ಕಲಬುರ್ಗಿ ಸಾರಿಗೆ ವಿಭಾಗಿಯ ಇಲಾಖೆಯಿಂದ ವಾಹನಗಳ ಜಪ್ತಿ

ಕಲಬುರ್ಗಿ ಸಾರಿಗೆ ವಿಭಾಗಿಯ ಇಲಾಖೆಯಿಂದ ವಾಹನಗಳ ಜಪ್ತಿ  Vehicles seized by Kalaburagi Transport Division

ಕುಕನೂರು 04 : ಜಂಟಿ ಆಯುಕ್ತರು ಸಾರಿಗೆ ಕಲಬುರ್ಗಿ ಇವರ ಆದೇಶದ ಮೆರೆಗೆ ಅಕ್ರಮ ಮರಳು ಸಾಗಾಣಿಕೆ ಮಾಡುವ ಟಿಪ್ಪರ್ ಗಳ ಮೇಲೆ ಹಾಗೂ ವಾಹನ ತೆರಿಗೆ ರೋಡ್ ಟ್ಯಾಕ್ಸ್‌ ಕಟ್ಟಲಾರದ ವಾಹನಗಳ ವಿರುದ್ಧ ಸೂಕ್ತ ಕ್ರಮವನ್ನು ತೇಗದುಕೊಳ್ಳುವ ನಿಟ್ಟಿನಲ್ಲಿ  ಕ್ರಮವಹಿಸಲು ಸಾರಿಗೆ ಇಲಾಖೆಯ ಮೊಟರ್ ವಾಹನ  ಹಾಗೂ ವಾಹನಗಳ ಪರೀಶೀಲನೆಗಾಗಿ ಬಳ್ಳಾರಿ ವಿಭಾಗಿಯ ಮೊಟರ್ ವಾಹನ ನೀರೀಕ್ಷಕೆ ಉಮಾ ಎಸ್ ಕೊಂಪಿಇವರು  ನಗರದಲ್ಲಿ ಸ್ಕೂಲ್ ಬಸ್ ಮತ್ತು ಎರಡು ಟಿಪ್ಪರ್ ಗಳನ್ನು ಜಪ್ತಿ ಮಾಡಿದ್ದಾರೆ.ಆಟೋಗಳನ್ನು ಮತ್ತು ಶಾಲೆಯ ವಾಹನಗಳನ್ನು ಸೂಕ್ತ ದಾಖಲೆಗಳೊಂದಿಗೆ ಮೊಟರ್ ವಾಹನ ಕಾಯ್ದೆ ಅಡಿಯಲ್ಲಿ ವಾಹನಗಳನ್ನು ಇಟ್ಟುಕೊಳ್ಳಬೇಕು ಎಂದು ವಾಹನ ಮಾಲಿಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.  

ನಗರದಲ್ಲಿ ಅನೇಕ ಆಟೋಗಳು ಮತ್ತು ಲಾರಿ, ಕಾರು, ಟ್ರ್ಯಕ್ಸ್‌, ಟಿಪ್ಪರ್ ಗಳು ಸರಿಯಾದ ರೀತಿಯಲ್ಲಿ ರೋಡ್ ಟ್ಯಾಕ್ಸ್‌ ಮತ್ತು ಇನ್ಸೂರೆನ್ಸ್‌ ಡ್ರೈವಿಂಗ್ ಲೈಸೆನ್ಸ್‌ ಹೀಗೆ ಅನೇಕ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಓಡಾಡುತ್ತಿವೆ ಇದರ ಬಗ್ಗೆ ಸಾರ್ವಜನಿಕರು ಸರಿಯಾದ ವಾಹನಗಳ ದಾಖಲಾತಿಗಳು, ಮತ್ತು ವಾಹನ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ಕೊಪ್ಪಳ ವಿಭಾಗೀಯಮೊಟರ್ ವಾಹನ ನೀರೀಕ್ಷಕ ಅಧಿಕಾರಿ ವಿಜೇಂದ್ರ ಧವಳಗಿ ಮಾತನಾಡಿ ಕೊಪ್ಪಳ, ಗುಲಬುರ್ಗ , ರಾಯಚೂರು, ಹೊಸಪೇಟೆ,  ಜಂಟಿ ಸಾರಿಗೆ ಕಲಬುರಗಿ ಇವರ ಆದೇಶದ ಮೇರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಮತ್ತು ತಾಲೂಕು ಪಟ್ಟಣಗಳಲ್ಲಿ ತಪಾಸಣೆ ನೆರವೇರಿಸುತ್ತಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ವಾಹನಗಳ ದಾಖಲಾತಿಗಳು ಹೊಂದಿರಬೇಕು ಎಂದು ಹೇಳಿದರು. ವಾಹನಕ್ಕೆ ಸಂಬಂಧಪಟ್ಟ ದಾಖಲಾತಿಗಳು ಇಲ್ಲದೆ ಇದ್ದ ಪಕ್ಷದಲ್ಲಿ ವಾಹನ ಮಾಲೀಕರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ವರದಿ ಚನ್ನಯ್ಯ ಹಿರೇಮಠ ಕುಕನೂರು