ಅ.16ರಂದು ವಿಜಯಪುರ ಬಂದ್, ಬೃಹತ್ ಪ್ರತಿಭಟನಾ ಮೆರವಣಿಗೆ
Vijayapura bandh, massive protest march on October 16
ಲೋಕದರ್ಶನ ವರದಿ
ಅ.16ರಂದು ವಿಜಯಪುರ ಬಂದ್, ಬೃಹತ್ ಪ್ರತಿಭಟನಾ ಮೆರವಣಿಗೆ
ಸಿಂದಗಿ 13: ಇದು ವ್ಯಕ್ತಿಯ ಮೇಲೆ ಆದ ಪ್ರಹಾರ ಎನ್ನುವುದಕ್ಕಿಂತ ಅಂಬೇಡ್ಕರ್ ಅವರ ಮೇಲಾದ ನೇರ ಪ್ರಹಾರ. ಘಟನೆ ನಡೆದು 9ಗಂಟೆ ನಂತರ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದನ್ನು ಹೊರತುಪಡಿಸಿ ಯಾವೊಬ್ಬ ಸಂಸದರು, ರಾಜಕೀಯ ನಾಯಕರು ಖಂಡಿಸದೇ ಇರುವುದು ದುರದೃಷ್ಟಕರ ಎಂದು ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ವಿಷಾದ ವ್ಯಕ್ತಪಡಿಸಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಘಟನೆಯನ್ನು ಖಂಡಿಸಿ ಅ.16ರಂದು ವಿಜಯಪುರ ಬಂದ್ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ವಿಜಯಪುರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಸಂಘಟನೆಗಳು ಸಹಕಾರ ನೀಡಬೇಕು. ಸಂವಿಧಾನದ ಅತ್ಯಂತ ಶ್ರೇಷ್ಠ ಅಂಗಗಳಲ್ಲಿ ನ್ಯಾಯಾಂಗವು ಒಂದು. ನ್ಯಾಯಾಲಯವನ್ನು ದೇವಾಲಯವೆಂದು, ನ್ಯಾಯಾಧೀಶರನ್ನು ದೇವರೆಂದು ಪೂಜಿಸಲಾಗುತ್ತದೆ. ಇಂತಹ ಪವಿತ್ರ ಸ್ಥಾನ ಮತ್ತು ವ್ಯಕ್ತಿಯ ಮೇಲೆ ಅವಮಾನಕಾರಿಯಾಗಿ ಶೂ ಎಸೆದದ್ದು ಖಂಡನಾರ್ಹ. ಅದು ಕೇವಲ ವ್ಯಕ್ತಿಗತ ಅವಮಾನವಲ್ಲದೇ ಸಂವಿಧಾನದ ಮೇಲೆ ಮಾಡಿದ ಪ್ರಹಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡರಾದ ರವಿ ಹೋಳಿ, ಧರ್ಮಣ್ಣ ಯಂಟಮಾನ, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ತಾಲೂಕಾಧ್ಯಕ್ಷ ಸಲೀಂ ಮರ್ತೂರ ಮಾತನಾಡಿ, ಭಾರತ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಪ್ರಭಲವಾಗಿದ್ದರೂ ಸಹ ಇಂತಹ ವ್ಯವಸ್ಥೆಯ ವಿರುದ್ಧ ಜ್ಯಾತ್ಯಾತೀತ, ಪಕ್ಷಾತೀತ ಪ್ರತಿಭಟನೆ ನಡೆಯದೇ ಇರುವುದು ವಿಷಾದನೀಯ. ಇದಕ್ಕೆ ಎಲ್ಲ ಪ್ರಗತಿಪರ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಒಂದುಗೂಡಿ ಇಂತಹ ಘಟನೆಗಳು ಮತ್ತೇ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 