ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ ್ಲ: ರಫೀಕ್ ಅಹ್ಮದ್
Victory and defeat are the main things in sports: Rafiq Ahmed
ಹೂವಿನಹಡಗಲಿ 11: ಶಾಂತಿ ಹಾಗೂ ಸೌಹಾರ್ದತೆಯ ಸಂಕೇತವಾದ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರ ಬದಿಗೊತ್ತಿ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ತಾಲೂಕು ದೈಹಿಕ ಪರೀವೀಕ್ಷಕ ರಫೀಕ್ ಅಹ್ಮದ್ ಖವಾಸ್ ಹೇಳಿದರು. ತಾಲ್ಲೂಕಿನ ಹೊಳಗುಂದಿ ಗ್ರಾಮದ ವಿವೇಕಾನಂದ ಎಜುಕೇಶನ್ ಸಂಸ್ಥೆಯ ಶ್ರೀ ಮತಿ ಕೌಲೂರು ತಾಯಮ್ಮ ವಿದ್ಯಾಂಜಲಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾಂಜಲಿ ಉತ್ಸವ- 2026 ಮತ್ತು ಶಾಲಾ ವಾರ್ಷಿಕೋತ್ಸವ ,ಕ್ರೀಡಾ ಕ್ರೀಡಾಕೂಟ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಏಕಾಗ್ರತೆ ಮತ್ತು ದೈಹಿಕ-ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕ್ರೀಡಾಸ್ಫೂರ್ತಿಯು ಸೋಲು-ಗೆಲುವಿನ ಲೆಕ್ಕಾಚಾರಕ್ಕಿಂತ ಮಿಗಿಲಾದದ್ದು ಎಂದರು.ಕ್ರೀಡಾ ಜ್ಯೋತಿ ಬೆಳಗಿಸಿದ ಪತ್ರಕರ್ತ ಎಂ.ಅಶೋಕ ಮಾತನಾಡಿ ಪಠ್ಯದ ಜತೆಯಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ ಎಂದರು.
ಶಾಲೆಯ ಮುಖ್ಯ ಗುರುಗಳಾದ ಎಂ.ಎಂ..ದೇವಿಕಾ ಪ್ರಭು ಸ್ವಾಮಿ , ಗ್ರಾ.ಪಂ. ನಿಕಟಪೂರ್ವ ಸದಸ್ಯ ಎಂ.ರುದ್ರಗೌಡ ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವಿಕೆ, ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ಕಲಿಕೆಯ ಪ್ರಕ್ರಿಯೆಗೆ ಹೆಚ್ಚಿನ ಮಹತ್ವವಿದೆ. ಸೋಲು ಅವಮಾನವಲ್ಲ, ಬದಲಿಗೆ ಉತ್ತಮ ಸಾಧನೆಗೆ ಪಾಠವಾಗಿದೆ ಎಂದರು.ಕ್ರೀಡೆ ಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಯನ್ನು ನೀಡಲಾಯಿತು. ಇದೇ ವೇಳೆ ಗ್ರಾ.ಪಂ.ನಿಕಟ ಪೂರ್ವ ಅದ್ಯಕ್ಷ ಅಂಚಿ ದಡಾರ್ಪ, ಶಿಕ್ಷಕರಾದ. ಸಿ.ಜಗದೀಶ್, ಎಸ್. ಬಿ.ಗುರುಬಸವರಾಜ, ಎ.ಎಂ.ಪಿ.ಸವಿತಾ, ಅಪ್ರೋಜ್ , ಶಬೀನಾಬಾನು, ಎನ್.ಹನುಮಕ್ಕ, ಹೆಚ್. ನೂರ್ ಜಾನ್, ಕೆ.ಎಂ.ಪ್ರೇಮ ಇದ್ದರು. ಫೆ.12 ರಂದು ವಿದ್ಯಾಂಜಲಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಮಕ್ಕಳ ಚಿತ್ರಕಲಾ ಸ್ಪರ್ಧೆ, ರಸ ಪ್ರಶ್ನೆ ,ಪ್ರಬಂಧ ಸ್ಪರ್ಧೆ ಹಾಗೂ ಫೆ.13ರಂದು ಶಾರದ ಪೂಜೆ ಮತ್ತು ಪಾಲಕರ ಕ್ರೀಡಾ ಕೂಟ ನಡೆಯಲಿದೆ.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 