ವಿಜಯಪುರ: ಚಿಂತನೆಗಳಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ಲೋಹಿಯಾ: ಜಂಬುನಾಥ ಹೇಳಿಕೆ

ಲೋಕದರ್ಶನ ವರದಿ

ವಿಜಯಪುರ 24: ತಮ್ಮ ಪ್ರಖರ ಚಿಂತನೆಗಳ ಮೂಲಕ ಭಾರತದ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ರಾಮಮನೋಹರ ಲೋಹಿಯಾ ಎಂದು ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು.

ಪ್ರಾ. ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದ ವತಿಯಿಂದ ಬಳ್ಳಾರಿ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣನವರ ದತ್ತಿ, ಚಿಂತನ-ಸಾಂಸ್ಕೃತಿಕ ಬಳಗ ಬಿ.ಎಲ್.ಡಿ.ಇ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ಉಪನ್ಯಾಸ ನೀಡಿದ ಅವರು, ಶ್ರೀಮಂತ ಕುಟುಂಬದಲ್ಲಿ ಹುಟ್ಟಿ, ವಿದೇಶದಲ್ಲಿ ಓದಿದ ರಾಮಮನೋಹರ ಮಹಾತ್ಮ ಗಾಂಧೀಜಿಯವರ ಪ್ರಭಾವದಿಂದ ರಾಷ್ಟ್ರದೀಕ್ಷೆ ಪಡೆದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು. ಚಲೇಜಾವ್ ಚಳುವಳಿಯಲ್ಲಿ ಲಾಹೋರದಲ್ಲಿ ಜೈಲುವಾಸ ಅನುಭವಿಸುವಾಗ, ಇವರಿಗೆ ಚಿತ್ರಹಿಂಸೆ ನೀಡಲಾಗಿತ್ತು. ಸ್ವಾತಂತ್ರ್ಯಾನಂತರ ಕಾಂಗ್ರೆಸ್ನೊಂದಿಗಿನ ಭಿನ್ನಾಬಿಪ್ರಾಯದಿಂದ ಸ್ವತಂತ್ರ ಸೋಶಿಯಲಿಸ್ಟ್ ಪಕ್ಷವನ್ನು ಕಟ್ಟಿ, ಹಲವಾರು ಹೊಸಮುಖಗಳನ್ನು ರಾಜಕಾರಣಕ್ಕೆ ಪರಿಚಯಿಸಿದರು ಎಂದರು.

ನಂತರದಲ್ಲಿ ರಾಜಕಾರಣದಿಂದ ಬ್ರಮನಿರಸನಗೊಂಡ ಅವರು ಬರಿಗೈ ಫಕೀರನಂತೆ, ಜಗತ್ತು ಸುತ್ತಿದರು. ಜಗತ್ತಿನ ಪರ್ಯಟನೆ ಮಾಡಿ, ಶ್ರೀಲಂಕಾದ ಮೂಲಕ ಚನೈಗೆ ಬಂದಾಗ ಅವರಲ್ಲಿ ಖಚರ್ಿಗೆ ಒಂದು  ರೂಪಾಯಿಯೂ ಇರಲಿಲ್ಲ. ಮುಂದೆ ಏನು ಮಾಡುವುದು? ಎಂದು ತೋಚದೆ ನೇರವಾಗಿ "ದಿ ಹಿಂದು" ಪತ್ರಿಕಾ ಕಛೇರಿಗೆ ತೆರಳಿ ತಮ್ಮ ಪರಿಚಯ ಹೇಳಿ, ನಾನು ಲೇಖನಗಳನ್ನು ಬರೆದುಕೊಡುತ್ತೇನೆ. ಅದಕ್ಕೆ ಸಂಭಾವನೆ ಕೊಡಿ ಎಂದರು. ಸಂಪಾದಕರ ಒಪ್ಪಿಗೆಯ ಮೆರೆಗೆ ಎರಡು ಅದ್ಭುತ ಲೇಖನಗಳನ್ನು ಬರೆದುಕೊಟ್ಟು, ಅವರು ನೀಡಿದ 17ರೂ. ಸಂಭಾವನೆ ಪಡೆದು, ಮತ್ತೆ ಭಾರತ ಸುತ್ತಿದರು ಎಂದು ರಾಮಮನೋಹರ ಲೋಹಿಯಾರವರ ಬದುಕಿನ ಕುರಿತು ವಿವರಿಸಿದರು.

ಚಿಂತನ-ಸಾಂಸ್ಕೃತಿಕ ಬಳಗ ಕಾರ್ಯದಶರ್ಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ ಸ್ವಾತಂತ್ರ್ಯ ಚಳುವಳಿಯ ನಂತರ ದೇಶದಲ್ಲಿ ಕಾಂಗ್ರೆಸ್ನ್ನು ವಿರೋಧಿಸಿದವರಲ್ಲಿ ಮೊದಲನೆಯವರು ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್, ಎರಡನೆಯವರು ರಾಮಮನೋಹರ ಲೋಹಿಯಾರವರು ಇಡೀ ದೇಶದಾದ್ಯಂತ ದೊಡ್ಡ ಬೆಂಬಲಿಗರ ಪಡೆಯನ್ನೇ ಕಟ್ಟಿಕೊಂಡವರು. ಕನರ್ಾಟಕದಲ್ಲಿಯೂ ತಮ್ಮ ಸಮಾಜವಾದಿ ಬೇರುಗಳನ್ನು ಗಟ್ಟಿಯಾಗಿ ನೆಟ್ಟಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಸರಸ್ವತಿ ಚಿಮ್ಮಲಗಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ರಾಮಮನೋಹರ ಲೋಹಿಯಾ ಬ್ರಿಟೀಷರಿಂದ 20ಬಾರಿ ಜೈಲು ಶಿಕ್ಷೆಗೆ ಗುರಿಯಾಗಬೇಕಾಯಿತು. ಆದರೆ ಸ್ವಾತಂತ್ರ್ಯಾನಂತರ ಕೂಡಾ ಇವರು 12ಬಾರಿ ಜೈಲು ಪಾಲಾಗಿರುವುದು ದುರಂತ. ಇದು ಇವರ ವ್ಯವಸ್ಥೆ ವಿರುದ್ಧದ ಬಂಡಾಯ ಮನೋಭಾವಕ್ಕೆ ಸಾಕ್ಷಿ ಎಂದರು.

ಪ್ರತಿಷ್ಠಾನ ಅಧ್ಯಕ್ಷ ವಿ.ಸಿ.ನಾಗಠಾಣ ಸ್ವಾಗತಿಸಿದರು. ಬಿ.ಕೆ.ಗೋಟ್ಯಾಳ ನಿರೂಪಿಸಿದರು. ಶ್ರೀಮತಿ ಬಿ.ಸಿ.ಹತ್ತಿ ವಂದಿಸಿದರು. ಮಹಾಂತ ಗುಲಗಂಜಿ, ಕೆ.ಎಫ್.ಅಂಕಲಗಿ, ದೊಡ್ಡಣ್ಣ ಬಜಂತ್ರಿ, ಎಸ್.ಎಸ್.ತುಪ್ಪದ, ಬಿ.ಎಂ.ಸಜ್ಜನ, ಎಸ್.ಬಿ.ದೊಡಮನಿ, ಡಾ.ವಿ.ಡಿ.ಐಹೊಳ್ಳಿ, ಎಸ್.ವೈ.ಗದಗ, ವಿ.ಎಸ್.ತೇಲಿ, ಆನಂದ ಚಿನಿವಾಲ, ಡಿ.ಆರ್.ಬನಸೊಡೆ, ಎಂ.ಎಚ್.ಗುಡಿ, ಎಸ್.ಎಂ.ತೊಗರಿ,ಡಿ.ಆರ್.ನಿಡೋಣಿ, ಡಿ.ಕೆ.ತಾವಂಸೆ ಮತ್ತಿತರರು ಉಪಸ್ಥಿತರಿದ್ದರು.