ವಿಜಯಪುರ: ಬಿ.ಎಲ್.ಡಿ.ಇ.ಗೆ ಅಪೋಲೋ ಆಸ್ಪತ್ರೆಯಿಂದ ಪ್ರಸಂಶೆ

ಲೋಕದರ್ಶನ ವರದಿ

ವಿಜಯಪುರ 10: ಜೆರಿಯಾಟ್ರಿಕ್ (ವೃದ್ದಾಪ್ಯ) ರಾಷ್ಟ್ರೀಯ ಸಮಾವೇಶವು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ಮತ್ತು ಜೆರಿಯಾಟ್ರಿಕ್ ಸಂಸ್ಥೆಯ ಸಹಯೋಗದೊಂದಿಗೆ ಇತ್ತೀಚೆಗೆ ನವದೆಹಲಿಯಲ್ಲಿ ಆಯೋಜಿಸಲಾಗಿತ್ತು.

ಈ ರಾಷ್ಟ್ರೀಯ ಸಮಾವೇಶದಲ್ಲಿ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಜೆರಿಯಾಟ್ರಿಕ್ ಕ್ಲಿನಿಕ್ 2018ರ ವರ್ಷದಲ್ಲಿ ಆಯೋಜಿಸಿದ ಜಾಗೃತಿ ಕಾರ್ಯಕ್ರಮಗಳು, ಉಚಿತ ಆರೋಗ್ಯ ಶಿಬಿರಗಳು, ಲಸಿಕಾ ಕಾರ್ಯಕ್ರಮಗಳು ಹಾಗೂ ಮುಂತಾದ ಹಿರಿಯರ ಆರೋಗ್ಯಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.  

ದೆಹಲಿ ಸಂತೋಷ ವಿವಿ ಉಪಕುಲಪತಿ ಡಾ. ವಿ. ಕೆ.ಅರೋರಾ ಪ್ರಶಸ್ತಿಯನ್ನು ಬಿ.ಎಲ್.ಡಿ.ಇ ಜೆರಿಯಾಟ್ರಿಕ್ ಕ್ಲಿನಿಕ್ನ ಡಾ.ಆನಂದ ಪಿ.ಅಂಬಲಿ ಅವರಿಗೆ ವಿತರಿಸಿದರು. ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯರು, ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ಡಾ.ವಿವೇಕ ಹಂಡಾ, ಕಾರ್ಯದರ್ಶಿ ಡಾ.ಒ.ಪಿ.ಶರ್ಮಾ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.