22 ರಂದು ವಿಕ್ರಮಾದಿತ್ಯ ನೌಕೆ ವೀಕ್ಷಣೆಗೆ ಮುಕ್ತ ಅವಕಾಶ

22 ರಂದು ವಿಕ್ರಮಾದಿತ್ಯ ನೌಕೆ ವೀಕ್ಷಣೆಗೆ ಮುಕ್ತ ಅವಕಾಶ 

ಕಾರವಾರ : 2019 ನೇ ಸಾಲಿನ ನೌಕಾ ಸಪ್ತಾಹ ಆಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿಸೆಂಬರ್ 22 ರಂದು ಭಾರತೀಯ ನೌಕಾ ಹಡಗು ವಿಕ್ರಮಾದಿತ್ಯ ವೀಕ್ಷಣೆಗಾಗಿ, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. 

     ವೀಕ್ಷಕರ ಅನುಕೂಲಕ್ಕಾಗಿ ಕೆಲವು ಭದ್ರತಾ ನಿಯಮಗಳು ಜಾರಿಯಲ್ಲಿದ್ದು, ಅರಗಾ ಮುಖ್ಯ ಗೇಟ್ ನಿಂದ ಮಾತ್ರ ಒಳಪ್ರವೇಶಕ್ಕೆ ಅನುಮತಿಯಿದೆ. ವೀಕ್ಷಕರು ತಮ್ಮ ಗುರುತಿನ ಚೀಟಿಗಳಾದ ಆಧಾರ್, ಮತದಾರರ ಗುರುತಿನ ಚೀಟಿ, ಸಕರ್ಾರದಿಂದ ನೀಡಿದ ಯಾವುದೇ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಕೊಂಡೊಯ್ಯತಕ್ಕದ್ದು. ನೌಕಾನೆಲೆಯ ಒಳಗೆ ಮೊಬೈಲ್ ಫೋನ್, ಕ್ಯಾಮೆರಾ, ಆಡಿಯೋ ಅಥವಾ ವಿಡಿಯೋ ರೆಕಾಡರ್ಿಂಗ್ ಸಾಧನ ಸೇರಿದಂತೇ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ನಿಲ್ಲಿಸಬೇಕು ಯಾವುದೇ ಕಾರಣಕ್ಕೂ ನೌಕಾನೆಲೆಯ ಒಳಗಡೆ ವಾಹನ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಐಎನ್ಎಸ್ ಕದಂಬ ನೌಕಾನೆಲೆಯ ಸಾರ್ವಜನಿಕ ಸಂಪಕರ್ಾಧಿಕಾರಿ ಅಜಯ್ ಕಪೂರ್ ತಿಳಿಸಿದ್ದಾರೆ. 

       ಈ ಸಂದರ್ಭದಲ್ಲಿ ವೀಕ್ಷಕರು ನೌಕಾಪಡೆಯ ಅಧಿಕಾರಿಗಳೊಂದಿಗೆ ಸಹಕರಿಸಿ ಸಪ್ತಾಹ ಆಚರಣೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾರವಾರ ನೌಕಾನೆಲೆ  ಪ್ರಕಟಣೆಯಲ್ಲಿ ತಿಳಿಸಿದೆ.