ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ವಿದ್ಯಾಸಾಥಿ ಕೇಂದ್ರ ಆರಂಭ
Vidyasathi Center launched to improve the quality of learning for children
ದೇವರ ಹಿಪ್ಪರಗಿ 15: ಮಕ್ಕಳು ತಮ್ಮ ತರಗತಿಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣ ಪಡೆಯುವುದು ಅವರ ಪ್ರಮುಖ ಹಕ್ಕುಗಳಲ್ಲಿ ಒಂದಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಶಾಲಾ ಅವಧಿಯನ್ನು ಹೊರತುಪಡಿಸಿ ಹೆಚ್ಚಿನ ಕಲಿಕೆಯನ್ನು ಒದಗಿಸಲು ಸೇವಾ ಮನೋಭಾವನೆ ಉಳ್ಳ ವಿದ್ಯಾಸಾಥಿ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ನೇಹ ಐಎಲ್‌ಪಿ ಸಂಯೋಜಕ ಸಾಗರ ಘಾಟಗೆ ಹೇಳಿದರು.
ತಾಲೂಕಿನ ಕುದರಗೊಂಡ ಗ್ರಾಮದಲ್ಲಿ ವಿದ್ಯಾಸಾಥಿ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಒಟ್ಟು 15 ಗ್ರಾಮಗಳಲ್ಲಿ ಈ ವಿದ್ಯಾಸಾಥಿ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದ್ದು, ತಳಪಾಯ ಕಲಿಕಾ ಮೌಲ್ಯಮಾಪನ (ಈಐಂ) ಮಾಡಿ ಪ್ರತಿ ಕೇಂದ್ರಕ್ಕೆ 30 ಮಕ್ಕಳನ್ನು ಗುರುತಿಸಲಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ. ಶಾಲಾ ಅವಧಿಯನ್ನು ಹೊರತುಪಡಿಸಿ, ಕೇಂದ್ರ ನಿಗದಿಪಡಿಸಿದ ಸಮಯಕ್ಕೆ ಮಕ್ಕಳನ್ನು ಕಳುಹಿಸುವಂತೆ ಪಾಲಕರಿಗೆ ತಿಳಿಸಿದರು.
ಶಾಲೆಯ ಉತ್ಸಾಹಿ ಸಹ ಶಿಕ್ಷಕರಾದ ಎಸ್.ಎಸ್.ಬಿರಾದಾರ ಮಾತನಾಡಿ ನಾವು ಎಲ್ಲಾ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ ಚಟುವಟಿಕೆ ಮೂಲಕ ಅವರಿಗೆ ಶಿಕ್ಷಣ ಕೊಡುತ್ತೇವೆ ಮತ್ತು ಶಾಲೆಯಲ್ಲಿ ಗ್ರಂಥಾಲಯ ಇದೆ,ನಾವು ಪ್ರತಿ ಗುರುವಾರ ಮಕ್ಕಳಿಗೆ ಕ್ವಿಜ್ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಇದರಲ್ಲಿ ಆಯ್ಕೆಯಾದ ಮಕ್ಕಳಿಗೆ ಪ್ರೋತ್ಸಾಹ ದಾಯಕವಾಗಿ ಬಹುಮಾನ ಕೊಡುತ್ತೇವೆ. ಮುಂಬರುವ ದಿನಗಳಲ್ಲಿ ನಮ್ಮ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ಮಾಡುವ ಗುರಿ ನಮ್ಮದಾಗಿದೆ ಎಂದರು. ಇದಕ್ಕೆ ಪಾಲಕ ಪೋಷಕ ಹಾಗೂ ಖಆಒಅ ಎಲ್ಲರ ಸಹಕಾರ ಬಹಳ ಪ್ರಮುಖವಾಗಿದೆ. ಏನಾದರೂ ಸಲಹೆಗಳು ಇದ್ದರೆ ನಾವು ಒಂದು ಸಲಹಾ ಪೆಟ್ಟಿಗೆ ಮಾಡಿದ್ದೇವೆ. ಅದರಲ್ಲಿ ಮಕ್ಕಳು ಪಾಲಕರು ಸಲಹೆಗಳನ್ನು ಬರೆದು ಹಾಕಬಹುದು. ಇದರ ಮೂಲಕ ನಾವು ಮುಂಬರುವ ದಿನಗಳಲ್ಲಿ ಅವುಗಳನ್ನು ಸರಿಪಡಿಸುತ್ತೇವೆ ಎಂದರು.
ಗ್ರಾಮ ಪಂಚಾಯತ ಸದಸ್ಯರಾದ ಬಾಬುಗೌಡ ಬಿರಾದಾರ, ಖಆಒಅ ಅಧ್ಯಕ್ಷರಾದ ಲಕ್ಕಪ್ಪ ಪೂಜಾರಿ, ಗ್ರಾಮ ಪಂಚಾಯತ ಸಿಬ್ಬಂದಿ ಕಾಂತು ರಾಠೋಡ, ಶಾಲೆಯ ಮುಖ್ಯ ಗುರುಗಳಾದ ಎಸ್.ಆರ್.ಮಾದರ, ವಿದ್ಯಾಸಾಥಿ ಸ್ವಯಂ ಸೇವಕರಾದ ತುಳಜಾರಾಮ ಹರಿಜನ, ಸ್ನೇಹ-ಐ ಎಲ್ ಪಿ ಸಂಪನ್ಮೂಲ ವ್ಯಕ್ತಿ ಗೌಡಪ್ಪ ಬಿರಾದಾರ, ಎಲ್ಲ ಮಕ್ಕಳ ಪಾಲಕರು ಹಾಗೂ ಮಕ್ಕಳು ಉಪಸ್ಥಿತಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 