ಹಳದಿ ಮಯವಾದ ಐತಿಹಾಸಿಕ ನಗರಿ ಸವದತ್ತಿಯಲ್ಲಿ ಗ್ರಾಮದೇವತೆ ಜಾತ್ರಾ ಸಂಭ್ರಮ
Village Devata Jatra festival celebrated in the yellow-tinged historical city of Savadatti
ಸವದತ್ತಿ 05: ಆರಾಧ್ಯ ದೈವ ಶ್ರೀ ಗ್ರಾಮದೇವತೆಯ ಜಾತ್ರಾ ಮಹೋತ್ಸವವು ಮಂಗಳವಾರ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು.
ಭಕ್ತರ ಪಾಲಿನ ಶಕ್ತಿ ದೇವತೆಯಾಗಿರುವ ಗ್ರಾಮದೇವತೆಯ ದರ್ಶನ ಪಡೆಯಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬಂದಿತ್ತು. ಜಾತ್ರೆಯ ಪ್ರಮುಖ ವಿಶೇಷವೆಂದರೆ ನಗರದಾದ್ಯಂತ ಕಂಡುಬಂದ ಹಳದಿ ಬಣ್ಣದ ಭಂಡಾರ. ಉಧೋ ಉಧೋ ಎಂಬ ಹರ್ಷೋದ್ಗಾರಗಳ ನಡುವೆ ಭಕ್ತರು ಪರಸ್ಪರ ಭಂಡಾರ ಎರಚುತ್ತಾ ಸಂಭ್ರಮಿಸಿದರು. ದೇವಸ್ಥಾನದ ಆವರಣದಿಂದ ಹಿಡಿದು ಪಟ್ಟಣದ ಪ್ರಮುಖ ಬೀದಿಗಳೆಲ್ಲವೂ ಭಂಡಾರದಿಂದ ಹಳದಿಮಯವಾಗಿದ್ದು, ಇಡೀ ಪಟ್ಟಣಕ್ಕೆ ಒಂದು ಹೊಸ ಕಳೆ ಬಂದಂತಿತ್ತು.ಜಾತ್ರೆಯ ಅಂಗವಾಗಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಹಾಗೂ ದೇವಿಯರಿಗೆ ಅಲಂಕಾರಗಳನ್ನು ಮಾಡಲಾಗಿತ್ತು. ಪ್ರಮುಖ ಆಕರ್ಷಣೆಯಾದ ದ್ಯಾಮವ್ವ ಹಾಗೂ ದುರ್ಗವ್ವ ದೇವಿಯರ ಅದ್ದೂರಿ ಮೆರವಣಿಗೆಯು ವಿವಿಧ ವಾದ್ಯಮೇಳಗಳು ಮತ್ತು ಭಜನಾ ಮಂಡಳಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ನಮ್ಮ ಗ್ರಾಮದೇವತೆಯ ಜಾತ್ರೆ ಎಂದರೆ ಅದು ಇಡೀ ಸವದತ್ತಿ ಜನತೆಗೆ ಒಂದು ದೊಡ್ಡ ಹಬ್ಬವಿದ್ದಂತೆ. ಇಲ್ಲಿನ ಭಂಡಾರದ ಹಳದಿ ಬಣ್ಣವು ಸಮೃದ್ಧಿ ಮತ್ತು ಮಂಗಳದ ಸಂಕೇತವಾಗಿದೆ ಎಂದರು. ಸಂತಾನ ಭಾಗ್ಯ ಬಯಸುವವರು ಹಾಗೂ ಅನಾರೋಗ್ಯದಿಂದ ಗುಣಮುಖರಾದವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಂಡಾರ ಸಮರ್ಿಸುವ ಮೂಲಕ ತಮ್ಮ ಹರಕೆ ತೀರಿಸಿದರು. ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಜಾತ್ರಾ ಕಮೀಟಿಯವರು ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರಾ ನಿಮಿತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಒಟ್ಟಾರೆಯಾಗಿ ಸವದತ್ತಿಯ ಗ್ರಾಮದೇವತೆ ಜಾತ್ರೆಯು ಭಕ್ತಿ ಮತ್ತು ಸಂಭ್ರಮದ ಸಂಗಮವಾಗಿ ಮೂಡಿಬಂದಿದೆ.
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ 