ಲೋಕದರ್ಶನ ವರದಿ
ವಿಜಯಪುರ 25: ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ಬೆಳಿಗ್ಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವರನಟ ಡಾ.ರಾಜ್ಕುಮಾರ ಅವರ 91ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾಡಳಿತ ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ ಅವರು ಡಾ.ರಾಜ್ಕುಮಾರ ಅವರ ಭಾವಚಿತ್ರಕ್ಕೆಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಎನ್ಐಸಿ ಅಧಿಕಾರಿ ಗೂಗವಾಡ, ಪ್ರವಾಸೋದ್ಯಮ ಇಲಾಖೆ ಉಪನಿದರ್ೇಶಕ ಮಹೇಶ ಕ್ಯಾತನ್, ಕ್ರೀಡಾ ಇಲಾಖೆ ಅಧಿಕಾರಿ ಎಸ್.ಜಿ. ಲೋಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿದರ್ೇಶಕ ಸುಲೇಮಾನ ಡಿ. ನದಾಫ್, ಸೇರಿದಂತೆ ಫಯಾಜ ಕಲಾದಗಿ, ಶ್ರವಣಕುಮಾರ ಮಹೀಂದ್ರಕರ, ದಸ್ತಗೀರ ಸಾಲೋಟಗಿ, ಎಚ್.ಎಸ್.ಕಬಾಡೆ, ರಾಜು ಹಜೇರಿ, ಸಂತೋಷ ಮುಧೋಳ, ಫಿದಾ ಕಲಾದಗಿ, ಎನ್.ಕೆ.ಮನಗೊಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು