ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾಗೃತರಾಗಿ ವೀರೇಶ ಮಣ್ಣೂರು
Veeresh Mannur is conscious about preserving and developing the arts.
ಲೋಕದರ್ಶನ ವರದಿ
ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾಗೃತರಾಗಿ ವೀರೇಶ ಮಣ್ಣೂರು
ಕಂಪ್ಲಿ 03: ಪಟ್ಟಣದಲ್ಲಿ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಗಾನಯೋಗಿ ಪಂಡಿತ ಪುಟ್ಟರಾಜ ಅಭಿರುಚಿ ಕಲ್ಚರಲ್ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಎಂಬುದು ಶಿಸ್ತಿನೊಳಗೆ ಕಲಿಯುವುದು ಇಂದಿನ ಕಾಲದ ಮಕ್ಕಳು ಅನುಸರಿಸಿ ನಡೆಯಬೇಕು. ಕಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ನಿಮ್ಮ ವಸತಿ ನಿಲಯದಲ್ಲಿ ಹಮ್ಮಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳು ನಿಮಗೆ ಉಣಬಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ವೀರೇಶ ಮಣ್ಣೂರು ಮಾತನಾಡಿದರು. ಮಕ್ಕಳು ತಾವೆಲ್ಲರೂ ಕಲೆ ಸಾಹಿತ್ಯ ದ ಕಡೆ ಒಲವು ತೋರಿಸುವುದು ಕಲೆಯಬೇಕು ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬಂತೆ ಇಂದಿನ ಮಕ್ಕಳು ನೀವು ನಾಟಕ,ಬಯಲಾಟ,ಭರತನಾಟ್ಯ, ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭರತನಾಟ್ಯ ಕಲಾವಿದರಾದ ಕು.ಸಂಗೀತವರು ಹೇಳಿದರು. ಸಮಾಜದಲ್ಲಿ ಒಳ್ಳೆಯ ನಡೆ,ನುಡಿ, ಸತ್ಯಗಳನ್ನು ಒಳಗೊಂಡು ನಡೆಯಬೇಕು. ಮಹಾತ್ಮಾ ಗಾಂಧೀಜಿಯವರ ಅಹಿಂಸೆ ಮಾಡಬಾರದು, ಸತ್ಯ ನಿಷ್ಠೆಯಲ್ಲಿ ನಡೆಯಬೇಕು ಎಂದು ಹೇಳಿದರು ಕೆಟ್ಟದ್ದನ್ನು ಅನುಸರಿಸುವುದು ನಮಗೆ ಒಳ್ಳೆತನ ಅಲ್ಲ ನೈಜತೆಯನ್ನು ಒಳಗೊಂಡು ನಡೆಯಬೇಕು. ಅರಿತು ಬಾಳಬೇಕು ಮರೆತು ಬಾಳಬಾರದು ಜೀವನದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ.ಹಿ.ಪ್ರಾ.ಶಾಲಾ ಶಿಕ್ಷಕರಾದ ಮರಿ ಜಡಿಯಪ್ಪ ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು:-ಜನಪದ ಗೀತೆಗಳು:-ಕುರುಬರ ಹೇಮೇಶ್ವರ ಮತ್ತು ತಂಡದವರು ನೇರವೇರಿಸಿದರು. ಕಾರ್ಯಕ್ರಮದಲ್ಲಿ:- ನಿಲಯ ಪಾಲಕ ವಿರುಪಾಕ್ಷಿ, ಸಿಬ್ಬಂದಿ ಕೆ.ಪಂಪಾಪತಿ ಮತ್ತು ಅಡುಗೆ ಸಹಾಯಕರು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಗಾನಯೋಗಿ ಪಂಡಿತ ಪುಟ್ಟರಾಜ ಅಭಿರುಚಿ ಕಲ್ಚರಲ್ ಟ್ರಸ್ಟಿನ ಅಧ್ಯಕ್ಷ ಪುರುಷೋತ್ತಮ. ಡಿ ಮತ್ತು ಸರ್ವಸದ್ಯಸರು ಭಾಗವಹಿಸಿದ್ದರು. ಮಹಾತ್ಮಾ ಗಾಂಧೀಜಿ ಪುಣ್ಯ ತಿಥಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಜರುಗಿತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 