ವಿಜಯಪುರ: ಗುಣಾತ್ಮಕ ಶಿಕ್ಷಣಕ್ಕೆ ಪಾಲಕರ ಒಲವು: ಭೂಸಗೊಂಡ

ವಿಜಯಪುರ 27: ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಾಗ ಪಾಲಕರು ಗುಣಾತ್ಮಕ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆ ಅಥವಾ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡುತ್ತಾರೆ. ಆ ನಿಟ್ಟಿನಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆ ಕಳೆದ 7 ವರ್ಷಗಳಲ್ಲಿ ಸಾಧಿಸಿದ ಸಾಧನೆ ಶ್ಲಾಘನೀಯ ಎಂದು ಪ್ರಸಕ್ತ ಸಾಲಿನ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಎಂ.ಎಸ್.ಭೂಸಗೊಂಡ ಹೇಳಿದರು.

ತಿಕೋಟಾದ ಸಿದ್ಧಿವಿನಾಯಕ ಪೂರ್ವಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. 

ಸ್ಥಳೀಯ ಹಿರೇಮಠದ ಶಿವಬಸವ ಶಿವಾಚಾರ್ಯರು ಹಾಗೂ ಬ್ರಹ್ಮಕುಮಾರಿ ನಾಗರತ್ನ ಸಾನಿಧ್ಯ ವಹಿಸಿದ್ದರು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸೋಮಶೇಖರ ದಾ. ಜತ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಲೇಪು ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯೋಪಾಧ್ಯಾಯನಿ ಡಿ.ಬಿ. ಜತ್ತಿ ವಿದ್ಯಾಥರ್ಿಪ್ರತಿನಿಧಿ ಕುಮಾರಿ ಕಲಾವತಿ ಪರೀಟ ವೇದಿಕೆ ಮೇಲಿದ್ದರು. ವಿ.ಎಸ್. ಬಂದಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.