ಪರೀಕ್ಷೆಗೆ ಹಾಜರಾಗಲು ಜನಿವಾರ ಕತ್ತರಿಸಿ ಕುಕೃತ್ಯ ಖಂಡಿಸಿ ಮನವಿ

Vijaypur news-21-4

ವಿಜಯಪುರ 21: ಸಮಸ್ತ ಬ್ರಾಹ್ಮಣ ಸಮಾಜ ಹಾಗೂ ದಲಿತ, ಹಾಲುಮತ, ಕ್ಷತ್ರೀಯ, ವಿಶ್ವಕರ್ಮ, ್ಶ0ಠಜಪೂತ, ಮರಾಠ ಸಮಾಜದ ಹಲವು ಸಂಘಟನೆಗಳ ಹಾಗೂ ವಿವಿಧ ಹಿಂದು ಸಂಘಟನೆಗಳೊಂದಿಗೆ, ಜಿಲ್ಲಾ ವಕೀಲರ ಸಂಘ ಸಹಯೋಗದೊಂದಿಗೆ ದಿ.16ರಂದು ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರು ಏರಿ​‍್ಡಸಿದ ಸಿ.ಇ.ಟಿ ಪರೀಕ್ಷೆಯಲ್ಲಿ ಶಿವಮೊಗ್ಗ ಮತ್ತು ಬೀದರನಲ್ಲಿ ವಿಪ್ರ ಸಮಾಜದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವರು ಧರಿಸಿದ ಜನಿವಾರವನ್ನು ಕತ್ತರಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ ಕುಕೃತ್ಯವನ್ನು ಖಂಡಿಸಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು.  

ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷರಾದ ರಾಜೇಶ ದೇವಗಿರಿ ಅವರು ನಮ್ಮ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿ ನಮ್ಮ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತ ಕೆಲಸವನ್ನು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮಾಡಿದ್ದು, ಈ ಹೇಯಕೃತ್ಯ ಎಂದು ಆರೋಪಿಸಿ ತಪ್ಪಿತಸ್ಥತ್ತರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸರ್ಕಾರವು ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.  

ಮಾಜಿ ವಿಧಾನ ಪರಿಷತ ಸದಸ್ಯರಾದ ಅರುಣ ಶಹಾಪೂರ ಮಾತನಾಡಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇನ್ನೂವರೆಗೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ಏನೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ನೋಡಿದರೆ ಅವರ ಬೆಂಬಲ ಈ ರೀತಿ ವರ್ತಿಸಿದ ತಪ್ಪಿತಸ್ಥರನ್ನು ಬಚಾವೂ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಸರ್ಕಾರವು ಈ ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. 

ದಲಿತ ಸಮಾಜದ ಯುವಮುಖಂಡ ಪುನಿತ ಕಾಂಬಳೆ ಮಾತನಾಡಿ, ನಾವು ದಲಿತ ಸಮಾಜದವರು ಸನಾತನಿಗಳಿಗೆ ಎಲ್ಲಿಯೂ ಅನ್ಯಾಯವಾದರು ನಾವು ಅವರ ಬೆಂಬಲಕ್ಕೆ ನಿಲ್ಲುತ್ತವೆ ಎಂದರು. 

ಶ್ರೀ ರಾಮನವಮಿ ಉತ್ಸವ ಸಮಿತಿಯ ಅಧ್ಯಕ್ಷ ಉಮೇಶ ವಂದಾಲ ಅವರು ಮಾತನಾಡಿ, ಬ್ರಾಹ್ಮಣ ಸಮಾಜ ಯಾವತ್ತೂ ಸಹಿಷ್ಣರು ಶಿವಮೊಗ್ಗ ಹಾಗೂ ಬೀದರದಲ್ಲಿ ನಡೆದ ಜನಿವಾರ ತೆಗೆಸುವಂತಹ ಕೆಲಸ ನಾನು ಖಂಡಿಸುತ್ತೇನೆ. ಮುಂದೆಂದು ಇಂತಹ ಅಪರಾಧಗಳು ನಡೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  

ಈ ಸಂದರ್ಭದಲ್ಲಿ ನೀಲಕಂಠ ಕಂದಗಲ, ವಿಜಯ ಚವ್ಹಾಣ, ರಾಹುಲ ಜಾಧವ, ಶ್ರೀಕಾಂತ ಕುಂದನಗಾರ, ಸೋಮನಾಥ ಕಳ್ಳಿಮನಿ, ಅಡಿವೆಪ್ಪ ಸಾಲಗಲ್ಲ, ಕೃಷ್ಣಭಟ ಗಲಗಲಿ, ಶ್ರೀಹರಿ ಗೊಳಸಂಗಿ, ನಾಗರಾಜ ಲಂಬು, ಲಕ್ಷ್ಮಿಕಾಂತ ಕುಲಕರ್ಣಿ, ವೆಂಕಟೇಶ ಜೊಶಿ, ದತ್ತಾ ಕುಲಕರ್ಣಿ, ಗಿರಿಶ ಕುಲಕರ್ಣಿ, ವಕೀಲರಾದ ಎಸ್‌.ಎಂ. ಸೋಲ್ಲಾಪಟ್ಟಿ, ಸಂಜೀವ ಜಹಾಗೀರದಾರ, ಎಸ್‌.ವಿ. ಜಹಾಗೀರದಾರ, ಆರ್‌.ಎಂ. ಕುಲಕರ್ಣಿ, ಬಿಂದುಮಾಧವ ಕಾಸನೀಸ, ಭೀಮರಾಯ ಜಿಗಜಿಣಗಿ, ರೂಪಸಿಂಗ ಓಲೇಕಾರ, ಪ್ರದೀಪ ಸೋನಾರ, ಪ್ರಭಾಕರ ಭೋಸಲೆ, ಎನ್‌.ವಿ. ಕುಲಕರ್ಣಿ, ಗೋವಿಂದ ಜೋಶಿ, ವಿಜಯ ಜೋಶಿ, ದತ್ತಾತ್ರೇಯ ಜೋಶಿ, ರಮೇಶ ಕುಲಕರ್ಣಿ, ಸುದೀರ ಕುಲಕರ್ಣಿ,  ನರಹರಿ ಆಚಾರ ಮುತ್ತಗಿ, ಶ್ರೀಶಾಚಾರ್ಯ ಸುಳಿಭಾವಿ, ಭರತ ಕುಲಕರ್ಣಿ, ಚೈತ್ರಾ ಗೋಠೆಕರ, ಕೀರ್ತಿ ಕುಲಕರ್ಣಿ, ಸುಜಾತ ಕುಲಕರ್ಣಿ, ರಾಧ ಕುಲಕರ್ಣಿ, ರಾಜು ಹಜೇರಿ, ಪ್ರಭಾಕರ ಭೋಸಲೆ, ಸಂದೀಪ ಅರ್ಜುಣಗಿ, ಪವನ ಕುಲಕರ್ಣಿ, ಅಜೀತ ಕುಲಕರ್ಣಿ, ಭಾಗ್ಯಶ್ರೀ ಕಟ್ಟಿ, ಆರ್‌.ಬಿ. ಕುಲಕರ್ಣಿ, ಕಿರಣ ಕುಲಕರ್ಣಿ,  ಮುಂತಾದವರು ಉಪಸ್ಥಿತರಿದ್ದರು.