ನಿವೃತ್ತ ವೃತ್ತಿ ಶಿಕ್ಷಕ ನದಾಫ್ ಗೆ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿಯ ಗರಿ

Vikasa Ratna Rashtra Award to retired professional teacher Nadaf

ನಿವೃತ್ತ ವೃತ್ತಿ ಶಿಕ್ಷಕ ನದಾಫ್ ಗೆ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿಯ ಗರಿ  

ಕೊಪ್ಪಳ 14 : ಇಲ್ಲಿನ ಹಿರಿಯ ನಿವಾಸಿ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಲ್ಲಿ ವೃತ್ತಿ ಶಿಕ್ಷಕರಾಗಿ ಕಳೆದ ಸುಮಾರು ಮೂರು ದಶಕಗಳ ಕಾಲ ಉತ್ತಮ ಸೇವೆ ಸಲ್ಲಿಸಿ, ಇತ್ತೀಚಿಗಷ್ಟೇ ನಿವೃತ್ತಿಗೊಂಡ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ, ಎ ,ನದಾಫ್ ರವರು  ರಾಷ್ಟ್ರಮಟ್ಟದ ಭಾರತ ವಿಕಾಸ ರತ್ನ ಪ್ರಶಸ್ತಿ ಗೆ ಆಯ್ಕೆಗೊಂಡಿದ್ದಾರೆ, ಸುರುವೇ ಕಲ್ಚರಲ್ ಅಕಾಡೆಮಿ ಬೆಂಗಳೂರು ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೊಡ ಮಾಡುವ ಪ್ರತಿಷ್ಠಿತ ಪ್ರಶಸ್ತಿಯು ಇದೇ ಡಿಸೆಂಬರ್ 27ರ ಶುಕ್ರವಾರ ದಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಭವನದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಇದರಲ್ಲಿ ಕೊಪ್ಪಳದ ನಿವೃತ್ತಿ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ಎ ನದಾಫ್ ರವರ ಶಿಕ್ಷಣ ಕ್ಷೇತ್ರ ಮತ್ತು ಸಮಾಜ ಕ್ಷೇತ್ರದ ಉತ್ತಮ ಸಾಧನೆಗಾಗಿ ಸದರಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘಟಕ ರಾದ ಹಿರಿಯ ಪತ್ರಕರ್ತರು ಚಲನಚಿತ್ರ ನಿರ್ದೇಶಕರು ಆದ ರಮೇಶ್  ಸುರ್ವೇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಅಮೀರ್ ಹಮ್ಜಾ, ಎ ,ನದಾಫ್ ರವರಿಗೆ ಈ ಹಿಂದೆ ಅವರ ಉತ್ತಮ ಸೇವೆ ಮತ್ತು ಸಾಧನೆಗಳಿಗಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ ಲಭಿಸಿರುವುದನ್ನು ಪರಿಗಣಿಸಿ ಇವರನ್ನು ಈ ಬಾರಿ ರಾಷ್ಟ್ರಮಟ್ಟದ ಭಾರತ ವಿಕಾಸ ರತ್ನ ಪ್ರಶಸ್ತಿಯನ್ನು ನೀಡಲು ಸದರಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ, ಅಮೀರ್ ಹಮ್ಜಾ, ಎ, ನದಾಫ್ ಯವರು ಪ್ರಶಸ್ತಿಗಾಗಿ ಆಯ್ಕೆಗೊಂಡಿರುವುದಕ್ಕೆ ಕೊಪ್ಪಳ ಜಿಲ್ಲೆಯ ಸಮಾಜದ ವಿವಿಧ ಸಂಘಟನೆಗಳು ಶಿಕ್ಷಕ ವರ್ಗದವರು ಹಾಗೂ ವಿದ್ಯಾರ್ಥಿ ಬಳಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.