ವಿನಯಗೌಡಾ ಪಾಟೀಲರ ಹುಟ್ಟುಹಬ್ಬದ ಸಂಭ್ರಮಾಚರಣೆ
Vinayagowda Patil's birthday celebration
ಲೋಕದರ್ಶನ ವರದಿ
ಸಂಕೇಶ್ವರ 14: ಮಾಜಿ ಸಚಿವ ಎ.ಬಿ.ಪಾಟೀಲ ಇವರ ಪುತ್ರ ವಿನಯಗೌಡಾ (ರಾಜೀವಗೌಡಾ) ಪಾಟೀಲ ಇವರ ಹುಟ್ಟು ಹಬ್ಬವನ್ನು ಅವರ ಗೆಳೆಯ ಮತ್ತು ಅಭಿಮಾನಿಗಳು ಇಂದು ಸೇರಿ ಶಂಕರಲಿಂಗ ಮಠದಲ್ಲಿ ಅವರ ಹೆಸರಿನಲ್ಲಿ ರುದ್ರಾಭಿಷೇಕ ಮತ್ತು ಹೂಮಾಲೆಗಳನ್ನು ಹಾಕಿದರು. ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆಗೆ ಮಾತನಾಡುತ್ತ ಸುನೀಲ ಅಣ್ಣಾಸಾಹೇಬ ಪರ್ವತರಾವ, ರೋಹನ ನೇಸರಿ, ಸುಬಾಷ ಕಾಸಾರಕರ ಇವರೆಲ್ಲರೂ ಮಾತನಾಡಿ ವಿನಯಗೌಡರಿಗೆ ದೇವರು ದೀರ್ಘಾಯುಷ್ಯವನ್ನು ನೀಡಲೆಂದು ಸುಭ ಹಾರೈಸಿದರು. ನಂತರ ಅನಂತ ವಿದ್ಯಾನಗರದಲ್ಲಿರುವ ಕ್ರಿಶ್ಚನ್ ಸಮುದಾಯದ ಅನಾಥಾಶ್ರಮಕ್ಕೆ ಎಲ್ಲ ಅಭಿಮಾನಿಗಳು ತೆರಳಿ ಅನಾಥ ಮಕ್ಕಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು.
ಹಾಗೂ ಹುಕ್ಕೇರಿಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ಹುಟ್ಟು ಹಬ್ಬದ ಆಚರಣೆಯಲ್ಲಿ ಸುನೀಲ ಪರ್ವತರಾವ, ನಂದು ಮುಡಸಿ, ರೋಹನ ನೇಸರಿ, ಸುಭಾಷ ಕಾಸಾರಕರ, ರಿಯಾಜ್ ಫಣಿಬಂದ, ಸುನೀಲ ಸಪಾಟೆ, ನಾರಾಯಣ ಕದಮ, ಮುಸ್ತಫರಾಜಾ ಮಕಾನದಾರ, ಪ್ರಕಾಶ ಇಟೇಕರ್, ಚೇತನ ಬಸೆಟ್ಟಿ, ಸಾಮಾಜಿಕ ಮಾದ್ಯಮದ ಸಾಗರ ಜಕಾತಿ, ಎಸ್‌ಡಿವ್ಹಿಎಸ್ ಸಂಘದ ಆಡಳಿತಾಧಿಕಾರಿ ಡಾ.ಬಿ.ಎ.ಪೂಜಾರಿ, ಎ.ಬಿ.ಪಾಟೀಲ ಆಪ್ತ ಕಾರ್ಯದರ್ಶಿ ಜಮಾದಾರ, ಪಿಂಟು ಕೋಳಿ, ಝಾಕೀರ್ ಮೋಮಿನ, ಸಂತೋಷ ಹೆಬ್ಬಾಳಿ, ಆನಂದ ಕಬ್ಬೂರಿ, ಚಿದಾನಂದ ಕರದನ್ನವರ, ಅಲ್ತಾಫ ಸಾಯನ್ನವರ, ಕು.ಶೀತಲ ಮಠಪತಿ, ಮೊದಲಾದ ಅಭಿಮಾನಿ ಬಳಗದವರು ಹಾಜರಿದ್ದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 