ಕಾರ್ಮಿಕರ ಕಲ್ಯಾಣ ಮತ್ತು ಹಕ್ಕುಗಳ ರಕ್ಷಣೆ ಕುರಿತು ಜಿಲ್ಲಾಧಿಕಾರಿಗಳಿಂದ ವಿಡಿಯೋ ಸಂವಾದ

Video interaction by District Collector on workers welfare and protection of rights

ಕಾರ್ಮಿಕರ ಕಲ್ಯಾಣ ಮತ್ತು ಹಕ್ಕುಗಳ ರಕ್ಷಣೆ ಕುರಿತು ಜಿಲ್ಲಾಧಿಕಾರಿಗಳಿಂದ  ವಿಡಿಯೋ ಸಂವಾದ 

ವಿಜಯಪುರ ಜ.23 :  ಜಿಲ್ಲೆಯಲ್ಲಿರುವ ಪ್ರತಿಯೊಂದು ಇಟ್ಟಂಗಿ ಭಟ್ಟಿಗಳ ಮಾಹಿತಿ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.  

ಕಾರ್ಮಿಕರ ಕಲ್ಯಾಣ ಮತ್ತು ಹಕ್ಕುಗಳ ರಕ್ಷಣೆ ಕುರಿತು ಗುರುವಾರ ಬೆಳಿಗ್ಗೆ 9.30ಕ್ಕೆ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಇತ್ತೀಚೆಗೆ ನಡೆದ ಇಟ್ಟಂಗಿ ಬಟ್ಟೆಯಲ್ಲಿ ಕಾರ್ಮಿಕರಿಗೆ ಹಲ್ಲೆ ಮಾಡಿದ ಘಟನೆ ಕುರಿತು ಜಂಟಿ ತಪಾಸಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.  

 ಜಿಲ್ಲೆಯಲ್ಲಿನ ಇಟ್ಟಂಗಿ ಬಟ್ಟಿಗಳ ಮಾಹಿತಿ ಅದರಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ವಿವರ, ಆಧಾರ ಕಾರ್ಡ್‌, ಪ.ಜಾತಿ/ಪ.ಪಂ ಕಾರ್ಮಿಕರ ಮಾಹಿತಿ ಮಹಿಳೆ ಹಾಗೂ ಮಕ್ಕಳ ಆರ್ಥಿಕ ಪರಿಸ್ಥಿತಿ, ಮಕ್ಕಳ ಶಿಕ್ಷಣ ಕುರಿತು ಸಮಿತಿಯನ್ನು ತಾಲೂಕು ಮಟ್ಟದ ರಚಿಸಿ ಸಮಗ್ರ ಮಾಹಿತಿ ಒದಗಿಸುವಂತೆ ತಿಳಿಸಿದರು.  

ತಾಲೂಕಿನ ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸಮಿತಿಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ವೃತ್ತ ಆರಕ್ಷಕ ನೀರೀಕ್ಷಿಕರು, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಮುಖ್ಯ ಅಧಿಕಾರಿಗಳು/ ಪಟ್ಟಣ ಪಂಚಾಯತಿ ಸದಸ್ಯರನೊಳಗೊಂಡು ಕಾರ್ಮಿಕ ನೀರೀಕ್ಷಕರು ಸದಸ್ಯ ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸುವಂತೆ ಅವರು ಹೇಳಿದರು.  

ಪ್ರತಿ ತಿಂಗಳು ಕಾರ್ಮಿಕರ ಯೋಗಕ್ಷೇಮ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಕಾರ್ಮಿಕ ಕಲ್ಯಾಣ ಅಧಿಕಾರಿಗಳು ಕಾರ್ಮಿಕರ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.   

ಪ್ರತಿ ತಿಂಗಳು ಭೇಟಿ ನೀಡಿ ಸಮಗ್ರ ವರದಿ ನೀಡುವಂತೆ ಅಧಿಕಾರಿಗೆ ಸೂಚಿಸಿದರು. ಇಟ್ಟಂಗಿ ಬಟ್ಟಿಗಳ ನೋಂದಣಿ ಕುರಿತು ಪರೀಶೀಲಿಸಬೇಕು. ನೋಂದಣಿ ಇರದೆಇದ್ದಲಿ ಒಂದು ವಾರ ನೋಂದಣಿಗೆ ಗಡವು ನೀಡಬೇಕು.  

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಗಳಾದ ರಿಷಿ ಆನಂದ ಮಾತನಾಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸಣ್ಣ ಕೈಗಾರಿಕೆ ಉದ್ಯಮಿಗಳನ್ನು ಪರೀಶೀಲಿಸಿ ನೋಂದಣಿ ಇರುವ ಕುರಿತು ಮಾಹಿತಿ ಪಡೆಯುವಂತೆ ಸಭೆಯಲ್ಲಿ ಅವರು ತಿಳಿಸಿದರು.   

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಜಿಲ್ಲೆಗೆ ವಿವಿಧ ಕಡೆಗಳಿಂದ ಕಟ್ಟಡ, ಕಬ್ಬು ಕಡಿಯುವ, ಹಾಗೂ ಇತರೆ ಕೆಲಸ ಕಾರ್ಯಗಾಗಿ ಕಾರ್ಮಿಕರು ಆಗಮಿಸುವ ಹಿನ್ನಲೆಯಲ್ಲಿ ಅವರ ರಕ್ಷಣೆಗೂ ಸಹ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಗ ಗೆಣ್ಣೂರ, ಉಪ ವಿಭಾಗಾಧಿಕಾರಿಗಳಾದ  ಗುರುನಾಥ ದಡ್ಡಿ, ಅಬಿದ ಗದ್ಯಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂತೋಷ ಗೂಣ್ಣಾರಿ, ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ, ಕಾರ್ಮಿಕ ಕಲ್ಯಾಣ ಅಧಿಕಾರಿ ಉಮಾ,  ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ಮುಖ್ಯಾಧಿಖಾರಿಗಳು, ತಾಲೂಕು ಪಂಚಾಯತ ಕಾರ್ಯ ನಿರ್ವಾಹಕಾಧಿಕಾರಿ  ತಾಲೂಕಿನ ಮುಖ್ಯಾಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಉಪಸ್ಥಿತರಿದ್ದರು.