ಲೋಕದರ್ಶನ ವರದಿ
ವಿಜಯಪುರ 25: ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ ನೌಕರರ ಸಂಘದ ವಿಜಯಪುರ ತಾಲೂಕು ಘಟಕ ಅಸ್ತಿತ್ವಕ್ಕೆ ಬಂದಿದೆ.
ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ತಾಲೂಕಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಸಂಘದ ತಾಲೂಕಾ ಗೌರವಾಧ್ಯಕ್ಷರಾಗಿ ವಿಜಯಕುಮಾರ ಎಂ.ಬಿಸನಾಳ, ತಾಲೂಕಾ ಅಧ್ಯಕ್ಷರಾಗಿ ಕಗ್ಗಡದವರ, ಉಪಾಧ್ಯಕ್ಷರಾಗಿ ಮಲ್ಲವ್ವ ಎಸ್.ಪಾಟೀಲ, ಕಾರ್ಯಾಧ್ಯಕ್ಷರಾಗಿ ರಾಜಶೇಖರ ಬಿರಾದಾರ, ಪ್ರಧಾನ ಕಾರ್ಯದಶರ್ಿಗಳಾಗಿ ಸಂತೋಷಕುಮಾರ ಬಿರಾದಾರ, ಕೋಶಾಧಿಕಾರಿಯಾಗಿ ರಾಮಗೊಂಡ ಜಿ.ಹುಲಗಬಾಳ, ಸಂಘಟನಾ ಕಾರ್ಯದರ್ಶಿಯಾಗಿ ಶ್ಯಾಮಲಾ ಗಡೇದ ಸಹ ಸಂಘಟನಾ ಕಾರ್ಯದರ್ಶಿಗಳಾಗಿ ರಾಚಗೊಂಡ ಬಿ.ಸಂಕಣ್ಣವರ, ನಿರ್ದೇಶಕರಾಗಿ ಶ್ರೀಶೈಲ ಎಸ್.ಕುಮಾನಿ, ರೇಖಾ ಎಲ್.ಪವಾರ, ಬಸವರಾಜ ಉಪ್ಪಲದಿನ್ನಿ, ಶಶಿಕಲಾ ಹೊನಕಟ್ಟಿ, ಇಸಾಕ ಜಮಾದಾರ, ಮಾಲಾಶ್ರೀ ವಾಯ್. ಅಮ್ಮಣ್ಣನವರ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ ರಾಜ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಸ್.ಆಯ್. ಗದಗಿಮಠ, ಉಪಾಧ್ಯಕ್ಷ ಅಶೋಕ ಗಲಗಲಿ, ಪ್ರಧಾನ ಕಾರ್ಯದರ್ಶಿ ಸೋಮು ಲಮಾಣಿ ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಪಂಚಾಯತ ಕಾರ್ಯದರ್ಶಿಗಳು, ಪಂಚಾಯತ ಲೆಕ್ಕ ಸಹಾಯಕರು ಉಪಸ್ಥಿತರಿದ್ದರು.