ಗ್ರಾ.ಪಂಅನ್ನು ಪಟ್ಟಣ ಪಂಚಾಯಿತಿ ಮಾಡಲು ಗ್ರಾಮಸ್ಥರ ಆಗ್ರಹ
Villagers demand to convert Gram Panchayat into Town Panchayat
ಯಮಕನಮರಡಿ 30: ಸ್ಥಳೀಯ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಪರಿವರ್ತನೆ ಮಾಡಬೇಕೆಂದು ಗ್ರಾಮಸ್ಥರ ಬೇಡಿಕೆಯಾಗಿದೆ. ಈಗಾಗಲೇ ಗ್ರಾಮದ ಸುತ್ತಮುತ್ತಲು ದೊಡ್ಡ ಪ್ರಮಾಣದ ವ್ಯಾಪಾರಿ ಕೇಂದ್ರ ಉದ್ಯೋಗ ಕೇಂದ್ರ ಏಕಸ್ ಕಂಪನಿ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಲೇಜುಗಳು ಮತ್ತು ಹೈಟೆಕ್ ಗ್ರಂಥಾಲಯ ಇತ್ಯಾದಿ ಮೂಲ ಸೌಕರ್ಯಗಳು ಇದ್ದು ಈ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಪರಿವರ್ತನೆ ಮಾಡಿದಲ್ಲಿ ಮತ್ತಷ್ಟು ಸದರಿ ಗ್ರಾಮವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.
ಸಮೀಪದ ಹತ್ತರಗಿ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಪಂಚಾಯಿತಿ ಸೇರಿಸಿ ಸ್ಥಳೀಯ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮಾಡಬೇಕೆಂದು ಗ್ರಾಮಸ್ಥರು ಬೋಧನೆಗಳಿಂದ ತಮ್ಮ ಬೇಡಿಕೆಯನ್ನು ಸಲ್ಲಿಸುತ್ತಿದ್ದಾರೆ ಅಲ್ಲದೆ ಸದರಿ ಗ್ರಾಮವು ವಿಧಾನಸಭಾ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು ಮೂಲತ ಈ ಗ್ರಾಮವು ಐತಿಹಾಸಿಕ ಸ್ಥಳವು ಇರುತ್ತದೆ. ಇಲ್ಲಿ ಅನೇಕ ಪುಣ್ಯಕ್ಷೇತ್ರಗಳು ಸಹ ಇರುತ್ತವೆ ಅಲ್ಲದೆ ನೇಕಾರಿಕೆ ಮೂಲ ಉದ್ಯೋಗವಿತ್ತು ತಾಲೂಕಿನಲ್ಲಿ 3ನೇ ಕೇಂದ್ರವಾಗಿ ಮುಂದುವರೆಯುವುದು ಇರುತ್ತದೆ ಗ್ರಾಮದಲ್ಲಿ ವಿವಿಧ ಸಂಸ್ಥೆಗಳು ಇದ್ದು ಅವುಗಳಿಂದ ಗ್ರಾಮಕ್ಕೆ ಸಾಕಷ್ಟು ಆದಾಯ ಬರುತ್ತಿದ್ದು ಪಕ್ಕದಲ್ಲಿಯೇ ಬೃಹತ್ ಪ್ರಮಾಣದ ವಿಮಾನಗಳ ತಯಾರಿಸುವ ಉಪಕರಣಗಳ ಕಂಪನಿ ಸಹಿತ ಇದ್ದು ಇಲ್ಲಿ ಅಪಾರ ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆಯು ಸಹಿತ ಇರುತ್ತದೆ. ಕಾರಣ ಈ ಭಾಗದ ಸಚಿವರು ಸತೀಶ್ ಅಣ್ಣ ಜಾರಕಿಹೊಳಿಯವರು ಕೂಡಲೇ ಜನರ ಬೇಡಿಕೆಯನ್ನು ಪೂರೈಸಿಕೊಡುತ್ತೀರಿ ಅಂತ ನಂಬಿರುವ ಗ್ರಾಮಸ್ಥರು.
ಈ ಗ್ರಾಮದ ಸುತ್ತಮುತ್ತಲು ಸಾಕಷ್ಟು ಒಕ್ಕಲುತನದಲ್ಲಿ ಮುಂದುವರೆದ ಕ್ಷೇತ್ರವಾಗಿದೆ. ಅಲ್ಲದೆ ಈ ಗ್ರಾಮದ ಸುಮಾರು 10000 ವಿದ್ಯಾರ್ಥಿಗಳು ಡಿಗ್ರಿ ಪಡೆದ ಯುವಕರು ಬೆಂಗಳೂರಿನಲ್ಲಿ ಹೈಟೆಕ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಆದರೆ ಈ ಗ್ರಾಮಕ್ಕೆ ಸೂಕ್ತವಾದ ಬಸ್ಸಿನ ವ್ಯವಸ್ಥೆ ಇರುವುದಿಲ್ಲ ಸದರಿ ಗ್ರಾಮ ಪಂಚಾಯಿತಿಯು ಪರಿವರ್ತನೆ, ಮಾಡಿದಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು ತನ್ನಿಂದ ತಾನೇ ಬರುತ್ತವೆ. ಕಾರಣ ಲೋಕೋಪಯೋಗಿ ಸಚಿವರು ಮುಂದಿನ ಮುಖ್ಯಮಂತ್ರಿಗಳು ಆಗುವ ಸತೀಶಣ್ಣ ಜಾರಕಿಹೊಳಿಯವರು ಕೂಡಲೇ ಪಟ್ಟಣ ಪಂಚಾಯಿತಿಗೆ ಆದೇಶ ಮಾಡಬೇಕೆಂದು ಜನರು ಆತ್ಮೀಯವಾಗಿ ವಿನಂತಿಸಿಕೊಳ್ಳುತ್ತಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 