ದೃಢವಾದ ದೇಹ, ದೃಢವಾದ ಮನಸ್ಸಿನಿಂದ ಗೆಲುವು ಸಾಧ್ಯ: ವರ್ಧಮಾನ ನ್ಯಾಮಗೌಡ
Victory is possible with a strong body and a strong mind: Vardhamana Nyamagouda
ಲೋಕದರ್ಶನ ವರದಿ
ಜಮಖಂಡಿ, ಸೆ.1: ದೃಢವಾದ ದೇಹ ಹಾಗೂ ದೃಢವಾದ ಮನಸ್ಸು ಹೊಂದಿದ್ದರೆ ಗೆಲುವು ಸುಲಭವಾಗುತ್ತದೆ. ಪ್ರತಿಯೊಂದು ಕ್ರೀಡೆಯಲ್ಲೂ ಸೋಲು-ಗೆಲುವು ಸಹಜವಾಗಿದ್ದು, ಗೆಲುವನ್ನು ಸಂಭ್ರಮಿಸಿದಂತೆ ಸೋಲನ್ನೂ ಗೆಲುವಿನ ಮೆಟ್ಟಿಲು ಎಂದು ಭಾವಿಸಬೇಕು ಎಂದು ಕಾಂಗ್ರೆಸ್ ಮುಖಂಡ ವರ್ಧಮಾನ ನ್ಯಾಮಗೌಡ ಹೇಳಿದರು.
ತಾಲೂಕಿನ ಆಲಗೂರು ಪುನರ್ವಸತಿ ಕೇಂದ್ರದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ ಕುಂಚನೂರು ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು. ಕಲಿಕೆಯೊಂದಿಗೆ ಆಟವನ್ನೂ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸಲು ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ಶಾಲಾ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಜೆ.ಎಸ್.ನ್ಯಾಮಗೌಡ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ್ ಕಲೂತಿ, ಆಲಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ಪರಮಗೊಂಡ, ಸಾಗರಾ ಬಾ. ಕಲ್ಯಾಣ, ಡಾ. ಜಿ.ಎನ್.ಸನದಿ ಫಕೀರಸಾಬ್ ಭಾಗವಾನ್, ಭರತೇಶ ನ್ಯಾಮಗೌಡ, ಧರೆಪ್ಪ ನ್ಯಾಮಗೌಡ, ರಾಜೇಂದ್ರ ನರಸಗೊಂಡ, ಭೀಮರಾಯ ಕಡಕೋಳ,
ಕಾಶಿನಾಥ ಹೊಸಮನಿ, ಮಹಾಬಲ ಗುದ್ರಾಪೂರ, ಚೇತನ ಕಡಕೋಳ, ರಾಮಪ್ಪ ಭಳಕೆ, ರಾಘವೇಂದ್ರ ಪಾಟೀಲ, ರಾಜು ಪೊತರಾಜ, ಚಂದ್ರಶೇಖರ ಚನವೀರ, ಇಮ್ರಾನ್ ಆಸಂಗಿ, ಮಲ್ಲಪ್ಪ ಮರನೂರ, ರಮೇಶ ಸವಾಸ, ಚಂದಪ್ಪ ನರಸಗೊಂಡ, ಕುಮಾರ ಅರ್ಜುನವಾಡಿ, ಮದಾರಂಗಿ ಮಾದೇಶ, ರವಿ ಡಂಬೆ, ಶಿವಾನಂದ ಪಾಟೀಲ, ರಾಮಪ್ಪ ಸುತಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 