ವಿಜಯನಗರ : ದಸರಾ ಹಬ್ಬದ ಪ್ರಯುಕ್ತ ದೇವರಬನ್ನಿ ಕಾರ್ಯಕ್ರಮ
Vijayanagar: Devabanni program on the occasion of Dasara festival
ವಿಜಯನಗರ : ದಸರಾ ಹಬ್ಬದ ಪ್ರಯುಕ್ತ ದೇವರಬನ್ನಿ ಕಾರ್ಯಕ್ರಮ
ಹೊಸಪೇಟೆ 2: ನಾಡಿನಾದ್ಯಂತ ದಸರಾ ಸಂಭ್ರಮ ಮನೆ ಮಾಡಿದ್ದು, ವಿಜಯನಗರ ಕಾಲದಲ್ಲಿ ದಸರಾ ವೈಭವಕ್ಕೆ ವೇದಿಕೆಯಾಗಿದ್ದ ದಸರ ಹಬ್ಬವು ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕ ರಾಜ್ಯದ ನಾಡಹಬ್ಬ ಆಗಿದೆ. ಈ ಸಂಭ್ರಮದ ಪ್ರಯುಕ್ತ ಹೊಸಪೇಟೆಯ ಬಸವನ ದುರ್ಗದ ಐತಿಹಾಸಿಕ ಧರ್ಮರ ಗುಡ್ಡದಲ್ಲಿ ನಾಡ ಹಬ್ಬ ದಸರಾ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವು ಕೂಡ ದೇವರಬನ್ನಿ ಕಾರ್ಯಕ್ರಮದಲ್ಲಿ ವಿಜಯನಗರ ಹೊಸಪೇಟೆಯ ಏಳು ಕೇರಿಗಳ ದೇವತೆಗಳು ಹಾಗು ಬಸವನ ದುರ್ಗದ ಶ್ರೀ ಚೆನ್ನಬಸವೇಶ್ವರ ದೇವರ ಪರಸ್ಪರ ಬನ್ನಿಯನ್ನು ವಿನಿಮಯ ಮಾಡಿಕೊಳ್ಳುವ ಸಂದರ್ಭ ಅತ್ಯಂತ ನಯನ ಮನೋಹರವಾಗಿರುತ್ತದೆ.
ಈ ವರ್ಷವು ಕೂಡ ಅತ್ಯಂತ ವಿಜೃಂಭಣೆಯಿಂದ ನೆರವೇರುವ ದೇವರಬನ್ನಿ ಕಾರ್ಯಕ್ರಮದಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಅವರು ಭಾಗವಹಿಸಿ ಪರಸ್ವರ ದಸರಾ ಹಬ್ಬದ ಶುಭಾಶಯಗಳು ತಿಳಿಸಿದರು. ನಂತರ ಮಾತನಾಡಿದ ಅವರು ಇಂದಿನ ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬದ ಮೂಲ 15ನೇ ಶತಮಾನದಲ್ಲೇ ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ವಿಜಯದಶಮಿಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಸೈನ್ಯದ ವಿವಿದ ಶಕ್ತಿ, ಶೌರ್ಯ, ಪರಾಕ್ರಮಗಳ ಪ್ರದರ್ಶನ, ಹಾಗು ಕಲೆ, ಸಾಹಿತ್ಯಗಳಿಗೆ ವೇದಿಕೆ, ಸಂಗೀತ, ನೃತ್ಯ ಮತ್ತು ಸಂಸ್ಕೃತಿ ಪ್ರದರ್ಶನಕ್ಕೆ ಅವಕಾಶ ಸೇರಿದಂತೆ ಹತ್ತು ದಿನಗಳ ಕಾಲ ಅದ್ಧೂರಿಯಾಗಿ ಆಚರಣೆ ನಡೆಸುತ್ತಾ ಬರಲಾಗುತ್ತಿತ್ತು. ಇದು 10 ದಿನಗಳ ಹಬ್ಬವಾಗಿದ್ದು, ನವರಾತ್ರಿ ಎಂದು ಕರೆಯಲ್ಪಡುವ ಒಂಬತ್ತು ರಾತ್ರಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಕೊನೆಯ ದಿನವನ್ನು ವಿಜಯದಶಮಿ ದಸರಾ ಹಬ್ಬವನ್ನು ವೈಭವ ಮತ್ತು ವಿಜೃಂಭಣೆಯಿಂದ ಆಚರಿಸುವ ಸಂಪ್ರದಾಯವನ್ನು ಹೊಂದಿತ್ತು. ನಂತರ ವಿಜಯನಗರದ ಅರಸರ ನಂತರ ಮೈಸೂರಿನ ಮಹಾರಾಜರು ಇಂದು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ಈ ಸಂಭ್ರಮದ ಪ್ರಯುಕ್ತ ಇಂದು ವಿಜಯನಗರ ಕ್ಷೇತ್ರದ ಹೊಸಪೇಟೆಯ ಬಸವನ ದುರ್ಗದ ಐತಿಹಾಸಿಕ ಧರ್ಮರ ಗುಡ್ಡದಲ್ಲಿ ನಾಡ ಹಬ್ಬ ದಸರಾ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವು ಕೂಡ ದೇವರಬನ್ನಿ ಕಾರ್ಯಕ್ರಮದಲ್ಲಿ ಹೊಸಪೇಟೆಯ ಏಳು ಕೇರಿಗಳ ಹಿರಿಯರೊಂದಿಗೆ ಯುವಕರು ಶಕ್ತಿ ದೇವತೆಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಬಸವನ ದುರ್ಗದ ಧರ್ಮರ ಗುಡ್ಡದ ಬನ್ನಿ ಮರದ ಬಳಿ ಆಗಮಿಸಿ ಶ್ರೀ ಚೆನ್ನಬಸವೇಶ್ವರ ದೇವರೊಂದಿಗೆ ಪರಸ್ಪರ ಬನ್ನಿಯನ್ನು ವಿನಿಮಯ ಮಾಡಿಕೊಳ್ಳುವ ಸಂದರ್ಭ ಅತ್ಯಂತ ನಯನ ಮನೋಹರವಾಗಿತ್ತು. ಈ ಸುಂದರ ದೃಶ್ಯವನ್ನು ನೋಡಲು ದೂರದ ಊರುಗಳಿಂದ ಸಹಸ್ರ ಸಹಸ್ರ ಜನರು ಆಗಮಿಸುತ್ತಾರೆ. ಅದೇ ರೀತಿ ನಾನು ಸಹ ಪ್ರತಿ ವರ್ಷ ಆಗಮಿಸುತ್ತೇನೆ ಎಂದರು.
ಹಾಗೂ ಆ ಭಗವಂತನ ದಯೆಯಿಂದ ನಾಡಿನಾದ್ಯಂತ ಉತ್ತಮ ಮಳೆ ಬೆಳೆಯಾಗಿ ಸುಖ, ಶಾಂತಿ, ಸಂತೋಷ, ಸಂಪತ್ತು, ಪರಸ್ಪರ ಸೌಹಾರ್ದತೆ, ಪ್ರೀತಿ ಪ್ರೇಮ ವಾತ್ಸಲ್ಯದಿಂದ ಎಲ್ಲರೂ ಕೂಡಿ ಬಾಳುವಂತಾಗಲಿ ಪ್ರಾರ್ಥಿಸಿದರು.
ಇದೇ ಸಂಧರ್ಭದಲ್ಲಿ ಹೊಸಪೇಟೆಯ ಸಮಸ್ತ ಬಂಧುಗಳು ವಾಲ್ಮೀಕಿ ಸಮಾಜದ ಗುರು ಹಿರಿಯರು ಮುಖಂಡರು ನಗರಸಭಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನಗರಸಭಾ ಸದ್ಯಸರು ಹೊಸಪೇಟೆ ಅಂಜುಮನ್ ಕಮಿಟಿಯ ಪದಾಧಿಕಾರಿಗಳು ಸಹಸ್ರ ಸಹಸ್ರ ನಾಗರಿಕರು ಮಹಿಳೆಯರು ಯುವಕರು ಮಕ್ಕಳು ಭಾಗವಹಿಸಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 