ವಿಜಯಪುರ: ಪತ್ರಿಕೋದ್ಯಮ ವಿದ್ಯಾರ್ಥಿನಿಯರೇ ಅಭಿವೃದ್ಧಿ ಕಾರ್ಯ ಮಾಡಿ: ಡಾ.ಸತೀಶಕುಮಾರ

ಲೋಕದರ್ಶನ ವರದಿ

ವಿಜಯಪುರ 16: ನಿಮ್ಮ ಸುತ್ತಮುತ್ತಲಿನ ಅಭಿವೃದ್ಧಿ ಹೊಂದಿರದ ಗ್ರಾಮಗಳನ್ನು ಗುರುತಿಸಿ ಅವುಗಳ ಬಗ್ಗೆ ಲೇಖನ ಮತ್ತು ಸುದ್ದಿಗಳನ್ನು ಬರೆದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ಮಾಡಿ ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಸತೀಶಕುಮಾರ ಬಿ.ಎಸ್. ವಿದ್ಯಾಥರ್ಿನಿಯರಿಗೆ ಹೇಳಿದರು. 

ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಾಧ್ಯಮ ಮನೆ ಚಟುವಟಿಕೆಯ ಅಂಗವಾಗಿ ಹಮ್ಮಿಕೊಂಡಿದ್ದ 'ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ಕುರಿತು ವಿಶೆಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡುವುದು, ರೈತರಿಗೆ ತಂತ್ರಜ್ಞಾನ, ಆರೋಗ್ಯದ ಕುರಿತು ಮಾಹಿತಿಯನ್ನು ಭಾವಿಪತ್ರಕರ್ತೆಯರಾದ ನಿಮ್ಮ ಗುರುತರ ಜವಾಬ್ದಾರಿ. ಈ ನಿಟ್ಟಿನಲ್ಲಿ ಜನರ ಧ್ವನಿಯಾಗಿ ಕಾರ್ಯವನ್ನು ನಿರ್ವಹಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. 

ಜನರು ಮರೆತಿರುವ ಮಾಧ್ಯಮವಾದ ಜನಪದ ಮಾಧ್ಯಮವೂ ಕೂಡ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮಗೆ ಬಹಳ ಜನಪ್ರಿಯವಾದ ಮಾಧ್ಯಮವಾಗಿದೆ. ಹಾಡು, ನೃತ್ಯ, ನಾಟಕಗಳ ಮೂಲಕ ಸಮಸ್ಯೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವುದು ಮತ್ತು ಜನರಿಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಯಕ್ಷಗಾನ, ಗೊಂಬೆಯಾಟ, ಬೀದಿ ನಾಟಕಗಳು ಹಾಗೂ ರಂಗಭೂಮಿಯ ಗೀತೆಗಳ ಮೂಲಕ ಅಭಿವೃದ್ಧಿಯ ಅರಿವು ಮೂಡಿಸುವುದು, ಜನರಲ್ಲಿ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಜನಪದ ಮಾಧ್ಯಮದ ಬಳಕೆ ಹೆಚ್ಚಾಗಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.  

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ಕೋಲಾರ ಮತ್ತು ಸಂದೀಪ ನಾಯಕ, ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರವಿದ್ಯಾರ್ಥಿನಿಯರು  ಸೇರಿದಂತೆ  ಮತ್ತಿತರರು ಉಪಸ್ಥಿತರಿದ್ದರು.

ವಿಭಾಗದ ವಿದ್ಯಾರ್ಥಿನಿ  ಸರಸ್ವತಿ ಗುಮಟಿ ನಿರೂಪಿಸಿದರು. ಲಕ್ಷ್ಮೀ ಮೊರಬ ಪರಿಚಯಿಸಿದರು. ರೇಣುಕಾ ಸಾಗರ ಸ್ವಾಗತಿಸಿ, ವಂದಿಸಿದರು.