ಗ್ರಾಮಸ್ಥರಿಗೆ ಉಪಯುಕ್ತವಾಗದ ರಸ್ತೆ ಕಾಮಗಾರಿಯನ್ನು ಬಂದ ಮಾಡುವಂತೆ ಗ್ರಾಮಸ್ಥರು ಒತ್ತಾಯ

    ಗ್ರಾಮಸ್ಥರಿಗೆ ಉಪಯುಕ್ತವಾಗದ ರಸ್ತೆ ಕಾಮಗಾರಿಯನ್ನು ಬಂದ ಮಾಡುವಂತೆ ಗ್ರಾಮಸ್ಥರು ಒತ್ತಾಯ  Villagers insist on carrying out road works that are not beneficial to the villagers

ಲೋಕದರ್ಶನ ವರದಿ 

ಯಮಕನಮರಡಿ  12: ಸಮೀಪದ ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಇಂದಿರಾ ನಗರದಲ್ಲಿ ನಾಲ್ಕೂವರೆ ಕೋಟಿ ರೂ ಗಳ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರು ಆದ ಸತೀಶ್ ಅಣ್ಣ ಜಾರಕಿಹೊಳಿಯವರು ಮಂಜೂರು ಮಾಡಿದ್ದು ಸದರಿ ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಿ ಕೊಟ್ಟಿದ್ದು ಆದರೆ ಸದರಿ ರಸ್ತೆ ಕಾಮಗಾರಿಯು ಗ್ರಾಮಸ್ಥರಿಗೆ ಉಪಯುಕ್ತವಾಗದಂತೆ ಮಾಡಿರುವುದನ್ನು ಫೋಟೋ ಸಹಿತ ಸಚಿವರಿಗೆ ಗಮನಕ್ಕೆ ತಂದು ಸದರಿ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸ ಬೇಕೆಂದು ವಿನಂತಿಸಿ ಕೊಳ್ಳಲಾಗಿದೆ ಚರಂಡಿಯನ್ನು ತೆಗೆದುಹಾಕುವಂತೆ ಗ್ರಾಮಸ್ಥರು ಹಾಗೂ ಸಮಾಜ ಕಾರ್ಯಕರ್ತರು ಆದ ಮಂಜುನಾಥ್ ಪಾತ್ರೂಟ್ ಹಾಗೂ ಅವರ ಮಂಡಳಿಯ ಸರ್ವ ಸದಸ್ಯರು ಹಿರಿಯ ಪತ್ರಕರ್ತರಾದ ಗೋಪಾಲ್ ಚಪ್ಪನಿಯವರು ಉಪಸ್ಥಿತರಿದ್ದು ದಿನಾಂಕ 11ರಂದು ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. 

ಸಚಿವರು ಸದರಿ ಕಾಮಗಾರಿಯನ್ನು ಭಾವಚಿತ್ರದಲ್ಲಿ ಗಮನಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು ಕೂಡಲೇ ಗುತ್ತಿಗೆಯನ್ನು ರದ್ದುಪಡಿಸಿ ಬೇರೆ ಗುತ್ತಿಗೆದಾರರಿಗೆ ಒಪ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರು ಮುಂಗಾರು ಮಳೆ ಮುಂಚಿತವಾಗಿ ಚರಂಡಿ ಕಾಮಗಾರಿಯು ಸಮರ​‍್ಕವಾಗಿ ರಿಪೇರಿ ಆಗಬೇಕು ಇಲ್ಲದಿದ್ದಲ್ಲಿ ಮಳೆ ನೀರು ಬಡ ಕುಟುಂಬಗಳ ಮನೆಗಳಲ್ಲಿ ನುಗ್ಗುತ್ತದೆ ಆದ ಕಾರಣ ಈಗಾಗಲೇ ಮಾಡಿರುವ ಚರಂಡಿಗಳನ್ನು ರದ್ದುಪಡಿಸಿ ಸದರಿ ರಸ್ತೆಯನ್ನು ಕೆಳಮಟ್ಟದಲ್ಲಿ ಮಾಡುವಂತೆ ಗ್ರಾಮಸ್ಥರು ಕೇಳಿಕೊಂಡಿದ್ದಾರೆ ಈ ಕುರಿತು ಸಚಿವರು ಇದರ ಬಗ್ಗೆ ಕ್ರಮ ಕಳೆದುಕೊಳ್ಳುವುದಾಗಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ ಈ ಕುರಿತು ಮತ್ತೊಮ್ಮೆ ಸಚಿವರಿಗೆ ಭೇಟಿಯಾಗಿ ಸದರಿ ಕಾಮಗಾರಿಯನ್ನು ಸ್ಥಗಿತ ಗೊಳಿಸುವಂತೆ ಸಚಿವರ ಗಮನಕ್ಕೆ ತರಲಾಗಿದೆ ತಂದು ಸಚಿವರು ಖುದ್ದಾಗಿ ಬಂದು ಕಾಮಗಾರಿಯನ್ನು ಪರೀಶೀಲಿಸಬೇಕೆಂದು ವಿನಂತಿ ಮಾಡಿಕೊಳ್ಳಲಾಗಿದೆ.