ಸ್ವಾಭಿಮಾನದ ಪ್ರತೀಕ ವೀರರಾಣಿ ಚನ್ನಮ್ಮ , ಸ್ವಾತಂತ್ರ-್ಯ ಸಂಗ್ರಾಮದ ಬೆಳ್ಳಿ ಚುಕ್ಕಿ. ಧೈರ್ಯ, ನ್ಯಾಯ ಮತ್ತು ಮಹಿಳಾ ಶಕ್ತಿಯ ಪ್ರತಿರೂಪ
Veerarani Channamma, the symbol of self-respect, the silver bullet of the freedom struggle. The epit
ಲೋಕದರ್ಶನ ವರದಿ
ಸ್ವಾಭಿಮಾನದ ಪ್ರತೀಕ ವೀರರಾಣಿ ಚನ್ನಮ್ಮ , ಸ್ವಾತಂತ್ರ-್ಯ ಸಂಗ್ರಾಮದ ಬೆಳ್ಳಿ ಚುಕ್ಕಿ. ಧೈರ್ಯ, ನ್ಯಾಯ ಮತ್ತು ಮಹಿಳಾ ಶಕ್ತಿಯ ಪ್ರತಿರೂಪ
ಗದಗ 23: ವೀರರಾಣಿ ಕಿತ್ತೂರು ಚನ್ನಮ್ಮ ಸ್ವಾಭಿಮಾನದ ಪ್ರತೀಕ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರೊಂದಿಗೆ ಧೈರ್ಯ, ಶೌರ್ಯದಿಂದ ಹೋರಾಡಿದ ವೀರಮಾತೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಗುರುವಾರ ಜರುಗಿದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬ್ರಿಟೀಷರು ಪ್ರತಿ ವರ್ಷ ಬ್ರಿಟೀಷ್ ಸಾಮ್ರಾಜ್ಯಕ್ಕೆ ಇಂತಿಷ್ಟು ಕಪ್ಪ (ಕರ) ನೀಡಬೇಕೆಂದು ವಿವಿಧ ರಾಜರುಗಳಿಗೆ ಕರಾರು ಹಾಕಿದರು. ಭಾರತದಲ್ಲಿಯ ರಾಜ್ಯಗಳ ರಾಜರಿಂದ ಬ್ರಿಟೀಷರು ಈ ರೀತಿ ಕಪ್ಪವನ್ನು ವಸೂಲು ಮಾಡುತ್ತಿದ್ದರು. ಆದರೆ ಕಿತ್ತೂರು ವೀರರಾಣಿ ಚನ್ನಮ್ಮ ಮಾತ್ರ ಬ್ರಿಟೀಷರಿಗೆ “ ನಿಮಗೇಕೆ ಕೊಡಬೇಕು ಕಪ್ಪ. ನೀವೇನು ಒಡಹುಟ್ಟಿದವರಾ ಅಣ್ಣತಮ್ಮಂದಿರಾ ನೀವೇನು ಉತ್ತಿ ಬಿತ್ತೀದ್ದೀರಾ ಎಂದು ಬ್ರಿಟೀಷರಿಗೆ ಎಚ್ಚರಿಕೆ ನೀಡಿದರು.
ಕ್ರಿ.ಶ. 1824 ರಲ್ಲಿ ಬ್ರಿಟೀಷರ ವಿರುದ್ಧ ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ವೀರಾವೇಶದಿಂದ ಹೋರಾಡಿದ ದಿಟ್ಟ ಮಹಿಳೆ. ರಾಣಿ ಚನ್ನಮ್ಮಳ ಧೈರ‌್ಯ, ಸಾಹಸ ಎಲ್ಲರಿಗೂ ಮಾದರಿ ಎಂದರು. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಹೋರಾಟವನ್ನು ಮಾಡಿ ಬ್ರಿಟೀಷರ ಸದೆಬಡೆದ ಕೆಚ್ಚೆದೆಯ ಹೋರಾಟಗಾರ್ತಿ ಹಾಗೂ ಕನ್ನಡ ನಾಡಿನ ವೀರಮಹಿಳೆ, ಅಪ್ರತಿಮ ದೇಶಭಕ್ತೆ, ಕಿತ್ತೂರ ಸಂಸ್ಥಾನದ ಮಹಾರಾಣಿ ಕಿತ್ತೂರು ರಾಣಿಚನ್ನಮ್ಮ ಅವರ ಧೈರ್ಯ, ಶೌರ್ಯ, ಸ್ವಾಭಿಮಾನ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಎಂದು ರಾಣಿ ಚನ್ನಮ್ಮ ಅವರ ಹೋರಾಟದ ದಿಟ್ಟತನವನ್ನು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಬಣ್ಣಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಮಾತನಾಡಿ ವೀರರಾಣಿ ಕಿತ್ತೂರು ಚನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಧೈರ‌್ಯದಿಂದ ಹೋರಾಡಿದ ವೀರಮಾತೆ. ದೇಶಭಕ್ತಿಯ ಸಂಕೇತ. ಭವ್ಯ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಪಸರಿಸಿದ ಕೀರ್ತಿ ವೀರರಾಣಿ ಚನ್ನಮ್ಮ ಅವರಿಗೆ ಸಲ್ಲುತ್ತದೆ ಎಂದರು. ನಾಡರಕ್ಷಣೆಗಾಗಿ ಬ್ರಿಟೀಷರ್ ವಿರುದ್ಧ ಕಚ್ಚೆ ಕಟ್ಟಿ ರಣಾಂಗಣದಲ್ಲಿ ದಿಟ್ಟ ಹೋರಾಟವನ್ನು ಮಾಡಿ ಬ್ರಿಟೀಷರಿಗೆ ನಡುಕ ಹುಟ್ಟಿಸಿದ ಸ್ವಾತಂತ್ರ್ಯದ ದೃವತಾರೆ ಕಿತ್ತೂರ ರಾಣಿ ಚನ್ನಮ್ಮ ಅವರ ಹೋರಾಟ ಅವರೊಂದಿಗೆ ಅಂತ್ಯವಾಗದೇ ಸ್ವಾತಂತ್ರ್ಯದ ಕಿಚ್ಚು ಬೃಹದಾಕಾರವಾಗಿ ಬೆಳೆಯಲು ನಾಂದಿ ಹಾಡಿತು ಎಂದು ಹೇಳಿದರು. ಗಣ್ಯರಾದ ವಿಜಯಕುಮಾರ ಗಡ್ಡಿ ಮಾತನಾಡಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿರುವುದು ಸಂತಸದ ವಿಷಯ. ಕನ್ನಡ ನಾಡಿನ ಜನರು ಹೆಮ್ಮೆ ಪಡುವ ವಿಷಯವಾಗಿದೆ. ಕಿತ್ತೂರು ರಾಣಿ ಚನ್ನಮ್ಮನವರು ಭಾರತದ ಸ್ವಾತಂತ್ರ್ಯದ ್ರ್ರಥಮ ಮಹಿಳಾ ಹೋರಾಟಗಾರತಿ. ಇವರ ಶೌರ‌್ಯ, ತ್ಯಾಗಎಲ್ಲ ಮಹಿಳೆಯರಿಗೂ ಪ್ರೇರಣೆಯಾಗಿವೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್. ಮಾತನಾಡಿ ವೀರರಾಣಿ ಕಿತ್ತೂರ ಚನ್ನಮ್ಮ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಶೌರ್ಯ, ಮಾನವೀಯ ಮೌಲ್ಯಗಳ ಕುರಿತು ಈಗಿನ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಮಕ್ಕಳಿಗೆ ಆತ್ಮಸ್ಥೈರ್ಯ ವೃದ್ಧಿಸಲು ಕರಾಟೆ, ಕುಸ್ತಿಗಳಂತಹ ಸ್ವಯಂ ರಕ್ಷಣಾ ಕಲೆಗಳನ್ನು ಕಲಿಸಬೇಕು ಎಂದರು. ಅಗಡಿ ಇಂಜನೀಯರಿಂಗ್ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಸೋಮಶೇಖರ ಕೆರಿಮನಿ ಉಪನ್ಯಾಸಕ ನೀಡುತ್ತಾ ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಹೋರಾಡಿದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಮಹಿಳೆ ಚನ್ನಮ್ಮ. ಇದು ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ. ಭವ್ಯ ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯದ ಹೊಸ ಕಲ್ಪನೆ ನೀಡಿದ ಪುಣ್ಯಭೂಮಿಯೇ ಕಿತ್ತೂರು ಸಂಸ್ಥಾನ. ಸತ್ತರೆ ವೀರ ಸ್ವರ್ಗ, ಉಳಿದರೆ ಕಿತ್ತೂರು ನೆಲ ಎಂದ ರಾಣಿ ಚನ್ನಮ್ಮ ಬ್ರೀಟೀಷರಿಗೆ ನಡುಕ ಹುಟ್ಟಿಸಿದ್ದಲ್ಲದೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದೃವತಾರೆ ಎಂದು ಬಣ್ಣಿಸಿದರು.
ಕ್ರಿ.ಶ.1824 ರಲ್ಲಿ ಬ್ರಿಟೀಷರು ಕಿತ್ತೂರು ಸಾಮ್ರಾಜ್ಯಕ್ಕೆ ಆಕ್ರಮಣ ಮಾಡಲು ಬಂದಾಗ ತನ್ನ ರಾಜಕೀಯ ಚಾಣಾಕ್ಷತೆ, ಶೌರ್ಯ, ಸ್ಥೈರ‌್ಯದಿಂದ ನಾಡಿನ ರಕ್ಷಣೆಗಾಗಿ ಹೋರಾಡಿದ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿಯಾಗಿದ್ದಾರೆ. ಹೆಣ್ಣು ಅಬಲೆಯಲ್ಲ, ಸಬಲೆ ಅವಳು ಮನಸ್ಸು ಮಾಡಿದರೆ ಹೊಸ ಇತಿಹಾಸಕ್ಕೆ ನಾಂದಿ ಹಾಡಬಲ್ಲಳು ಎನ್ನುವುದನ್ನು ತನ್ನ ನಾಡ ರಕ್ಷಣೆಗಾಗಿ ್ರಾಣಾರೆ್ಪಣ ಮಾಡಿದ ವೀರರಾಣಿ ಕಿತ್ತೂರ ಚನ್ನಮ್ಮ ನಿಂದ ಕಲಿಯಬೇಕು . ವೀರರಾಣಿ ಕಿತ್ತೂರು ಚನ್ನಮ್ಮ ಅವರ ಜೀವನ ಚರಿತ್ರೆ ಹಾಗೂ ವೀರರಾಣಿಯ ಯಶೋಗಾಥೆಗಳನ್ನು ವಿವರಿಸಿದ ಪ್ರೊ. ಸೋಮಶೇಖರ ಕೆರಿಮನಿ ವೀರರಾಣಿ ಕಿತ್ತೂರು ಚನ್ನಮ್ಮ ಕುರಿತು ಅನೇಕ ಸಂಶೋಧನೆಗಳು ನಡೆದಿವೆ. ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರು ಅಜರಾಮರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಹಾಗೂ ಸಮಾಜ ಸೇವೆಯಲ್ಲಿ ತೊಡಗಿದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಜಾನಪದ ಅಕಾಡೆಮಿ ಸದಸ್ಯರಾದ ಶಂಕ್ರಣ್ಣ ಸಂಕಣ್ಣವರ ಹಾಗೂ ಬಸವರಾಜ ಹಡಗಲಿ ತಂಡದವರು ವೀರರಾಣಿ ಕಿತ್ತೂರ ಚನ್ನಮ್ಮ ಕುರಿತು ಜನಪದ ಗೀತೆ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ್, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಅಧಿಕಾರಿಗಳಾದ ಶ್ರೀನಿವಾಸಮೂರ್ತಿ ಕುಲಕರ್ಣಿ,ಆರ್.ಎಸ್.ಬುರುಡಿ, ಡಾ.ಬಸವರಾಜ ಬಳ್ಳಾರಿ, ಸಮಾಜದ ಗಣ್ಯರಾದ ಈರಣ್ಣ ಕರಿಭೀಷ್ಟಿ, ಎಫ್. ಮರಿಗೌಡ್ರ, ಶರಣಪ್ಪ ಗುಡಿಮನಿ, ಬಸಣ್ಣಪ್ಪ ಚಿಂಚಲಿ, ಅಯ್ಯಪ್ಪ ಅಂಗಡಿ, ಅಜ್ಜಣ್ಣ ಹಿರೇಮನಿ ಪಾಟೀಲ, ಶಿವು ಕವಲೂರು, ಮಹಾಬಲೇಶ ಶೆಟ್ಟರ, ರವಿ ಪಾಟೀಲ, ಮುರುಗೇಶ ಹಡಗಲಿ, ಎಸ್ ಎಸ್ ಹುಡಕಡ್ಲಿ, ಪಶಾಂತ ನರೇಗಲ್ಲ,ಪರ್ಪ ಕಮತರ, ಚಿನ್ನೂರ, ಚನ್ನವೀರ್ಪ ಮಳಗಿ, ಮಹೇಶ ಕರಿಭೀಷ್ಠಿ, ವಿರುಪಾಕ್ಷಪ್ಪ ಮಟ್ಟಿ, ಸ್ವಾತಿ ಅಕ್ಕಿ , ಈರಮ್ಮ ತಾಳಿಕೋಟಿ ಜಯಶ್ರೀ ಉಗಲಾಟದ , ಜಯಾಶ್ರೀ ಅಣ್ಣಿಗೇರಿ ವೀರಣ್ಣ ಮಾಳವಾಡ, ಮರಿಗೌಡ್ರ, ಸಿ.ಕೆ.ಮಾಳಶೆಟ್ಟಿ, ರಾಜು ಬಗಾಡೆ, ಸೇರಿದಂತೆ ಇತರರು ಇದ್ದರು. ಪ್ರೊ.ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 