ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರ: ಹಾಸಿಂಪೀರ ವಾಲೀಕಾರ.
ದೇವರಹಿಪ್ಪರಗಿ 19: ಕನ್ನಡ ಸಾಹಿತ್ಯ ಲೋಕ ಅದರಲ್ಲೂ ಮಕ್ಕಳ ಸಾಹಿತ್ಯ ಲೋಕಕ್ಕೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರವಾಗಿದೆ.ಶಂ. ಗು.ಬಿರಾದಾರ, ಸಿಸು ಸಂಗಮೇಶ, ಕಂಚಾಣಿ ಶರಣಪ್ಪ, ಚಿಂತಾಮಣಿ, ಪ.ಗು. ಸಿದ್ದಾಪುರ,ಮುಂತಾದವರು ಮಕ್ಕಳ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿದ್ದಾರೆ. ಅಂತಹವರ ಸಾಲಿನಲ್ಲಿ ಮಕ್ಕಳ ಸಾಹಿತಿಗಳಾದ ಹ.ಮ. ಪೂಜಾರ ಮತ್ತು ಎಸ್. ಎಸ್.ಸಾತಿಹಾಳ ಸೇರಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷರಾದ ಹಾಸಿಂಪೀರ ವಾಲೀಕಾರ ಹೇಳಿದರು. ಪಟ್ಟಣದ ಬಿ.ಎಲ್.ಡಿ.ಈ ಸಂಸ್ಥೆಯ ಎ.ಬಿ.ಸಾಲಕ್ಕಿ ಪ.ಪೂ ಕಾಲೇಜಿನ ಸಭಾಭವನದಲ್ಲಿ ನಡೆದ ಸಿಂದಗಿ ಯ ವಿದ್ಯಾಚೇತನ ಹಾಗೂ ವಿಶ್ವಚೇತನ ಪ್ರಕಾಶನ ಮತ್ತು ದೇವರಹಿಪ್ಪರಗಿಯ ಬಿ. ಎಲ್. ಡಿ. ಈ ಸಂಸ್ಥೆಯ ಸಹಯೋಗದಲ್ಲಿ ನಡೆದ ಹ.ಮ. ಪೂಜಾರ ಅವರ "ನೀನು ನನಗೆ ಬೇಕು "ಹಾಗೂ ಎಸ್.ಎಸ್. ಸಾತಿಹಾಳ ಅವರ "ಅಜ್ಜಿಯ ಕೌದಿ "ಕೃತಿಗಳ ಲೋಕಾರೆ್ಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಿಂದಗಿಯ ಎಚ್.ಜಿ.ಕಾಲೇಜನ ಪ್ರಾಚಾರ್ಯರಾದ ಪ್ರೊ.ಎ.ಆರ್. ಹೆಗ್ಗನದೊಡ್ಡಿ ಅವರು ಹ.ಮ.ಪೂಜಾರ ಅವರ "ನನಗೆ ನೀನು ಬೇಕು "ಕೃತಿ ಪರಿಚಯ ಮಾಡಿ ಮಕ್ಕಳು ಕಲಿಯಲೇ ಬೇಕಾದ ಒಳ್ಳೆಯ ಮೌಲ್ಯಯುತ ಕತೆ ಗಳು ಇದರಲ್ಲಿವೆ. ಈ ಇಳಿ ವಯಸ್ಸಿನಲ್ಲೂ ಅವರ ಸಾಹಿತ್ಯದ ಹವ್ಯಾಸ ಶ್ಲಾಘನೀಯವಾಗಿದೆ ಎಂದರು. ನಂತರ ಸಿಂದಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜೆ. ಎಸ್. ಅಲ್ದಿಮಠ ಶಿಕ್ಷಕ ಸಾಹಿತಿ ಎಸ್.ಎಸ್. ಸಾತಿಹಾಳ ಅವರ "ಅಜ್ಜಿಯ ಕೌದಿ "ಕೃತಿಯನ್ನು ಪರಿಚಯಿಸುತ್ತಾ ಸಾತಿಹಾಳ ರ ಈ ಕೃತಿಯಲ್ಲಿ ನಾಡು, ನುಡಿ, ನೆಲ, ಜಲ, ಪರಿಸರೇ್ರಮ, ದೇಶಭಕ್ತಿ ಎಲ್ಲವೂ ಈ ಸಂಕಲನದಲ್ಲಿ ಮಡುಗಟ್ಟಿವೆ ಎಂದರು. ಎಲ್ಲ ಕವಿತೆಗಳು ತಾಳ, ಲಯ, ಗೀತೆಯಿಂದ ಮಕ್ಕಳು ಹಾಡಿ ಕುಣಿಯಬಹುದಾಗಿದೆ . ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಎಸ್. ಎನ್. ಬಸವರಡ್ಡಿ , ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್. ವಾಲೀಕಾರ, ತಾಲೂಕಾ ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿದರು. ಸ್ಥಳೀಯ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ವಿಜಯಲಕ್ಷ್ಮಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಾದ ಪಿ.ಸಿ.ತಳಕೇರಿ, ಸಂಗಪ್ಪ ತಡವಲ್,ಬಂದೆಪ್ಪಗೌಡ ಬಿರಾದಾರ, ಬಿ.ಸಿ.ಹಿರೇಮಠ, ಉಪ ಪ್ರಾಚಾರ್ಯ ವಿ.ಎಂ. ಪಾಟೀ , ಬಿ.ಎಸ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಸಾಹಿತಿ ಎಸ್. ಎಸ್.ಸಾತಿಹಾಳ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕ ಎಸ್. ಎಸ್. ಸಿಂದಗಿ ನಿರೂಪಿಸಿದರು.