ಮುಂಬೈ, ಆಗಸ್ಟ್ 24: ಚಿಕ್ಕವರು, ದೊಡ್ಡವರು ಎಂಬ ಬೇಧ ಬಾವ ವಿಲ್ಲದೆ ಮನರಂಜನಾ ಉದ್ಯಮ ವಲಯ ದೃಷ್ಟಿ ಈಗ ವೆಬ್ ಸೀರೀಸ್ ಗಳ ಮೇಲಿದೆ.
ಈಗಾಗಲೇ ಬಾಲಿವುಡ್ ಜನಪ್ರಿಯ ನಟರಾದ ಸೈಫ್ ಅಲಿ ಖಾನ್ ಮತ್ತು ನವಾಜುದ್ದೀನ್ ಸಿದ್ದಿಕಿ ವೆಬ್ ಸರಣಿಯಲ್ಲಿ ಕಾಣಿಸಿಕೊಂಡು ಡಿಜಿಟಲ್ ಮಾಧ್ಯಮದಲ್ಲಿ ತ್ವರಿತ ಗತಿಯಲ್ಲಿ ಜನಪ್ರಿಯಗೊಂಡಿದ್ದಾರೆ.
ನಟಿ ವಿದ್ಯಾ ಬಾಲನ್ ಕೂಡ ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಇಂದಿರಾಗಾಂಧಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ವೆಬ್ ಸರಣಿಯಲ್ಲಿ ವಿದ್ಯಾ ಬಾಲನ್ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಸರಣಿಯ ನಿಮರ್ಾಪಕಿ ಕೂಡಾ ವಿದ್ಯಾಬಾಲನ್ ಎಂಬುದು ಗಮನಾರ್ಹ ಅಂಶ .
ಈ ಕುರಿತು ಮಾತನಾಡಿರುವ ವಿದ್ಯಾ ಬಾಲನ್, "ಎರಡು ವರ್ಷಗಳ ಹಿಂದೆ ಇಂದಿರಾ ಗಾಂಧಿ ಅವರ ಜೀವನ ಕುರಿತ ಪ್ರಕಟಗೊಂಡ ಪುಸ್ತಕದ ಹಕ್ಕುಗಳನ್ನು ಖರೀದಿಸಿದ್ದೇನೆ. ಆ ಸಮಯದಲ್ಲಿ, ವೆಬ್ ಸರಣಿಯ ಬಗ್ಗೆ ನನಗೆ ಯಾವುದೇ ತಿಳುವಳಿಕೆ ಇರಲಿಲ್ಲ. ಚಲನಚಿತ್ರ ಮತ್ತು ವೆಬ್ ಸರಣಿ ನಿಮರ್ಾಣದ ನಡುವೆ ಹೆಚ್ಚಿನ ವ್ಯತ್ಯಾಸವಿದೆ. ಚಲನಚಿತ್ರ ನಿಮರ್ಿಸುವುದಕ್ಕಿಂತ ವೆಬ್ ಸರಣಿ ನಿಮರ್ಾಣ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ.
ಇಂದಿರಾ ಗಾಂಧಿ ಅವರಂತಹ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡಲು ನಾವು ಬಯಸಿದಾಗ, ಸ್ವಲ್ಪ ಹೆಚ್ಚು ಸಮಯ ಅಧ್ಯಯನ ಮಾಡಬೇಕಾಗುತ್ತದೆ. ಸ್ಕ್ರಿಪ್ಟ್ ಕೆಲಸ ಪ್ರಸ್ತುತ ನಡೆಯುತ್ತಿದೆ. ನಾನು ಈ ವೆಬ್ ಸರಣಿಯನ್ನು ಒಂದು ಮತ್ತು ಎರಡು ವರ್ಷಗಳಲ್ಲಿ ಪ್ರೇಕ್ಷಕರ ಮುಂದೆ ತರಲಿದ್ದೇನೆ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.