ಕಬ್ಬು ಬೆಳೆಗಾರರ ಹೋರಾಟ ಬೆಂಬಲಿಸಿ ಗ್ರಾಮದ ರೈತರಿಂದ ಧರಣಿ
Village farmers hold sit-in in support of sugarcane growers' struggle
ಮಹಾಲಿಂಗಪುರ 05: ಕಳೆದ ಹಲವು ದಿನಗಳಿಂದ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟವನ್ನು ಬೆಂಬಲಿಸಿ ಚಿಮ್ಮಡ ಗ್ರಾಮದ ರೈತರಿಂದ ಧರಣಿ, ರಸ್ತೆತಡೆ ಹಾಗೂ ಬೈಕ್ ರಾ್ಯಲಿ ನಡೆಯಿತು.
ಧರಣಿ ನಿರತ ರೈತರನ್ನುದ್ದೇಶಿಸಿ ರೈತಸಂಘದ ಮಹಾಲಿಂಗಪುರ ಘಟಕದ ಅಧ್ಯಕ್ಷ ಬಂದು ಪಕಾಲಿ ಮಾತನಾಡಿ ಸಕ್ಕರೆ ಕಾರಖಾನೆ ಮಾಲಿಕರು ಪ್ರತೀ ಟನ್ ಕಬ್ಬಿಗೆ ಕನಿಷ್ಟ ಬೆಂಬಲ ದರ 3,500 ರೂ. ನೀಡುವವರೆಗೂ ಈ ಹೋರಾಟ ಮುಂದುವರಿಯುತ್ತದೆ, ನೆರೆಯ ರಾಜ್ಯದ ರೈತರಿಗೆ ಸಿಗುತ್ತಿರುವ ಕಬ್ಬಿನ ದರ ನಮ್ಮ ರೈತರಿಗೆ ಏಕಿಲ್ಲ, ಸರಕಾರ ಕೂಡಲೆ ಮದ್ಯ ಪ್ರವೇಶಿಸಿ ನ್ಯಾಯಯುತ ಬೆಲೆ ನಿಗದಿಪಡಿಸಿ ರೈತರ ಬೆಂಬಲಕ್ಕೆ ನಿಲ್ಲಬೇಕೆಂದರು.
ಧರಣಿ, ರಸ್ತೆತಡೆ ನಂತರ ನೂರಾರು ಬೈಕ್‌ಗಳ ರಾ್ಯಲಿ ಮೂಲಕ ಗ್ರಾಮದಿಂದ ಗುರ್ಲಾಪೂರ ಕ್ರಾಸ್‌ವರೆಗೆ ತೆರಳಿ ಅಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಳ್ಳಲಾಯಿತು. ನಂತರ ನಗರದ ಚನ್ನಮ್ಮ ವೃತ್ತದಲ್ಲಿ ಕೆಲ ಸಮಯ ರಸ್ತೆ ತಡೆದು ಯುವ ಮುಖಂಡ ದೇವರೇಶ ಉಳ್ಳಾಗಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ರೈತ ಪ್ರಮುಖರಾದ ಪುಂಡಲಿಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಶಂಕರ ಬಟಕುರ್ಕಿ, ಬೀರ್ಪ ಹಳೆಮನಿ, ಆನಂದ ಕವಟಿ, ಪ್ರಕಾಶ ಪಾಟೀಲ, ಬಸವರಾಜ ಕುಂಚನೂರ, ವಿಜಯಕುಮಾರ ಪೂಜಾರಿ, ಪ್ರಭು ಮುಧೋಳ, ಮಹಾಂತೇಶ ಜಾಲಿಕಟ್ಟಿ, ಶ್ರೀಶೈಲ ರಂಗಾಪೂರ, ಘಟಿಗೆಪ್ಪ ಜಾಂಗನೂರ, ನಾಗಪ್ಪ ಆಲಕನೂರ, ಪ್ರಭು ಗೋವಿಂದಗೋಳ, ಸಲೀಮ ಸರಕಾವಸ ಸೇರಿದಂತೆ ಹಲವಾರು ಜನಪ್ರಮುಖರು ಈ ಸಂಧರ್ಬದಲ್ಲಿ ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 