ಲೋಕದರ್ಶನ ವರದಿ
ವಿಜಯಪುರ 01: ವಿಶ್ವದಲ್ಲಿಯೇ ಭಾರತವು ಒಂದು ವಿಶಿಷ್ಠ ಪರಂಪರೆ ಮತ್ತು ಐತಿಹಾಸಿಕ ಹಿನ್ನೆಲೆ, ಕಲೆ, ವಾಸ್ತುಶಿಲ್ಪ, ಸ್ಮಾರಕಗಳನ್ನು ಹೊಂದಿದ ದೇಶವಾಗಿದೆ. ಹೀಗಾಗಿ ಇಂದು ಪ್ರವಾಸೋದ್ಯಮವು ಸೇವಾ ರಂಗದಲ್ಲಿ ಅತಿ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಒಂದು ದೊಡ್ಡ ವಲಯವಾಗಿದೆ. ಆದ್ದರಿಂದ ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಹಾಗೂ ಒಟ್ಟು ದೇಶೀಯ ಉತ್ಪನ್ನದಲ್ಲಿ ಹೆಚ್ಚಿನ ಆದಾಯ ತಂದು ಕೊಡುವ ಸೇವೆಯಾಗಿದೆ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.
ಅನಂತರಾವ್ ಚೋಪಟೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು, ಬೋರ, ಜಿಲ್ಲಾ: ಪುಣೆ (ಮಹಾರಾಷ್ಟ್ರ) ಇಲ್ಲಿ ಜರುಗಿದ "ಭಾರತದ ಅರ್ಥವ್ಯವಸ್ಥೆಯಲ್ಲಿ ಪ್ರವಾಸೋದ್ಯಮದ ಪಾತ್ರ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕೀರಣದಲ್ಲಿ " ರಾಷ್ಟ್ರದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಕ್ಷೇತ್ರದ ಪರಿಣಾಮ" ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಪ್ರವಾಸೋದ್ಯಮವು ರಾಷ್ಟ್ರದ ಆರ್ಥಿಕ ಪ್ರಗತಿಯಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡುವದರ ಜೊತೆಗೆ ಪ್ರವಾಸೋದ್ಯೋಮದ ಸ್ಥಳಗಳ ಸುತ್ತಮುತ್ತಲಿನ ಸಮುದಾಯಕ್ಕೆ ವಿಫುಲವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಇದರಿಂದ ವಿದೇಶ ಪ್ರವಾಸಿಗರು ದೇಶದಲ್ಲಿ ವಿವಿಧ ಪ್ರವಾಸ ಸ್ಥಳಗಳು, ಸ್ಮಾರಕ, ಪ್ರಾಚ್ಯವಸ್ತು ಮತ್ತು ದೇವಸ್ಥಾನ ಹಾಗೂ ಮಂದಿರಗಳಿಗೆ ಬರುವದರಿಂದ ದೇಶಕ್ಕೆ ವಿದೇಶಿ ವಿನಿಮಯವು ಸಾಕಷ್ಟು ಪ್ರಮಾಣದಲ್ಲಿ ಆದಾಯದ ರೂಪದಲ್ಲಿ ಸಂಗ್ರಹವಾಗುತ್ತಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಅತಿ ಅಗತ್ಯವಾದ ಮೂಲಭೂತ ಸೌಲಭ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳು ಕೈಗೊಂಡು ಹೆಚ್ಚಿನ ಪ್ರವಾಸಿಗರನ್ನು ಆಕಷರ್ಿಸುವ ಒಂದು ಸೇವಾ ವಲಯವಾಗಿ ಬೆಳವಣಿಗೆಯನ್ನು ಸಾಧಿಸುತ್ತಿದೆ ಎಂದರು.
ಅಷ್ಟೇ ಅಲ್ಲದೇ ಪ್ರವಾಸೋದ್ಯಮದಿಂದ ಇತರ ಉತ್ಪಾದನೆ ಮತ್ತು ಸೇವಾ ವಲಯಗಳಳು ಬೃಹತ್ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸುತ್ತಾ ಬಹುಪರಿಣಾಮಕಾರಿಯಾದ ಹಾಗೂ ಆಥರ್ಿಕ ಪ್ರಗತಿಗೆ ಪೂರಕವಾಗಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಎಂಬ ಘೋಷಣೆಯಡಿಯಲ್ಲಿ ಪ್ರವಾಸೋದ್ಯಮ ರಂಗದಲ್ಲಿ ಜಾಹೀರಾತು, ಪ್ರಚಾರ ಕೈಗೊಂಡು ಅನೇಕ ಅಭಿವೃದ್ಧಿ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶದ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಸ್ಮಾರಕಗಳು ಉಳಿವಿಗಾಗಿ ಮತ್ತು ಅವೆಲ್ಲವುಗಳ ಪ್ರಯೋಜನ, ಮಹತ್ವವು ಮುಂದಿನ ಜನಾಂಗಕ್ಕೆ ದೊರಕಲಿ ಎಂಬ ಮಹೋನ್ನತವಾದ ಉದ್ದೇಶದಿಂದ ಪ್ರವಾಸ ಸ್ಥಾನಗಳಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ರಸ್ತೆ ನಿರ್ಮಾಣ, ವಸತಿ ವ್ಯವಸ್ಥೆ ಹೋಟೇಲ್ ಉದ್ದಿಮೆಗಳು ಇನ್ನಷ್ಟು ಬೆಳೆಯಲು ಸೂಕ್ತ ಪರಿಸರವನ್ನು ಒದಗಿಸಿಕೊಡುತ್ತಿದೆ. ಹಾಗೂ ಅವೆಲ್ಲ ಐತಿಹಾಸಿಕ ಸ್ಮಾರಕಗಳ ಜೀರ್ಣೋದ್ಧಾರ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ವಿಶ್ವದಲ್ಲಿ ಭಾರತದಲ್ಲಿರುವ ಪ್ರವಾಸ ಸ್ಥಳಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಆದ್ದರಿಂದ ಪ್ರವಾಸೋದ್ಯಮ ಸೇವಾ ರಂಗವು ಇಂದು ಒಟ್ಟು 6.23% ರಷ್ಟು ಜನರಿಗೆ ಉದ್ಯೋಗಾವಕಾಶ ಹಾಗೂ 8.1% ರಷ್ಟು ಪ್ರಮಾಣದಲ್ಲಿ ದೇಶೀಯ ಆಥರ್ಿಕತೆಯಲ್ಲಿ ಪಾಲು ಹೊಂದುತ್ತಾ ಗಣನೀಯವಾದ ಆದಾಯ ತರುವ ಒಂದು ಸೇವಾ ಉದ್ದಿಮೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರೊ. ಎಂ.ಎಸ್.ಖೊದ್ನಾಪೂರ ಇವರನ್ನು ಸನ್ಮಾನಿಸಲಾಯಿತು.
ವಿಚಾರಸಂಕೀರಣದಲ್ಲಿ ಡಾ.ಮಹೇಶ ಆಬಾಳೆ, ಡಾ.ಬಾಳಾಸಾಹೇಬ ಸಾವಂತ, ಡಾ.ಎ.ಆರ್.ಕುಲಕರ್ಣಿ, ಪ್ರಾಂಶುಪಾಲ ಡಾ.ಪ್ರಸನ್ನಕುಮಾರ ದೇಶಮುಖ, ವಿಚಾರಸಂಕೀರಣದ ಸಂಚಾಲಕ ಡಾ.ಎಲ್.ಎ.ಆವಗಡೆ, ಡಾ.ಎ.ಆರ್.ಮಾನೆ, ಡಾ.ವ್ಹಿ.ಎಸ್.ಆವಡೆ ಸಹ ವೇದಿಕೆಯ ಮೇಲಿದ್ದರು.