ಕೊಳಚೆಯಿಂದ ತುಂಬಿ ತುಳುಕುವ ಚರಂಡಿಗಳು

Sewers overflowing with sewage

ಯಮಕನಮರಡಿ 09: ಸಮೀಪದ ಹತ್ತರಗಿ ಗ್ರಾ ಪಂ ವ್ಯಾಪಿಗೆ ಬರುವ ದಾದಬಾನಹಟ್ಟಿ ಮುಖ್ಯರಸ್ತೆಯಲ್ಲಿರುವ ಚರಂಡಿಯು ನಿರ್ಮಾಣವಾಗಿ ಸುಮಾರು 20ವರ್ಷಗಳ ಕಾಲ ಗತಿಸಿರಬಹುದು ಆಗೀನ ತಾಲೂಕು ಪಂಚಾಯತಿ ಸದಸ್ಯರಾಗಿದ್ದ ಕೈ ವಾ ವಿಜಯಸಿಂಗ್ ರಜಪೂತ್‌ರವರು ತಮ್ಮ ಅನುದಾನದಲ್ಲಿ ಚರಂಡಿ ನಿರ್ಮಿಸಿದ್ದು ಇರುತ್ತದೆ.  

ಇಲ್ಲಿಯವರೇಗೆ ಸದರಿ ಚರಂಡಿಗೆ ರೀಪೇರಿ ಬಾಗ್ಯ ಬಂದಿಲ್ಲ ತದನಂತರ ಗ್ರಾಮ ಪಂಚಾಯತಿಯ ಚುನಾವಣೆಗಳು ಜರುಗಿದ್ದು ಇರುತ್ತದೆ. ಈ ಚರಂಡಿ ಕುರಿತು ದಾದಬಾನಹಟ್ಟಿ ಗ್ರಾಮದ ಜನಪ್ರತಿನಿದಿಗಳು ಯಾವುದೇ ತರದ ಚರಂಡಿಗಳ ನವೀಕರಣ ಅಭಿವೃದ್ದಿ ಮಾಡುತ್ತಿಲ್ಲ ಇದರಿಂದಾಗಿ ಗ್ರಾಮದಲ್ಲಿ ಇತರೆ ಹಲವಾರು ಕಾಯಿಲೆಗಳು ಗ್ರಾಮಸ್ಥರನ್ನು ಕಾಡುತ್ತಿದ್ದಾವೆ.  

ಈ ಕುರಿತು ಜನಪ್ರತಿನಿಧಿಗಳನ್ನು ವಿಚಾರಿಸಿದಾಗ ಅವರು ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ ಅಲ್ಲದೇ ತಮ್ಮ ಪಾದರಕ್ಷೆಗಳನ್ನು ಕೈಯಲ್ಲಿ ಹಿಡಿದು ಮಾತನಾಡುತ್ತಾರೆ. ಹಾಗಾಗಿ ಗ್ರಾಮಸ್ಥರು ಹೆದರುತ್ತಿದ್ದಾರೆ. ಇದರಿಂದಾಗಿ ಗ್ರಾಮವು ಸ್ವಚ್ಚತೆ ಕಾಣದೆ ಗಗ್ಗವಾಸನೆಯಿಂದ ಕೂಡಿರುತ್ತದೆ. ಇದಕ್ಕೆ ಪರಿಹಾರ ಯಾವಾಗ ಎಂದು ಗ್ರಾಮದ ಜನರು ಮಾತನಾಡುತ್ತಿದ್ದಾರೆ.