ವಿಜಯಪುರ: ಯುವಜನತೆ ದೇಶದ ಆಸ್ತಿ: ಯೋಗೇಶ್ವರಿ ಮಾತಾ

ಲೋಕದರ್ಶನ ವರದಿ

ವಿಜಯಪುರ 11: ಯುವಜನತೆ ದೇಶದ ಆಸ್ತಿ. ಯುವಕರು ತಮ್ಮ ಜವಾಬ್ದಾರಿ ಅರಿತುಕೊಂಡು ನಡೆದರೆ ಈ ಸಮೃದ್ಧ ನಾಡು ಕಟ್ಟಬಲ್ಲರು. ಸಂಘಟನೆ ಮೂಲಕ ಯುವಜನತೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದು ಬುರಣಾಪೂರ ಆರೂಢ ಆಶ್ರಮದ ಯೋಗೇಶ್ವರಿ ಮಾತಾ ಹೇಳಿದರು.

ನಗರದ ಕೆ.ಸಿ. ನಗರ, ಹನುಮಾನ ಮಂದಿರದಲ್ಲಿ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ನ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ರಾಜ್ಯ ಯುವರತ್ನ ಪ್ರಶಸ್ತಿ ಮತ್ತು ಜಿಲ್ಲಾ ಸದ್ಭೂಷಣ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು, ಇಂದಿನ ಯುವಕರು ನಾಳಿನ ನಾಡು ಕಟ್ಟುವ ಇಟ್ಟಿಗೆಗಳಾಬೇಕು. ಸ್ವಾಮಿ ವಿವೇಕಾನಂದರ ಆದರ್ಶ ಪ್ರತಿ ಯುವಕರಲ್ಲೂ ಮನೆ ಮಾಡಿದಾಗ ಯಶಸ್ವಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಮಾತನಾಡಿ, ದೇಶದ ನಿಜವಾದ ಸಂಪತ್ತು ಯುವ ಸಂಪತ್ತು ಇದನ್ನು ಯಾರು ಹಾಳು ಮಾಡಿಕೊಳ್ಳಬಾರದು ಎಂದರು

ಮುಖ್ಯ ಅತಿಥಿಗಳಾಗಿ ಮಾತನಾಡಿದ ವೈದ್ಯ ಸಾಹಿತಿ ಡಾ. ರೇಖಾ ಪಾಟೀಲ ಅವರು ಸಂಘಟನೆ ಭಾರತದ ಅಭಿವೃದ್ದಿಗೆ ಪೂರಕವಾಗಬೇಕು. ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಿದಾಗ ಮಾತ್ರ ಸಂಘಟನೆಗಳಿಗೆ ಬೆಲೆ ಬರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಕಿರಣ ಪವಾರ, ಡಾ.ದಯಾನಂದ ಜಿ.ಜುಗತಿ, ಸಂಗಮೇಶ ಚೂರಿ (ಪತ್ರಿಕಾ ಮಾಧ್ಯಮ) ರುದ್ರಪ್ಪ ಆಸಂಗಿ (ಪತ್ರಿಕಾ ಮಾಧ್ಯಮ) ಡಾ. ಬಾಬು ರಾಜೇಂದ್ರ ನಾಯಕ (ವೈದ್ಯಕೀಯ) ಡಾ. ಸುರೇಶ ಕಾಗಲಕರರೆಡ್ಡಿ (ವೈದ್ಯಕೀಯ) ಮನೋಹರ ಎಸ್. ಇನಾಮದಾರ (ಸರಕಾರಿ ಸೇವೆ) ರವೀಂದ್ರ ಮೆಂಡೆಗಾರ (ನಾಟಕ) ಸಂಗಪ್ಪ ಈ. ಮಾದನಶೆಟ್ಟಿ (ನಾಟಕ) ಶ್ರೀಮತಿ ಶಶಿಕಲಾ ಕುಲ್ಲಳ್ಳಿ (ಸಂಗೀತ) ಶರಣು ಬಸ್ತಾಳ (ಸಂಗೀತ) ಇಂದುಮತಿ ಶ. ಲಮಾಣಿ (ಸಾಹಿತ್ಯ) ನಂದಾ ಎಸ್. ಕೊಟ್ಯಾಳ (ಕೃಷಿ) ಸಿದ್ದು ಬಾಲಗೊಂಡ (ಕೃಷಿ) ಸತೀಶ ಗ. ನಾಗಠಾಣ (ಪರಿಸರ) ರಾಹುಲ ಗಿ. ಕುಬಕಡ್ಡಿ (ಸಮಾಜಸೇವೆ) ಬಂಡೆಪ್ಪ ತೇಲಿ (ಸಮಾಜಸೇವೆ) ಪ್ರಕಾಶ ಮುಂಜಿ (ಸಮಾಜಸೇವೆ) ಇವರನ್ನು ಸನ್ಮಾನಿಸಲಾಯಿತು. 

ಯುವ ಮುಖಂಡ ಸಂತೋಷಕುಮಾರ ಎಸ್. ನಿಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎಸ್. ಕೊಳಮಲಿ ವಾಷರ್ಿಕೋತ್ಸವದ ವರದಿ ಓದಿ ಹೇಳಿದರು. ವೇದಿಕೆಯ ಮೇಲೆ ರವಿ ಖಾನಾಪೂರ, ಭೀಮಸೇನ ಕೊಕರೆ, ಉಮೇಶ ವಂದಾಲ, ಘನಶಾಮ ತೋಶ್ನಿವಾಲ, ಡಾ. ಕಿರಣ ಓಸ್ವಾಲ್, ರವೀಂದ್ರ ಬಿಜ್ಜರಗಿ, ಸುನೀಲ ಜೈನಾಪೂರ ಮುಂತಾದವರು ಉಪಸ್ಥಿತರಿದ್ದರು. 

ಈಶ್ವರ ಉಮರಾಣ ಪ್ರಾಥರ್ಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಆರ್.ಎಸ್.ಪಟ್ಟಣಶೆಟ್ಟಿ ನಿರೂಪಿಸಿದರು. ಶಿವಾನಂದ ಮಾಳಗೊಂಡ ವಂದಿಸಿದರು. 

ಅಮರೇಶ ಸಾಲಳ್ಳಿ, ಕುಮಾರ ಡಮಾಗಾರ, ರವಿ ಪವಾರ, ಸಂಜು ಹೂಗಾರ, ಸಚೀನ ಹೂಗಾರ, ಬೀರು ಗಾಡವೆ, ಮಂಜುನಾಥ ಸಿಂಗೆ, ಸಂತೋಷ ನಿಂಬರಗಿ, ಅವಿನಾಶ ಕೋಳಿ, ಪ್ರಮೋದ ರಾಜರತ್ನ, ರವಿ ಕಾಖಂಡಕಿ, ಯಮನೂರ ಅರಬಿ, ಸುನೀಲ ಬನಸೊಡೆ, ಸಂತೋಷ ಮುಚ್ಚಂಡಿ, ಸಂತೋಷ ಹಾಲಳ್ಳಿ, ಸತೀಶ ಆಹೇರಿ, ಸಿದ್ದು ಹಿರೇಮಠ  ಮುಂತಾದವರು ಕಾರ್ಯಜಕ್ರಮದಲ್ಲಿ ಪಾಲ್ಗೊಂಡಿದ್ದರು.