23ರಂದು ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ

 23ರಂದು ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ Veerarani Kittur Channamma Jayanti on the 23rd

ಲೋಕದರ್ಶನ ವರದಿ 

23ರಂದು ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ 

ವಿಜಯಪುರ 20: ವೀರ ರಾಣಿ ಕಿತ್ತೂರ ಚನ್ನಮ್ಮ  201 ನೇ ಜಯಂತ್ಯೋತ್ಸವ ಹಾಗೂ 247ನೇ ವಿಜಯೋತ್ಸವ ಕಾರ್ಯಕ್ರಮದ ಪ್ರಯುಕ್ತ ದಿ. 23ರಂದು  ಬೆಳಿಗ್ಗೆ 8 ಗಂಟೆ 30 ನಿಮಿಷಕ್ಕೆ ವಿಜಯಪುರ ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್ ನಿಲ್ದಾಣದಲ್ಲಿ ಇರುವ ವೀರ ರಾಣಿ ಕಿತ್ತೂರ ಚೆನ್ನಮ್ಮಳ ವೃತ್ತದಲ್ಲಿ ಚನ್ನಮ್ಮನ ಭಾವ ಚಿತ್ರಕ್ಕೆ ಪೂಜೆ ಮತ್ತು ಮಾಲಾರೆ​‍್ಣಯನ್ನು ಸರ್ವ ಸಮಾಜದ ಬಾಂಧವರು ಹಾಗೂ ಚನ್ನಮ್ಮನ ಅಭಿಮಾನಿಗಳಿಂದ ನೆರವೇರುವುದು. ತದ ನಂತರ 9.30 ಕ್ಕೆ ಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವತಿಯಿಂದ ರಥೋತ್ಸವಕ್ಕೆ ಪೂಜೆ, ಮಾಲಾರೆ​‍್ಣಗೈದು ರಥೋತ್ಸವವು ಸಿದ್ಧೇಶ್ವರ ಗುಡಿಯಿಂದ ಗಾಂಧಿವೃತ್ತ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಕನಕದಾಸರ ವೃತ್ತದ ಮುಖಾಂತರ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಭೆಯಾಗಿ ಮಾರ​‍್ಡಲಿದೆ.  

ಈ ಸಭೆಯಲ್ಲಿ ಜಿಲ್ಲೆಯ ಸಚಿವರು, ಶಾಸಕರು, ಮಾಜಿ ಶಾಸಕರು, ಸಮಾಜದ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಎಂ. ಪಾಟೀಲ ದೇವರ ಹಿಪ್ಪರಗಿ ಹಾಗೂ ನಗರ ಘಟಕದ ಅಧ್ಯಕ್ಷರಾದ ಶ್ರೀಶೈಲ ಬುಕ್ಕಣ್ಣಿ, ಮಹಿಳಾ ಘಟಕದ ಅಧ್ಯಕ್ಷರಾದ ಉಮಾ ಪಾಟೀಲ, ಕಾರ್ಯಾಧ್ಯಕ್ಷರಾದ ಶೋಭಾ ಬಿರಾದಾರ, ಪಂಚ ಸೇನೆ ಜಿಲ್ಲಾಧ್ಯಕ್ಷ ಸಂತೋಷ  ಮುಂಜಣ್ಣಿ ಹಾಗೂ ಕಲ್ಯಾಣ ಕರ್ನಾಟಕ ಸಂಚಾಲಕರಾದ ಶರಣ ಬಸು ಗಂಗಶೆಟ್ಟಿ ಹಾಗೂ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ನಿಂಗನಗೌಡ ಸೋಲಾಪೂರ, ಮಾಧ್ಯಮ ವಕ್ತಾರ ದಾನೇಶ ಅವಟಿ, ಸಮಾಜದ ಎಲ್ಲ ನಗರದ ಹಾಗೂ ವಿವಿಧ ತಾಲೂಕುಗಳ ಯುವಕರು, ಯುವತಿಯರು ಸರ್ವ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಕಳಕಳಿಯ ವಿನಂತಿ.