ಜನಸಾಮಾನ್ಯರ ಕುಂದು-ಕೊರತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳೇ ನನ್ನ ಕಾಯಕ

ಜನಸಾಮಾನ್ಯರ ಕುಂದು-ಕೊರತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳೇ ನನ್ನ ಕಾಯಕ Addressing the grievances of the common people and carrying out developmental works in the constitue

ಲೋಕದರ್ಶನ ವರದಿ

     ಹಾರೂಗೇರಿ 27: ಜನಸಾಮಾನ್ಯರ ಕುಂದು-ಕೊರತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳೇ ನನ್ನ ಕಾಯಕ ಎಂದು ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮ-ಣ್ಣವರ ಹೇಳಿದರು. ಕುಡಚಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶನಿವಾರ ಸುಮಾರು 5ಕೋಟಿ ರೂ. ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಕುಡಚಿ ವಿಧಾನಸಭಾ ಮತಕ್ಷೇತ್ರವೇ ನನ್ನ ಕುಟುಂಬ, ಕುಟುಂಬದ ಎಲ್ಲರ ಸಮಸ್ಯೆಗಳನ್ನು ಮನೆಮನಗನಾಗಿ ನಿರ್ವಹಿಸುವುದು ನನ್ನ ಕರ್ತವ್ಯ ಎಂದು ಹೇಳಿದರು. 

   50 ಲಕ್ಷ ರೂ. ವೆಚ್ಚದ ಹಾರೂಗೇರಿ ಪುರಸಭೆ ವ್ಯಾಪ್ತಿಯ ಪ.ಜಾ ಜನವಸತಿ ಕಾಲೋನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, 50 ಲಕ್ಷ ರೂ. ವೆಚ್ಚದಲ್ಲಿ ಡಿ.ವಾಯ್ ಕಾಲುವೆಗೆ ಸಿಸಿ ಲೈನಿಂಗ್, 50 ಲಕ್ಷ ರೂ. ವೆಚ್ಚದಲ್ಲಿ ಪಿಕಪ್‌ವೇರದಿಂದ ಹಾರೂಗೇರಿ-ಯಬರಟ್ಟಿ ರಸ್ತೆ ಡಾಂಬರೀಕರಣ, 50 ಲಕ್ಷ ರೂ. ವೆಚ್ಚದಲ್ಲಿ ಯಬರಟ್ಟಿ ಗ್ರಾಮದಲ್ಲಿ ಹಂಚು ಕಾಲುವೆ ರಸ್ತೆ ಡಾಂಬರೀಕರಣ, 1 ಕೋಟಿ ವೆಚ್ಚದಲ್ಲಿ ಸುಟ್ಟಟ್ಟಿ ಗ್ರಾಮದ ಪ.ಜಾ ಕಾಲೋನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, 1.50 ಕೋಟಿ ವೆಚ್ಚದಲ್ಲಿ ನಿಲಜಿ-ಸುಟ್ಟ-ಟ್ಟಿ 1.46 ಕಿಮೀ ರಸ್ತೆ ಸುಧಾರಣೆ, 40 ಲಕ್ಷ ರೂ ವೆಚ್ಚದಲ್ಲಿ ಬಸ್ತವಾಡ ಗ್ರಾಮದಿಂದ ಹಿಡಕಲ್ ಕೂಡು ರಸ್ತೆ ಡಾಂಬರೀಕರಣ ಮತ್ತು ಬಸ್ತವಾಡ ಗ್ರಾಮದಲ್ಲಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಶಂಕುಸ್ಥಾಪನೆಯನ್ನು ಶಾಸಕ ಮಹೇಂದ್ರ ತಮ್ಮಣ್ಣವರ ನೇರವೇರಿಸಿದರು. 

   ತಾಪಂ ಮಾಜಿ ಅಧ್ಯಕ್ಷ ರವಿಶಂಕರ ನರಗಟ್ಟಿ, ಪುರಸಭೆ ಸದಸ್ಯ ಆನಂದಗೌಡ ಪಾಟೀಲ, ಬಾಳೇಶ ಹಾಡಕಾರ, ಮಾರುತಿ ಗಲಗಲಿ, ಶಿವನಗೌಡ ಮೇಟಿ, ನಿಂಗಪ್ಪ ಕುದರಿ, ಶಫೀಕ ಕೊರಬು, ಸಿದ್ದಪ್ಪ ಕರ್ಲಚ್ಚಿ, ಉದಯ ಪಾಟೀಲ, ವಾಮನ ಹಟ್ಟಿಮನಿ, ಕಲ್ಮೇಶ್ವರ ಬಾನೆ, ಜಯವೀರ ಬಾಳೋಜಿ, ಅಜೀತ ಹೆಗಡೆ, ಮುರಾರಿ ಬಾನೆ, ಸಿದ್ದಪ್ಪ ಖಿಲಾರೆ, ಆನಂದ ಹೆಗಡೆ, ಶಂಕರ ಗಾಣಿಗೇರ ಹಾಗೂ ಮೊದಲಾದ ಗಣ್ಯರು ಉಪಸ್ಥಿತರಿದ್ದರು.