ವಿಜಯಪುರ: ರೈಲು ನಿಲ್ದಾಣದ ಎದುರು ವಿಕಲಚೇತನರ ಧರಣಿ

ಲೋಕದರ್ಶನ ವರದಿ

ವಿಜಯಪುರ 21: ಗದಗ-ಬೆಟಗೇರಿ ರೈಲ್ವೆ ಹೋರಾಟ ಸಮಿತಿ ವತಿಯಿಂದ ವಿಜಯಪುರ ರೈಲು ನಿಲ್ದಾಣ ಎದುರುಗಡೆ ಹಲವಾರು ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ಒಂದು ದಿನದ ಸಾಂಕೇತಿಕ ಧರಣಿಗೆ ಕರ್ನಾಟಕ ರಾಜ್ಯ ವಿಕಲಚೇತನರ ಹೋರಾಟ ಸಮಿತಿಯ ಪದಾಧಿಕಾರಿಗಳು ಬೆಂಬಲ ನೀಡಿದರು. ರೈಲು ನಿಲ್ದಾಣದಲ್ಲಿ ಮತ್ತು ರೈಲಿನಲ್ಲಿ ವಿಕಲಚೇತನರಿಗೆ ಆಗುವ ತೊಂದರೆಗಳು, ಮತ್ತು ಅನಾನುಕೂಲತೆಗಳನ್ನು ಸರಿಪಡಿಸಲು ಒತ್ತಾಯಿಸಿ ಮತ್ತು ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿ ಸಾಂಕೇತಿಕ ಧರಣಿ ನಡೆಸಿ ರೈಲ್ವೆ ನಿಲ್ದಾಣದ ಅಧೀಕ್ಷಕರ ಮೂಲಕ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಗೆ ಮನವಿ ಸಲ್ಲಿಸಿದರು. 

ಈ ಸಂಧರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಭೀಮನಗೌಡ.ಬಿ.ಪಾಟೀಲ(ಸಾಸನೂರ, ಪದಾಧಿಕಾರಿಗಳಾದ ಸುರೇಶ ಚವ್ಹಾಣ, ಸಂತೋಷ ಬೊಮ್ಮನಳ್ಳಿ, ಪರಶುರಾಮ ಗಾಯಕವಾಡ, ದಸ್ತಗೀರಬಾಷಾ ಉಪ್ಪಲದಿನ್ನಿ, ನಿಮಿಶ ಆಚಾರ್ಯ, ಮೈನು ಪಡೇಕನೂರ ಮತ್ತೀತರರು ಉಪಸ್ಥಿತರಿದ್ದರು.