ಧಾರವಾಡ 25: ನೃತ್ಯದಲ್ಲಿ ಸಾಧನೆಯ ಸಿದ್ಧಿ ಕಂಡವರಿರಬಹುದು, ಅಭಿನಯದಲ್ಲಿ ಪರಿಪೂರ್ಣತೆ ಸಾಧಿಸಿದವರಿರಬಹುದು. ಅದರಲ್ಲಿಯೂ ಭರತನಾಟ್ಯ ಮತ್ತು ವಚನನೃತ್ಯ ಈ ಎರಡಲ್ಲೂ ಸಾಧನೆಯ ಶಿಖರವೇರಿದ ನಾಗರತ್ನಾ ಹಡಗಲಿ ನೃತ್ಯ ಕ್ಷೇತ್ರದಲ್ಲಿ ಅಪ್ರತಿಮ ಕಲಾವಿದೆ.
ಸದ್ಯ ನಾಗನೂರು ಶ್ರೀರುದ್ರಾಕ್ಷಿಮಠದವರು ಏರ್ಪಡಿಸಿದ ಪದ್ಮಾವತಿ ಅಂಗಡಿ ಅವರ ಸ್ಮರಣೆಯಲ್ಲಿ "ಮಹಿಳಾ ಸಂಗಮ" ಕಾರ್ಯಕ್ರಮದಲ್ಲಿ ಪ್ರತಿವರ್ಷ ಮಹಿಳಾ ಸಾಧಕರನ್ನು ಗುರುತಿಸಿ ಮಹಿಳಾ ಪ್ರಶಸ್ತಿ ನೀಡಲಾಗುವ ಈ ಪ್ರಶಸ್ತಿಯು 10 ಸಾವಿರ ನಗದು ಗೌರವ ಪ್ರಶಸ್ತಿ ಫಲಕವನ್ನೊಳಗೊಂಡಿದ್ದು ಈ ವéರ್ಷ ಅನೇಕ ಶರಣರ 111 ವಚನಗಳಿಗೆ ನೃತ್ಯ ಸಂಯೂಜನೆ ಮತ್ತು 211 ಮಕ್ಕಳಿಂದ ಒಂದೇ ದಿನದಲ್ಲಿ 15 ಗಂಟೆಗಳ ಕಾಲ ನಿರಂತರ ನೃತ್ಯ ಪ್ರದರ್ಶನ ನೀಡಿದ ಸಾಧನೆಯನ್ನು ಮನಗಂಡು ಧಾರವಾಡದ ರತಿಕಾ ನೃತ್ಯ ನಿಕೇತನ ಭರತನಾಟ್ಯ ಶಾಲೆಯ ವಿದೂಷಿ ನಾಗರತ್ನಾ ನಾಗರಾಜ ಹಡಗಲಿ ಇವರಿಗೆ "ಮಹಿಳಾ ರತ್ನ" ಪ್ರಶಸ್ತಿ ಯನ್ನು ಬೆಳಗಾವಿಯ ಎಸ.ಜಿ.ಬಾಳೇಕುಂದ್ರಿ ತಾತ್ರಿಂಕ ಮಹಾವಿದ್ಯಾಲಯದ ಸಭಾಭವನದಲ್ಲಿ ನೀಡಿ ಗೌರವಿಸಲಾಯಿತು.
ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಸಾವಳಗೀಶ್ವರದೇವರು ಉತ್ತರಾಧಿಕಾರಿಗಳು ರುದ್ರಾಕ್ಷಿಮಠ ನಾಗನೂರು ಬೆಳಗಾವಿ ಇವರು ನೇತೃತ್ವ ವಹಿಸಿದ್ದರು. ಧಾರವಾಡದ ಡಾ. ಉಜ್ವಲಾ ಹಿರೇಮಠ ಉಪಸ್ಥಿತರಿದ್ದರು. ಬೆಳಗಾವಿಯ ಗ್ರಾಮೀಣ ಶಾಸಕಿ ಲಕ್ಷೀ ಹೆಬ್ಬಾಳಕರ ಪ್ರಶಸ್ತಿ ಪ್ರಧಾನ ಮಾಡಿದರು.