ಹಾವೇರಿ25 :ಸತತ ಓದಿನಿಂದ ಹಾಗೂ ಪರಿಶ್ರಮದ ಮೂಲಕ ಜೀವನದ ಯಶಸ್ಸುಗಳಿಕೆ ಸಾಧ್ಯವಾಗುತ್ತದೆ. ಪಿಯುಸಿ ಹಂತ ಬದುಕಿನ ಮಹತ್ವದ ಹಂತವಾಗಿದ್ದು, ಛಲದಿಂದ ಪರೀಕ್ಷೆ ಎದುರಿಸಿ ಎಂದು ಹಾವೇರಿ ತಹಶೀಲ್ದಾರ ಶಂಕರ ಬಾರ್ಕಿ ಹೇಳಿದರು.
ಇಲ್ಲಿನ ಬಸವೇಶ್ವರ ನಗರದ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸರಸ್ವತಿ ಪೂಜೆ ಹಾಗೂ ದ್ವೀತಿಯ ಪಿಯು ವಿದ್ಯಾಥರ್ಿಗಳ ಬಿಳ್ಕೊಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಸ್ಪೂತರ್ಿದಾಯಕ ಮಾತನಾಡಿದರು.
ವಿದ್ಯಾಥರ್ಿಗಳಿಗೆ ತಾವು ಕಲಿತ ವಿದ್ಯಾವನ್ನು ಅಕ್ಷರದ ರೂಪದಲ್ಲಿ ಬರೆಯುವುದೇ ಪರೀಕ್ಷೆ ಅದೇನೂ ಯುದ್ಧವಲ್ಲ.ಸಂಭ್ರಮದ ಮೂಲಕ ಭಯವನ್ನು ಹೋಗಲಾಡಿಸಿ ಶಿಕ್ಷಕರ ಮಾರ್ಗದರ್ಶನದೊಂದಿಗೆ ಪರೀಕ್ಷೆ ಎದುರಿಸಲು ಸಜ್ಜಾಗಿರಿ.ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲಾ ಒಂದು ಪ್ರತಿಭೆ ಹೊಂದಿರುತ್ತಾರೆ. ಶಿಕ್ಷಕರು ವಿದ್ಯಾಥರ್ಿಗಳ ಆಭಿರುಚಿ ತಿಳಿದು ಅವರ ಗುರಿ ಗುರುತಿಸಿ ಉನ್ನತ ಹುದ್ದೆಗೆ ಹೋಗಲು ಸದಾ ಸಲಹೆ ಸೂಚನೆ ನೀಡಿರಿ. ಸಾಮಾಜಿಕವಾಗಿ ತಿಳುವಳಿಕೆ ಮುಖ್ಯವಾಗಿದ್ದು, ಸಮಾಜದಲ್ಲಿ ಜವಾಬ್ದಾರಿಯುತವಾಗಿ ಬದುಕಬೇಕಾಗಿದೆ. ಈ ವಿದ್ಯಾಥರ್ಿ ಹಂತದಲ್ಲಿ ಸರಿಯಾಗಿ ಅಭ್ಯಾಸ ಮಾಡಿದರೆ ಬದುಕಿನಲ್ಲಿ ಮುಂದೆ ಆಥರ್ಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದು ವಿದ್ಯಾಥರ್ಿ ಜೀವನದಲ್ಲಿ ಯಶಸ್ಸು ಗಳಿಕೆಯ ಮಾರ್ಗದರ್ಶನ ಮಾಡಿದರು.
ನಗರಸಭೆ ಸದಸ್ಯರಾದ ಸಂಜೀವಕುಮಾರ ನೀರಲಗಿ ಮಾತನಾಡಿ ಸ್ವಾಮಿ ವಿವೇಕಾನಂದ ಪಿಯು ಕಾಲೇಜು ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.ವಿದ್ಯಾಥರ್ಿಗಳ ಶ್ರಯೋಭಿವೃದ್ಧಿಯೇ ಇಲ್ಲಿನ ಪ್ರಾಧ್ಯಾಪಕದ ಮುಖ್ಯ ಕಾಯಕವಾಗಿದೆ. ಮುಂದಿನ ದಿನಮಾನಗಳಲ್ಲಿ ಈ ಕಾಲೇಜಿನ ವಿದ್ಯಾಥರ್ಿಗಳು ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಪ್ರಾಚಾರ್ಯರಾದ ರವಿಕುಮಾರ ಪೂಜಾರ ಮಾತನಾಡಿ ಶಿಕ್ಷಣವೇ ಜೀವನದ ಎಲ್ಲ ಸಮಸ್ಯೆಗಳ ಪರಿಹಾರವಾಗಿದ್ದು, ವಿದ್ಯಾಥರ್ಿಗಳ ಭವ್ಯ ಭವಿಷ್ಯ ನಿಮರ್ಾಣವೇ ನಮ್ಮ ಗುರಿಯಾಗಿದೆ. ಕಾಲೇಜಿನ ಎಲ್ಲ ಪ್ರಾಧ್ಯಾಪಕರ ಸಹಕಾರದಿಂದ ವಿದ್ಯಾಥರ್ಿಗಳ ಸವರ್ಾಂಗೀಣ ವಿಕಾಸಕ್ಕೆ ಪ್ರೇರಣೆಯಾಗಿದೆ.ಉತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಈ ಬಾರಿ ನಮ್ಮ ಕಾಲೇಜಿನ ವಿದ್ಯಾಥರ್ಿಗಳು ರಾಜ್ಯದ ಟಾಪ್ 10 ಸ್ಥಾನಗಳಲ್ಲಿ 2-3 ವಿದ್ಯಾಥರ್ಿಗಳು ಬರಲಿದ್ದಾರೆ. ನಿರಂತರವಾಗಿ ಅಭ್ಯಾಸ ಮಾಡಿಸಲಾಗುತ್ತಿದೆ.ವಿದ್ಯಾಥರ್ಿಗಳಿಗೆ ಸ್ಪಧರ್ಾತ್ಮಕ ಪರೀಕ್ಷೆಗೆ ಸಿದ್ಧತೆ ನಡಿಸಲಾಗುತ್ತದೆ.ವಿದ್ಯಾಥರ್ಿಗಳು ಉತ್ತಮವಾಗಿ ಪರೀಕ್ಷೆ ಎದುರಿಸಿ ತಂದೆ ತಾಯಿ ಪೋಷಕರ ಹಾಗೂ ವಿದ್ಯಾಕೇಂದ್ರದ ಗೌರವ ಹೆಚ್ಚಿಸುವಂತಾಗಲಿ ಎಂದು ಮಾರ್ಗದರ್ಶನ ನೀಡಿದರು. ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ಮಾಡಿದ ಹಾವೇರಿ ತಹಶೀಲ್ದಾರ ಶಂಕರ ಬಾಕರ್ಿಯವರನ್ನು ಸ್ವಾಮಿ ವಿವೇಕಾನಂದ ಸಂಸ್ಥೆ ಹಾಗೂ ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾಭಾರತಿ ಶಾಲೆಯ ಅಧ್ಯಕ್ಷ ಎಂ.ಕೆ ಪಾಟೀಲ, ಪ್ರಾಧ್ಯಾಪಕರಾದ ರಾಜೇಶ ಆರ್.ಶೃತಿ ಸುರಳಿಹಳ್ಳಿ, ರಘುಕುಮಾರ ಎಸ್.ಡಿ.ಅಮೃತಾ ದಾಮನಗಟ್ಟಿ, ವಿದ್ಯಾ ಶರೂರ, ವೀಣಾ ಅಂಗಡಿ, ಶಾಂತಾ ಗುಡಿ,ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿ ವರ್ಗದದವರು ಪಾಲ್ಗೊಂಡಿದ್ದರು.