ಕಿತ್ತುಹೋದ ರಸ್ತೆ ಡಾಂಬರೀಕರಣ ಮಾಡಲು ಗ್ರಾಮಸ್ಥರು ಒತ್ತಾಯ

ಕಿತ್ತುಹೋದ ರಸ್ತೆ ಡಾಂಬರೀಕರಣ ಮಾಡಲು ಗ್ರಾಮಸ್ಥರು ಒತ್ತಾಯ  Villagers demand asphalting of eroded road

ಲಕ್ಷ್ಮೇಶ್ವರ 28 :  ತಾಲೂಕಿನಲ್ಲಿ ಬಹಳಷ್ಟು ರಸ್ತೆಗಳ ಡಾಂಬರೀಕರಣ ಕಿತ್ತುಕೊಂಡು ಹೋಗಿ ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದು ರಸ್ತೆ ಸಂಚಾರ ಮಾಡದಷ್ಟು ಹದಗೆಟ್ಟಿ ಹೋಗಿವೆ ಹದಗೆಟ್ಟು ಹೋದ ರಸ್ತೆಯಲ್ಲಿ ವಾಹನ ಸವಾರರು ಸಂಚಾರ ಮಾಡುವಾಗ ಗುಂಡಿಯಲ್ಲಿ ಬಿದ್ದು ಬೈಕ್ ಸವಾರರು ಕೈಕಾಲು ಮುರಿದುಕೊಂಡ ಘಟನೆಗಳು ಸಹ ನಡೆದಿವೆ  ಅದರಂತೆ ತಾಲೂಕಿನ ಅಮರಾಪುರ ಗ್ರಾಮದಿಂದ ಹುಲ್ಲೂರು ನೆಲೆಗಲ್ ಸಂಪರ್ಕಿಸುವ ರಸ್ತೆ ಹಾಗೂ ಅಮರಾಪುರ ಸೂಗಿಹಾಳ ಸಂಪರ್ಕಿಸುವ ರಸ್ತೆಯ ಡಾಂಬರೀಕರಣ ಕಿತ್ತುಕೊಂಡು ಹೋಗಿ ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದು ವಾಹನ ಸವಾರರು ರೈತರು ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಹೋಗದಷ್ಟು ರಸ್ತೆ ಹದಗೆಟ್ಟಿದ್ದು ರಸ್ತೆಯ ಡಾಂಬರೀಕರಣ ಸಂಪೂರ್ಣವಾಗಿ ಕಿತ್ತುಕೊಂಡು ಹೋಗಿ ರಸ್ತೆ ಅನ್ನೋದು ಅಸ್ತಿ ಪಂಜರದಂತಾಗಿದೆ ಈ ರಸ್ತೆ ಮುಖಾಂತರ ವಾಹನ ಚಲಾಯಿಸಿಕೊಂಡು ಹೋಗುವ ವಾಹನ ಸವಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ ಇನ್ನಾದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಿತ್ತುಹೋದ ರಸ್ತೆಗೆ ಮರು ಡಾಂಬರೀಕರಣವನ್ನು ಮಾಡಿ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಅಮರಾಪುರ ಹುಲ್ಲೂರು ಗ್ರಾಮದ ಮುಖಂಡರಾದ ಕುಮಾರ ಮಾಗಡಿ ನಿಂಗಪ್ಪ ರಗಟಿ ರಾಜು ಕೆರೆಕೊಪ್ಪದ ಪರಮೇಶಗೌಡ ಪಾಟೀಲ ರಮೇಶ ಕೆರೆ ಕೊಪ್ಪದ ಬಸನಗೌಡ ಪಾಟೀಲ ಮಾದೇವಪ್ಪ ಅಕ್ಕಿ ಗುರುನಾಥ ದ್ಯಾವನೂರ ಎಂ ಎಂ ಗಾಡಗೋಳಿ ಮುತ್ತಪ್ಪ ಕಡಕೋಳ ರಾಜು ನದಾಫ ಸೇರಿದಂತೆ ಇನ್ನು ಅನೇಕ ಮುಖಂಡರು ಒತ್ತಾಯಿಸಿದ್ದಾರೆ