ಗ್ರಾಮೀಣ ಕಲಾವಿದರನ್ನು ಗುರುತಿಸಿದ ಹಳೆ ಗುಡಗನಹಟ್ಟಿ ಗ್ರಾಮದ ಮುಖಂಡರು
Village leaders of Old Gudaganahatti village recognize rural artists
ಯಮಕನಮರಡಿ 27: ಬಹುದಿನಗಳಿಂದ ಕಾಡು ಮಲ್ಲಿಗೆಯಂತೆ ಅಡಿಗಿರುವ ಕಲಾವಿದರನ್ನು ಗುರುತಿಸಲು ಹುಕ್ಕೇರಿ ತಾಲೂಕಿನ ಹಳೆ ಗುಡಗನಹಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ತಾಲೂಕ ಮಟ್ಟದ ಭಜನಾ ಕಲಾವಿದರ ಕಾರ್ಯಕ್ರಮದಲ್ಲಿ ಅಪಾರ ಕಲಾವಿದರಿಗೆ ತಮ್ಮ ಕಲಾಪ್ರದರ್ಶನವನ್ನು ನೀಡಲು ಅವಕಾಶ ಕಲ್ಪಿಸಿ ಕೊಟ್ಟಿರುವ ಹಳೆ ಗುಡ್ಡದನಹಟ್ಟಿ ಬ್ರಹ್ಮದೇವರ ದೇವಸ್ಥಾನದ ಮುಖಂಡರಿಗೆ ಧನ್ಯವಾದಗಳು ಹೇಳಬೇಕಾಗಿದೆ ಎಂದು ಹುಕ್ಕೇರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪ್ರಕಾಶ್ ಅವಲಕ್ಕಿ ಹೇಳದರು.
ದಿ 25ರಂದು ಏರಿ್ಡಸಲಾದ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಅಪಾರ ಗ್ರಾಮೀಣ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲು ಸಮರ್ಕ ಅವಕಾಶ ದೊರಕದೇ ಅವಕಾಶ ವಂಚಿತರಾಗಿ ಕಾಡಿನಲ್ಲಿ ಮಲ್ಲಿಗೆ ಹೂವು ಇದ್ದಂತೆ ಉಳಿದಂತಾಗಿದೆ ಇಂಥ ಕಲಾವಿದರನ್ನು ಸರಕಾರವು ಗುರುತಿಸಬೇಕಾಗಿದೆ ಆದರೆ ಇವರನ್ನು ಗುರ್ತಿಸುವವರಾರು ಎಂಬುದು ಕೇವಲ ಮಾತು ಮಾತಾಗಿಯೇ ಉಳಿದಿದೆ ಎಂದರು.
ಕಾರ್ಯಕ್ರಮದಲ್ಲಿ ತಮ್ಮ ಕಲಾಪ್ರದರ್ಶನ ನೀಡಿದವರಿಗೆ ಬ್ರಹ್ಮ ದೇವರು ದೇವಸ್ಥಾನ ಕಮಿಟಿಯವರು ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.
ಇಂಥ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಮಾತ್ರ ಗ್ರಾಮೀಣ ಕಲಾವಿದರು ಕತ್ತಲೆಯಿಂದ ಬೆಳಕಿಗೆ ಬರಬಹುದೆಂದು ನೊಂದ ಕಲಾವಿದರು ತಮ್ಮ ಅಳಲನ್ನು ತೋಡಿಕೊಂಡರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 