ಲೋಕದರ್ಶನ ವರದಿ
ವಿಜಯಪುರ 01: ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಶತಮಾನವೆಂದರೆ ಅದು 12ನೇ ಶತಮಾನವಾಗಿದೆ. ಆಗ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ಮಹಾನ್ ಶರಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ನಗರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಭವಿಷ್ಯವನ್ನು ಬೆಳಗಲು ಸನ್ನದ್ಧರಾಗುವ ಇಂದಿನ ಮಕ್ಕಳು ಉತ್ತಮ ನಾಗರಿಕರಾಗಿ ಬಾಳಬೇಕಾದರೆ ಶರಣರ-ಸಂತರ, ವೀರಯೋಧರ ಹಾಗೂ ಸ್ವಾತಂತ್ರ ಯೋಧರ ತತ್ವಾದರ್ಶಗಳನ್ನು ತಿಳಿದುಕೊಳ್ಳಬೇಕು, ಎಂತಹ ಮಹಾನ ಚೇತನರ ವಿಚಾರಧಾರೆಗಳನ್ನು ತಿಳಿಸುವ ಉದ್ದೇಶವೇ ಜಯಂತಿಗಳ ಆಚರಣೆಗಳದ್ದಾಗಿದೆ ಎಂದು ಅವರು ವಿದ್ಯಾಥರ್ಿಗಳಿಗೆ ತಿಳಿಸಿದರು.
ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂದು ನುಡಿದಿರುವ ಶರಣರು ಅಂತಹ ನುಡಿಗಳಿಂದಲೆ ಅವರು ಅತ್ಯಂತ ದೊಡ್ಡವರಾದರು. ಜಾತಿ, ಮತ, ಪಂಥ, ಮೇಲು-ಕೀಳು ಎನ್ನದೆ ಕಾಯಕ ಮಾಡಿದವರು. ಇಂತಹ ಶರಣರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು ಎಂದು ತಿಳಿಸಿದರು.
ಮಡಿವಾಳರು ಕಾಯಕದಲ್ಲಿ ಕೈಲಾಸವನ್ನು ಕಂಡವರು, ಪ್ರಸ್ತುತ ದಿನದಲ್ಲಿ ತಂದೆ ತಾಯಂದಿರು ಮಕ್ಕಳಿಗೆ ಕಾಯಕದ ಅರಿವನ್ನು ಮೂಡಿಸಬೇಕು. ಆದರೇ ಅವರಲ್ಲಿ ಆಲಸ್ಯತನವನ್ನು ಬೇಳೆಸಬಾರದು ಆಗ ಮಾತ್ರ ಮುಪ್ಪಿನ ವಯಸ್ಸಿನಲ್ಲಿ ಮಕ್ಕಳು ಸಹಾಯಕ್ಕೆ ಬರುತ್ತಾರೆ ಎಂದು ಅವರು ಹೇಳಿದರು.
ಪ್ರತಿ ಮನೆಯ ಪ್ರತಿಯೊಬ್ಬ ವ್ಯಕ್ತಿಯು ದುಡಿದಾಗ ಮಾತ್ರ ಕುಟುಂಬದ ಜೊತೆಗೆ ದೇಶದ ಆರ್ಥಿಕ ಅಭಿವೃದ್ದಿ ವೃದ್ಧಿಸಲು ಸಾಧ್ಯ ದುಡಿಮೆಯಲ್ಲಿ ಶೇ.5 ರಷ್ಟು ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಾಗೂ ಸಮಾಜದ ಸೇವೆ ಮಾಡಬೇಕು. ಕಾಯಕದಿಂದ ಶರೀರ ಸ್ವಚ್ಛವಾದರೆ ದೇವರ ನಾಮಸ್ಮರಣೆಯಿಂದ ಮನಸ್ಸು ಶುಚಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಸಿ ನಾಗಠಾಣ ಮಾತನಾಡಿದರು. ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ದೈಹಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಶಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಬಾಬು ಬಳ್ಳಾರಿ, ಪ್ರಭು ಮಡಿವಾಳರ, ಸಾಯಬಣ್ಣ ಮಡಿವಾಳರ, ಸುಮಂಗಲಾ ಕೋಟಿ, ಎಸ್.ವಿ ಕನ್ನೂಳ್ಳಿ, ರಂಗಪ್ದ ಬಾಗಲಕೋಟ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸೃತಿ ಇಲಾಖೆಯ ಸಹಾಯಕ ನಿದರ್ೇಶಕ ಮಹೇಶ ಪೋತದಾರ ಸ್ವಾಗತಿಸಿದರು, ಎಚ್.ಎ ಮಮದಾಪೂರ ನಿರೂಪಿಸಿ ವಂದಿಸಿದರು. ವರ್ಷಿಣಿ, ಮಾನಸಾ, ಸಾನ್ವಿಕಾ ಹಾಗೂ ನಿವೇದಿತಾ ರವರ ಭರತನಾಟ್ಯ. ದೇವರ ಹಿಪ್ಪರಗಿಯ ಸಿದ್ದು ಮೇಲಿನಮನಿ ಅವರ ಗಮನಸೆಳೆಯಿತು.