ಲೋಕದರ್ಶವ ವರದಿ
ರಾಣಿಬೆನ್ನೂರ15:ವಿದ್ಯಾಥರ್ಿಯ ಜೀವನದ ಬದುಕು ಅತೀ ಸುಂದರವಾದದ್ದು, ಇಂತಹ ಸಂದರ್ಭದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡು, ಓದು ಬರಹದ ಜೊತೆಗೆ ಆತ್ಮಸ್ಥೈರ್ಯದಿಂದ ಪರೀಕ್ಷೆಯನ್ನು ಎದುರಿಸಿದಾಗ ನೀವು ಯಶಸ್ಸು ಹೊಂದಲು ಸಾಧ್ಯ ಎಂದು ಶಿಕ್ಷಣ ಪ್ರೇಮಿ ಅಪ್ಪಾಜಿ ಒಡೆಯರ ಹೇಳಿದರು.
ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶಾರದಾ ಮಾತೆಯ ಪೂಜಾ ಹಾಗೂ ಹತ್ತನೇ ತರಗತಿ ವಿದ್ಯಾಥರ್ಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಪರೀಕ್ಷೆ ಎಂಬುದು ಅದೊಂದು ಯುದ್ಧವಲ್ಲ.
ಭಯಪಡದೆ ಹಬ್ಬದಂತೆ ಸಂಭ್ರಮಿಸಿ ಸ್ವಾಗತಿಸಿ ಪರೀಕ್ಷೆ ಬರೆಯಬೇಕು ಎಂದರು.
ಶಿಕ್ಷಕ ಟಿ.ಎಸ್.ಸಂದೀಪ ಮಾತನಾಡಿ, ಬೀಳ್ಕೊಡುಗೆ ಎಂಬುವುದು ಶಿಕ್ಷಕರ ಹಾಗೂ ಮಕ್ಕಳ ಸಂಬಂಧವನ್ನು ಕಡಿತಗೊಳಿಸುವುದಲ್ಲ. ಗುರು ಶಿಷ್ಯರ ಬಾಂಧವ್ಯ ಬೆಸೆಯುವ ಕಾರ್ಯಕ್ರಮ. ವಿದ್ಯಾಥರ್ಿಗಳ ಭವಿಷ್ಯದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅನಿವಾರ್ಯತೆಯಿಂದ ಭಾವನಾತ್ಮಕವಾಗಿ ಬೀಳ್ಕೊಡೆಗೆ ಹಾಗೂ ಶಾರದಾ ದೇವಿಯ ಪೂಜಾ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು.
ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು ಹೆಚ್ಚಿನ ಅಂಕಗಳಿಸಿ, ಶಾಲೆಗೆ ಹಾಗೂ ಗ್ರಾಮಕ್ಕೆ ಕೀತರ್ಿ ತಂದಾಗ ತಾವು ಕಲಿತದ್ದಕ್ಕೂ ಸಾರ್ಥಕವಾಗುತ್ತದೆ. ಮೊಬೈಲ್ ಮತ್ತು ಟೀವಿಯಿಂದ ದೂರವಿದ್ದು ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿ ಹೆಚ್ಚಿನ ಸಮಯವನ್ನು ಪಠ್ಯಪುಸ್ತಕದತ್ತ ಚಿತ್ತ ಹರಿಸಿ ಓದುವುದರಲ್ಲಿ ಮತ್ತು ಬರೆಯುವುದರಲ್ಲಿ ತಲ್ಲೀನರಾಗಬೇಕು ಅಂದಾಗ ಪರೀಕ್ಷೆ ಬರೆಯಲು ಸುಲಭವಾಗುತ್ತದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ನಾಗನೂರು ಅಧ್ಯಕ್ಷತೆವಹಿಸಿದ್ದರು. ಸದಸ್ಯರಾದ ದೇವಿಂದ್ರಪ್ಪ ಹರಿಜನ, ವೀರಣ್ಣ ಕಂಬಳಿ, ಶಿಕ್ಷಕರಾದ ಐ.ಎಚ್.ಮೈದೂರ, ಸೈಯದ್ ಜುಲ್ಫಿಕರ್, ನವೀನ್ ಅಂಬಿಗೇರ, ರೇಣುಕಾಸ್ವಾಮಿ, ಕಸ್ತೂರಮ್ಮ, ಹೊನ್ನಪ್ಪ ಶಿಗ್ಲಿ, ಬಸವರಾಜ ಬಾಕರ್ಿ, ಮಾರುತಿ ಶಿಂಪಿ, ಎಸ್.ಎನ್.ಹಲವಾಗಲ, ಅಂಗನವಾಡಿ ಶಿಕ್ಷಕಿಯರಾದ ಮಂಗಳಾ ಉಪ್ಪಿನ, ವನಜಾಕ್ಷಿ ಪೂಜಾರ ಸೇರಿದಂತೆ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.