ಲೋಕದರ್ಶನ ವರದಿ
ವಿಜಯಪುರ 09: ಜಿಲ್ಲೆಯಲ್ಲಿ ಮಾರ್ಚ 10 ರಿಂದ 13ವರೆಗೆ ಹಮ್ಮಿಕೊಂಡಿರುವ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನವನ್ನು ಅಧಿಕಾರಗಳು, ಜನಪ್ರತಿನಿಧಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ಶೇ 100% ಯಶಸ್ವಿಗೊಳಿಸಿಬೇಕೆಂದು ಜಿಲ್ಲಾಧಿಕಾರಿ ಎಸ್.ವೈ. ಪಾಟೀಲ ಸಲಹೆ ನೀಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕು.ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತ ಮತ್ತು ಸಾರ್ವಜನಿಕ ಇಲಾಖೆ, ಪ್ರಸುತಿ ಮತ್ತು ಸ್ತ್ರೀರೋಗ ತಜ್ಞರುಗಳು ಸಂಘ, ವಿವಿಧ ನರ್ಸಿಂಗ್ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳು ಆಶ್ರಯದಲ್ಲಿ ಆಯೋಜಿಸಿದ "ರಾಷ್ಟ್ರೀಯ ಪಲ್ಸ್ ಪೋಲಿಯೋ" ಕಾರ್ಯಕ್ರಮದ ಜನಜಾಗೃತಿ ರ್ಯಾಲಿಗೆ ಇಂದು ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿದರ್ೇಶನಾಲಯದ ಸಹ ನಿದರ್ೇಶಕ ಓಂಪ್ರಕಾಶ ಪಾಟೀಲ ಅವರೊಂದಿಗೆ ಜಂಟಿಯಾಗಿ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ 0-5 ವರ್ಷದ ಒಟ್ಟು 277379 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಆಶಾಕಾರ್ಯಕರ್ತೆಯರು , ನಗರ ನಸರ್ಿಂಗ್ ಹಾಗೂ ಪ್ಯಾರಾ ಮೇಡಿಕಲ್ ವಿದ್ಯಾರ್ಥಿಗಳ ಒಳಗೊಂಡು ಒಟ್ಟು- 1313 ತಂಡಗಳನ್ನು ರಚಿಸಲಾಗಿದ್ದು, ಮೇಲ್ವಿಚಾರಣೆಗಾಗಿ 257 ಸಿಬ್ಬಂದಿ ನೇಮಿಸಿದೆ ಮತ್ತು ತಾಲೂಕಾ ನೋಡಲ ಅಧಿಕಾರಿಗಳನ್ನು ಆಯಾ ತಾಲೂಕಿಗಳಿಗೆ ಮೇಲ್ವಿಚಾರಣೆ ಮಾಡಲು ಅದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಯಾ ಭಾಗದ ಉಸ್ತುವಾರಿಯನ್ನು ಹೊಂದಿರುತ್ತಾರೆ. ವಿಶೇಷವಾಗಿ ತೋಟದ ಮನೆ, ಇಟ್ಟಂಗಿ ಬಟ್ಟಿ, ಅಲೇಮಾರಿ ಜನಾಂಗ, ಕಟ್ಟಡ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕೆಂದು ಸೂಚಿಸಿದರು. ದಿನಾಂಕ 10-03-2019 ರಿಂದ 13-03-2019 ರವರೆಗೆ ನಡೆಯಲಿದ್ದು ಸಾರ್ವಜನಿಕರು ತಮ್ಮ 5 ವರ್ಷದ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ ಪೋಲಿಯೋ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಕರೆ ನೀಡಿದರು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ಮಹಿಂದ್ರ ಕಾಪಸೆ, ಡಾ|| ಮುಕುಂದ ಗಲಗಲಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ: ಸುರೇಶ ಚವ್ಹಾಣ, ಡಾ|| ಸಂಪತ್ತ ಗುಣಾರಿ, ಡಾ|| ಜ್ಯೋತಿ ಪಾಟೀಲ, ಡಾ|| ಆಯ್ ಎಸ್ ಧಾರವಾಡಕರ, ಡಾ|| ರಾಜೇಶ್ವರಿ ಗೊಲಗೇರಿ ಪ್ರಸುತಿ ಮತ್ತು ಸ್ತ್ರೀರೋಗ ತಜ್ಞರುಗಳು ಸಂಘದ ಪದಾಧಿಕಾರಿಗಳು, ಜಿಲ್ಲೆಯ ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸುರೇಶ ಹೊಸಮನಿ ಮತ್ತು ಡಿ.ಕೆ.ತೇಲಿ, ರಾಮು ಹೊನವಾಡ, ಕುಮಾರ ರಾಠೋಡ, ರಮೇಶ ಅರಕೇರಿ, ಉಮೇಶ ಗಂಗರಗೊಂಡ, ಧರೆಪ್ಪ ಕಡಬಿ ಭಾಗವಹಿಸಿದ್ದರು.