ವಿಜಯಪುರ: ಸ್ವಾಮಿ ವಿವೇಕಾನಂದರ ಜಯಂತಿ ಉತ್ಸವ

ಲೋಕದರ್ಶನ ವರದಿ

ವಿಜಯಪುರ 12: ನವಭಾರತ ನಿರ್ಮಿತೃಗಳಲ್ಲಿ ಶ್ರೇಷ್ಠರೆನಿಸಿದವರಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖರು. ಬಾರತ ಕಂಡ ಶ್ರೇಷ್ಠ ಆಧ್ಯಾತ್ಮಿಕ ಚಿಂತಕರು. ಅವರ ಸಾಧನೆ ಕೇವಲ ವೈಯಕ್ತಿಕ ನೆಲಗಟ್ಟಿಗೆ ಸೀಮಿತವಾಗಿರದೇ ಸಮಾಜದ ಅಭ್ಯುದಯಕ್ಕೆ ಮಾರ್ಗದರ್ಶನವಾಗಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವರು, ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ನಗರದ ಕಂದಗಲ್ ಹನುಮಂತರಾಯರ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಕರ್ಾರಿ ಪ್ರಥಮ ದರ್ಜೆ  ಕಾಲೇಜು ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ  ಸ್ವಾಮಿ ವಿವೇಕಾನಂದರ ಜಯಂತಿ ಉತ್ಸವ ಅಂಗವಾಗಿ ರಾಷ್ಟ್ರಿಯ ಯುವ ಸಪ್ತಾಹ, ಯುವ ಸಬಲೀಕರಣ ಕೇಂದ್ರ ಉದ್ಘಾಟನೆ ಹಾಗೂ ವಿದ್ಯಾರ್ಥಿ ಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಪರಮಹಂಸರ ಬೋಧನೆಗಳನ್ನು ಜಗತ್ತಿಗೆ ಸಾರುವ ಸಂಕಲ್ಪವನ್ನು ವಿವೇಕಾಂದರು ಹೊಂದಿದ್ದರು. ಆವರ ಅದ್ಬುತ ವಾಕ್ಚಾತುರ್ಯದಿಂದ ಅಪಾರ ಶಿಷ್ಯವರ್ಗ ಅವರನ್ನು ಹಿಂಬಾಲಿಸುತ್ತಿತ್ತು. ಯುವ ಜನರ ಸ್ಪೂರ್ತಿಯ ಸೆಲೆಯಾಗಿರುವ ವಿವೇಕಾಂದರ ತತ್ವಾದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಗುರಿಯನ್ನು ಮುಟ್ಟುವಂತೆ ಕರೆ ನೀಡಿದರು.ಅಜ್ಞಾನ,ಮೂಢನಂಬಿಕೆಗಳನ್ನು, ಹೋಗಲಾಡಿಸಲು ಅನೇಕ ಪ್ರಯತ್ನಗಳು, ಸುಧಾರಣಾ ಚಳುವಳಿಗಳು  ಆರಂಭಗೊಂಡವು. ಅವುಗಳ ಉದ್ದೇಶ ಧರ್ಮ ಮತ್ತು ಸಮಾಜದ  ಶುದ್ಧೀಕರಣ ಮಾಡುವುದಾಗಿತ್ತು. ಪುರೋಹಿತಶಾಹಿ ವರ್ಗವನ್ನು ಖಂಡಿಸಿದ ವಿವೇಕಾನಂದರು ಸ್ತ್ರೀ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡಿದವರಲ್ಲಿ ವಿವೇಕಾನಂದರು ಅಗ್ರಗಣ್ಯರು ಎಂದು ಹೇಳಿದರು.

ತಳೆವಾಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಂಗಮೇಶ ಪೂಜಾರಿ ಅವರು ಉಪನ್ಯಾಸ ನೀಡಿ, ಮನಸ್ಸಿನ ಭಾವನೆಗಳ ಕೊಳೆಯನ್ನು ತೊಳೆಯಲು ಮಹಾನ್ ಪುರುಷರ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದರು. 

ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಆಧಾರಿತ ರಾಷ್ಟ್ರ '' 1000 ಪುಸ್ತಕಗಳನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ವಿದ್ಯಾರ್ಥಿಗಳಿಗೆ ಕಾಣಿಕೆಯಾಗಿ ನೀಡಿದರು. ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಸಾರ್ವಜನಿಕರು ಸಂಚಾರಿ ನಿಯಮ ಪಾಲಿಸುವ ಕುರಿತು ಪೊಲೀಸ್ ಇಲಾಖೆಯ ಬಿತ್ತಿಪತ್ರಗಳನ್ನು ಸಚಿವರು ಬಿಡುಗಡೆ ಮಾಡಿದರು.ಸರಕಾರಿ ಪ್ರಥಮ ದರ್ಜೆಯ ಕಾಲೇಜಿನ 10 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದವರನ್ನು ಹಾಗೂ ವಿವೇಕಾಂದರ ವೇಶಧಾರಿಗಳನ್ನು ಸನ್ಮಾನಿಸಲಾಯಿತು. 

ಆನಂದ ಕುಲಕರ್ಣಿ  ಹಾಗೂ ವಂದೇಮಾತರಂ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಅಧಿಕಾರಿ ಮಹೇಶ ಪೋತದಾರ ಸ್ವಾಗತಿಸಿದರು. ಎಮ್.ಎಚ್.ಮಮದಾಪೂರ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ,ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಗೋವಿಂದ ಗೋಠೆ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್.ರಾಜಮಾನ್ಯ,ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೂಜಾರಿ ಸೇರಿದಂತೆ ವಿದ್ಯಾರ್ಥಿಗಳು,ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.