸದಸ್ಯರಿಗೆ ಗೌರವ ಕೊಡಬೇಕು. ತಪ್ಪಿದರೆ, ಗದಗ ಜಿಲ್ಲಾ ಸವಿತಾ ಸಮಾಜವು ಮುಲಾಜಿಲ್ಲದೆ ಇಂಥ ದುಷ್ಟ ಶಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಋಅ) ಸೆಕ್ಷನ್ 339, 340, 341, 506, 507 ಮತ್ತು 508 ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಕಾನೂನು ಸಚಿವರಾದ ಸನ್ಮಾನ್ಯ ಎಚ್ ಕೆ ಪಾಟೀಲ ಸರ್ ಅವರಿಗೆ ಗದಗ ಜಿಲ್ಲಾಧಿಕಾರಿಗಳಿಗೆ ಮತ್ತು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲು ಹಿಂಜರಿಯುವುದಿಲ್ಲ. ಎಂದ ಅವರು ನಾವು ಸಮಾಜದ ಹಿರಿಯರು ಮತ್ತು ಸದಸ್ಯರಿಗೆ ಭರವಸೆ ಕೊಡುತ್ತೇವೆ, ತಮ್ಮಗಳ ಸುರಕ್ಷತೆ ಮತ್ತು ಗೌರವವನ್ನು ಕಾಪಾಡಲು ನಾವು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ನಾವು ಈ ದುಷ್ಟ ಶಕ್ತಿಗಳ ಹಾಗೂ ಬೆಂಬಲಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ. ನಾವು ಈ ದುಷ್ಟ ಶಕ್ತಿಗಳಿಗೆ ಮತ್ತು ಬೆಂಬಲಿಸುವವರಿಗೆ ತಿಳಿಸುತ್ತೇವೆ, ತಮ್ಮ ಕೃತ್ಯಗಳನ್ನು ನಿಲ್ಲಿಸಿ, ಸಮಾಜದ ಹಿರಿಯರಿಗೆ ಮತ್ತು ಸದಸ್ಯರಿಗೆ ಗೌರವ ಕೊಡಬೇಕು. ತಪ್ಪಿದರೆ, ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್ ಹಡಪದ ಅವರು ನೇರ ಹಾಗೂ ಕೊನೆಯ ಎಚ್ಚರಿಕೆ ನಿಡಿದ್ದಾರೆ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 