ವಿಜಯಪುರ: ಅಂಬಾಭವಾನಿ ಜಾತ್ರಾ ಮಹೋತ್ಸವ

ವಿಜಯಪುರ 12: ವಿಜಯಪುರ ತಾಲೂಕಿನ ಬರಟಗಿ ಎಲ್.ಟಿ.ನಂ.3ಎ ದಲ್ಲಿ ಶ್ರೀ ಅಂಬಾಭವಾನಿ ಜಾತ್ರಾ ಮಹೋತ್ಸವವು ಇದೇ ದಿ. 13 ರಂದು ವಿಜೃಂಭಣೆಯಿಂದ ಜರುಗಲಿದೆ. 13 ರಂದು ಬೆಳಿಗ್ಗೆ 10 ಕ್ಕೆ ಖೇಮು ಮಹಾರಾಜರ ನೇತೃತ್ವದಲ್ಲಿ ಅತೀ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಅಂದು ಬೆಳಿಗ್ಗೆ 9 ಕ್ಕೆ ವಿಶೇಷ ಪೂಜೆ, ಅದೇ ದಿನ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಪ್ರವಚನ, ಅನ್ನ ಸಂತರ್ಪಣೆ ಜರುಗಲಿದೆ. ಅದೇ ದಿನ ರಾತ್ರಿ 9 ಕ್ಕೆ  ಬಂಜಾರಾ ಸಮಾಜದ ಭಕ್ತಿ ಪ್ರದಾನ ಗೀತೆಗಳ ಗಾಯನ ನಡೆಯಲಿದೆ. 

ಅದೇ ದಿನ ಸಂಜೆ 6 ಕ್ಕೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಗೃಹ ಸಚಿವ ಎಂ.ಬಿ. ಪಾಟೀಲ ಸಮಾರಂಭ ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯ ಸುನೀಲಗೌಡ ಬಿ.ಪಾಟೀಲ, ಶಿಕ್ಷಣ ಇಲಾಖೆ ಸಂಸದೀಯ ಕಾರ್ಯದರ್ಶಿ  ಡಾ.ದೇವಾನಂದ ಚವ್ಹಾಣ, ಯಾದಗಿರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಪ್ರಕಾಶ ಗೋಪು ರಜಪೂತ, ಜಿಲ್ಲಾ ಪಂಚಾಯತ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಜಶ್ರೀ ಚವ್ಹಾಣ, ಎಪಿಎಂಸಿ ನಿದರ್ೇಶಕ ವಾಮನ ಚವ್ಹಾಣ, ಎಪಿಎಂಸಿ ಮಾಜಿ ನಿರ್ದೇಶಕಿ  ಸಿದ್ದಣ್ಣ ಸಕ್ರಿ, ಬರಟಗಿ ಗ್ರಾ.ಪಂ. ಅಧ್ಯಕ್ಷೆ  ಶಶಿಕಲಾ ನಾಯಿಕ, ಉಪಾದ್ಯಕ್ಷ ಸತೀಶ ನಾಯಿಕ, ಗ್ರಾ.ಪಂ. ಸದಸ್ಯರಾದ ಶ್ರೀಕಾಂತ ಜಾಧವ, ಕವಿತಾ ರಜಪೂತ, ಗೀತಾ ರಜಪೂತ, ಜಾಲಗೇರಿ ಮುಖ್ಯೋಪಾಧ್ಯಾಯರಾದ ಬಿ.ಡಿ.ಚವ್ಹಾಣ, ವೈದ್ಯರಾದ ಜಯರಾಮ ರೇ. ರಾಠೋಡ, ದೈಹಿಕ ನಿದರ್ೇಶಕರಾದ ಕುಮಾರಿ ಕಸ್ತೂರಿ ರಜಪೂತ, ಮುಖ್ಯೋಪಾಧ್ಯಾರಾದ ಕೆ.ಟಿ. ರಜಪೂತ, ಸಂಜು ಪವಾರ, ರಾಮು ರಾಠೋಡ, ಸುರೇಶ ರಜಪೂತ, ಪ್ರೇಮಸಿಂಗ ನಾಯಿಕ, ಭೀಮಸಿಂಗ ರಜಪೂತ, ಸುಭಾಸಚಂದ್ರ ರಜಪೂತ ಭಾಗವಹಿಸುವರು ಎಂದು ತಾಂಡಾದ ಪ್ರಮುಖರಾದ ಹುನ್ನು ಭಂಗು ನಾಯಿಕ, ಧನಸಿಂಗ ರಾಮದಾಸ ಕಾರಭಾರಿ ತಿಳಿಸಿದ್ದಾರೆ