‘ಅಹಿಂದ’ ರಾಜ್ಯ ಸಂಚಾಲಕರಾಗಿ ವಿಜಯ್ ಭರತ್ ನೇಮಕ
Vijay Bharat appointed as 'Ahinda' state coordinator
ಬಳ್ಳಾರಿ 12: ಶತಮಾನಗಳಿಂದಲೂ ಶೋಷಿಸಲ್ಪಡುತ್ತಿರುವ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತರಿಗೆ ನ್ಯಾಯ ದೊರಕಿಸಿ ಕೊಡಲು ‘ಅಹಿಂದ’ ಚಳುವಳಿಯನ್ನು ಹುಟ್ಟು ಹಾಕಿದ್ದು ಯಾದಗಿರಿ ಜಿಲ್ಲೆಯ ಮಿನರಲ್ ವಾಟರ್ ನ ವಿಜಯ್ ಭರತ್ ಮಾರುತಿರಾವ್ ಇವರನ್ನು ರಾಜ್ಯ ಸಂಚಾಲಕರನ್ನಾಗಿ ನಿಯೋಜಿಸಲಾಗಿದೆ.
‘ಅಹಿಂದ’ ರಾಜ್ಯ ಮುಖ್ಯ ಸಂಚಾಲಕರಾದ ಮೂರ್ತಿ ಸಿದ್ದಯ್ಯ ಈ ಕುರಿತು ಪ್ರಕಟಣೆ ನೀಡಿದ್ದು, ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದೆ. "ಅಹಿಂದ" -ಚಳುವಳಿ ಸಂಘಟನೆಯ ರಾಜ್ಯ ಘಟಕದ ಕಲ್ಯಾಣ ಕರ್ನಾಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.ಅಹಿಂದ ಸಮುದಾಯಗಳ ಬದುಕನ್ನು ಬದಲಾಯಿಸಲು ಮತ್ತು ಸೇವಾ ಭಾವನೆಗಳಿಂದ ಸೇವೆ ಮಾಡಲು, "ಅಹಿಂದ" -ಚಳುವಳಿ ಸಂಘಟಣೆಯ ಬೈಲಾ, ಉದ್ದೇಶಗಳು, ಗುರಿಗಳನ್ನು ಪಾಲಿಸುವುದು, ಅದರಂತೆ ಕಾರ್ಯನಿರ್ವಹಿಸಲು ಸಲಹೆ ನೀಡಿರುವ ಮೂರ್ತಿ ಸಿದ್ದಯ್ಯ ಇವರು, ಹೆಚ್ಚುವರಿಯಾಗಿ, ರಾಜ್ಯದ "ಕಲ್ಯಾಣ ಕರ್ನಾಟಕ" ಜಿಲ್ಲೆಗಳಾದ ಯಾದಗಿರಿ, ಬಿದರ್, ಗುಲ್ಬರ್ಗಾ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಂಘಟಣೆಯ "ಜಿಲ್ಲಾ ಘಟಕ’ಗಳನ್ನು ರಚನೆ ಮಾಡಲು ಸೂಕ್ತ ಅಭ್ಯರ್ಥಿಗಳನ್ನು ಶಿಫಾರಸ್ಸು ಮಾಡುವುದು; ರಾಜ್ಯ ಮುಖ್ಯ ಸಂಚಾಲಕರು ಸೂಚಿಸಿದ ಜಿಲ್ಲೆಗಳ ಉಸ್ತುವಾರಿ ಕಾರ್ಯಗಳನ್ನು ನಿರ್ವಹಿಸಲು ಸೂಚಿಸಿದ್ದಾರೆ.
ರಾಜ್ಯವ್ಯಾಪಿ ಅಹಿಂದ ಸಮುದಾಯಗಳ ಆರ್ಥಿಕಶಕ್ತಿ ವೃದ್ಧಿಗಾಗಿ "ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಬ್ಯಾಂಕ್" ಸ್ಥಾಪನೆ ಮಾಡಲು, ಉದ್ದೇಶಗಳ ಗುರಿಗಳನ್ನು ಜಾರಿಗೊಳಿಸಲು, ಸಮುದಾಯ, ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಮೂಲಕ ಕ್ರಮವಹಿಸಲು ವಿಜಯ್ ಭರತ್ ಅವರಿಗೆ ಸೂಚಿಸಿ ಈ ಪದನಾಮ ನೀಡಿರುವುದಾಗಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 