ದಾನದಲ್ಲಿ ಶ್ರೇಷ್ಠವಾದದ್ದು ವಿದ್ಯಾದಾನ :ಗುರುಶಾಂತೇಶ್ವರ ಶ್ರೀ
ಲೋಕದರ್ಶನ ವರದಿ
ಹಾವೇರಿ22: ಜಗತ್ತಿನಲ್ಲಿ ಶ್ರೇಷ್ಠವಾದ ದಾನ ಅನ್ನದಾನ ಅದಕ್ಕಿಂತಲೂ ಶ್ರೇಷ್ಠವಾದ ದಾನ ಯಾವುದೆಂದರೇ ವಿದ್ಯಾದಾನ ಅನ್ನ ದಾನ ಕ್ಷಣಿಕ ತೃಪ್ತಿ ನೀಡಿದರೆ ವಿದ್ಯಾದಾನ ಜೀವನದ್ದೂಕ್ಕೂ ತೃಪ್ತಿ ನೀಡುತ್ತದೆ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಗುತ್ತಲ ಪಟ್ಟಣದ ಡಾ. ಎಸ್. ರಾಧಕೃಷ್ಣನ್ ಕಿರಿಯ(ವಸತಿಯುತ) ಪ್ರಾಥಮಿಕ ಶಾಲೆಯಲ್ಲಿ ಇತ್ತಿಚೇಗೆ ಜರುಗಿದ 7ನೇ ವಾಷರ್ಿಕ ಸ್ನೇಹ ಸಮ್ಮೇಳನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ ಸಂಸ್ಥೆಯ ಸಂಸ್ಥಾಪಕರಾದ ನಾಗರಾಜ ತೇಲ್ಕರ ಅವರ ನಿಸ್ವಾರ್ಥ ಸೇವಾ ಮನೋಭಾವ ದಿಂದ ಮಕ್ಕಳಿಗೆ ಅನ್ನದಾನ ವಿದ್ಯಾದಾನ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ತಾನು ದುಡಿದು ಮಕ್ಕಳಿಗೆ ಸಂಸ್ಕಾರ ನೀಡಿ ಒಳ್ಳೇಯ ಪ್ರಜೆಯನ್ನಾಗಿ ರೂಪಿಸುತ್ತಿರುವುದು ಸಂತಸವೆನಿಸುತ್ತಿದೆ ಎಂದರು.
ನಾಗರಾಜ ತೇಲ್ಕರ ಮಾತನಾಡಿ ನಿರ್ಗತಿಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಕಟ್ಟಿದ್ದೇನೆ ಮನುಷ್ಯನಿಗೆ ಹಣ ಬಲ ಕ್ಕಿಂತ ಗುಣಬಲ ಜೊತೆಗೆ ಗುರುವಿನ ಆಶರ್ಿವಾದ ಇದ್ದರೇ ಏನಾದರು ಸಾಧಿಸಬಲ್ಲರು ಎಂಬುದಕ್ಕೆ ಈ ಸಂಸ್ಥೆಯೇ ಸಾಕ್ಷಿ ಸಂಸ್ಥೆಯನ್ನು ಗುರುಕುಲ ಮಾದರಿ ಪದ್ದತಿಯಲ್ಲಿ ಬೆಳಸಬೇಕೆಂಬ ಆಶಯ ನನ್ನದಾಗಿದ್ದು ಅದಕೆಲ್ಲ ಸಹಕಾರ ಸಿಗುವಂತಾಗಬೇಕಾಗಿದೆ ಎಂದರು. ಸಮಾರಂಭದಲ್ಲಿ ಪಿ.ಎನ್.ನೆಗಳೂರಮಠ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ನಾಗರಾಜ ಇಚ್ಚಂಗಿ ಹೆಚ್.ಬಿ ಹಳ್ಳೆಪ್ಪನವರ. ಆರ್.ಆಯ್.ಮಿಶ್ರಿಕೋಟಿ ಬ್ರಹ್ಮ ಸುಮಂಗಲಾ ಅಕ್ಕ ಇತರರು ಪಾಲ್ಗೊಂಡಿದ್ದರು. ನಾಗರಾಜ ತೇಲ್ಕಕರ ಸ್ವಾಗತಿಸಿದರು. ಜ್ಯೋತಿ ಬಿ.ಎಸ್.ನಿರೂಪಿಸಿದರು.
ನಂತರ ಶಾಲಾ ಮಕ್ಕಳದಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಜರುಗಿದವು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 