ಅಗ್ನಿವೀರ ಸೇನೆಗೆ ಆಯ್ಕೆಯಾದ ಯುವಕರಿಗೆ ಗ್ರಾಮಸ್ಥರಿಂದ ಸನ್ಮಾನ
Villagers felicitate youth selected for Agniveer Sena
ಲಕ್ಷ್ಮೇಶ್ವರ" 24 : ತಾಲೂಕಿನ ದೊಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಉಂಡಳ್ಳಿ ಗ್ರಾಮದ ಯುವಕರಾದ ಮಹೇಂದ್ರ ಬಸವರಾಜ ಹುಲಕೋಟಿ ಮಾರುತಿ ರಾಜಪ್ಪ ಆಡೂರು ಅವರು ಅಗ್ನಿಪಥ ಯೋಜನೆಯಡಿ ಅಗ್ನಿವೀರರಾಗಿ ದೇಶ ಸೇವೆಗೆ ಆಯ್ಕೆಯಾಗಿದ ಹಿನ್ನೆಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ವತಿಯಿಂದ ಎಲ್ಲಾ ಊರ ಹಿರಿಯ ಮುಖಂಡರು ಯುವಕರು ಶಾಲೆಯ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳು ದೇಶಪ್ರೇಮಿಗಳ ಫೋಟೋ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.
ಅಗ್ನಿವೀರ ದೇಶ ಸೇವೆಗೆ ಆಯ್ಕೆಯಾದ ಯುವಕರಿಗೆ ಸನ್ಮಾನ ಮಾಡಿ ಮಾತನಾಡಿ ದೊಡ್ಡೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಈಳಿಗೇರ ಅವರು ದೇಶ ಸೇವೆ ಎನ್ನುವುದು ಕೇವಲ ಒಂದು ವೃತ್ತಿಯಲ್ಲಾ ಅದೊಂದು ಪವಿತ್ರವಾದ ಕಾರ್ಯ ಎಲ್ಲರಿಗೂ ದೇಶ ಸೇವೆ ಸಲ್ಲಿಸುವ ಋಣ ಇರುವುದಿಲ್ಲ ಹಿರಿಯರ ಪುಣ್ಯ ತಂದೆ ತಾಯಿಗಳ ಆಶೀರ್ವಾದ ಇದ್ದವರಿಗೆ ಮಾತ್ರ ಅಂತ ದೇಶ ಸೇವೆ ಮಾಡುವ ಅವಕಾಶ ಸಿಗುತ್ತದೆ.
ಆ ದಿಸೆಯಲ್ಲಿ ನಮ್ಮ ಉಂಡಳ್ಳಿ ಗ್ರಾಮದ ಯುವಕರು ಅಗ್ನಿವೀರ ದೇಶ ಸೇವೆಗೆ ಆಯ್ಕೆಯಾಗಿದ್ದು ಗ್ರಾಮದಲ್ಲರಿಗೂ ತುಂಬಾ ಸಂತೋಷವಾಗಿದೆ ಇನ್ನು ಉಳಿದ ಯುವಕರು ಇವರ ಪರಿಶ್ರಮದ ಹಾಗೆ ತಾವುಗಳು ಮುಂದಿನ ದಿನಗಳಲ್ಲಿ ಅನೇಕ ಹುದ್ದೆಗಳಿಗೆ ಆಯ್ಕೆಯಾಗಲು ಸತತ ಪರಿಶ್ರಮ ವಹಿಸಬೇಕು ಪರಿಸರಮ ಎಲ್ಲಿ ಇರುತ್ತದೆಅಲ್ಲಿ ಫಲ ಇದ್ದೇ ಇರುತ್ತದೆ ಆ ದಿಸೆಯಲ್ಲಿ ಎಲ್ಲ ಯುವಕರು ಶಿಕ್ಷಣದ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದರು ಈ ಸಮಯದಲ್ಲಿ ಗ್ರಾಮದ ಹಿರಿಯರು ಮುಖಂಡರು ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 