ವಿಜಯ ಸಂಕಲ್ಪ ಯಾತ್ರೆ: ಬೈಕ್ ರ್ಯಾಲಿ

ಬೈಲಹೊಂಗಲ 04: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗಾಗಿ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು ವಿಜಯ ಸಂಕಲ್ಪ ಯಾತ್ರೆ ಪ್ರಯುಕ್ತ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಹೇಳಿದರು. 

ಅವರು ಮತಕ್ಷೇತ್ರದಾದ್ಯಂತ ಆಯೊಜಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಬೇರೆ ಪಕ್ಷಗಳು ಕಳೆದ 70 ವರ್ಷಗಳಲ್ಲಿ ಮಾಡಲಾಗದ ಸಾಧನೆಯನ್ನು ನರೇಂದ್ರ ಮೋದಿಯವರು ಕೇವಲ ನಾಲ್ಕುವರೆ ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ಅವರ ಆಡಳಿತ ಅವಧಿಯಲ್ಲಿ ಇಡೀ ವಿಶ್ವವೇ ಭಾರತದತ್ತ ಮುಖ ಮಾಡಿ ನೋಡುವಂತೆ ಪಾರದರ್ಶಕ ಆಡಳಿತ ನೀಡಿದ ಕೀತರ್ಿ ಮೋದಿಯವರಿಗೆ ಸಲ್ಲುತ್ತದೆ. ಮೋದಿಯವರಿಗೆ ಇನ್ನೊಂದು ಬಾರಿ ಪ್ರಧಾನಿ ಮಾಡಿದರೆ ದೇಶ ಇನ್ನಷ್ಟು ಸಮೃದ್ಧಿ ಕಾಣುವಲ್ಲಿ ಯಾವುದೇ ಸಂಶಯ ಇಲ್ಲವೆಂದರು. 

ಸಂಸದ ಸುರೇಶ ಅಂಗಡಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರ ಕಂಡ ಅತ್ಯಂತ ಯಶಸ್ವಿ ನಾಯಕರು. ಅವರ ಅಪಾರವಾದ ಜನಪರ ಕಾಳಜಿ, ಭಕ್ತಿಗೆ ಇಂದು ಪರದೇಶದ ನಾಯಕರು ಕೂಡಾ ಭಾರತದತ್ತ ಚಿತ್ತ ನೆಟ್ಟಿದ್ದಾರೆ. ಇಂತಹ ನಾಯಕರನ್ನು ಮೊತ್ತೊಮ್ಮೆ ಪ್ರಧಾನ ಮಂತ್ರಿ ಮಾಡಿ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದರು. 

ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಮುರುಗೇಶ ಗುಂಡ್ಲೂರ, ಗುರುಪಾದ ಕಳ್ಳಿ, ಗೂಳಪ್ಪ ಹೊಸಮನಿ, ಶ್ರೀಶೈಲ ಯಡಳ್ಳಿ, ಆನಂದ ಮೂಗಿ, ಬಸವರಾಜ ನೇಸರಗಿ, ಸುನೀಲ ಈಟಿ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.