ವೀರ ರಾಣಿ ಕಿತ್ತೂರು ಚನ್ನಮ್ಮನ 200ನೇವಿಜಯೋತ್ಸವ ಕಾರ್ಯಕ್ರಮ

ಬೆಳಗಾವಿ 16: ವೀರ ರಾಣಿ ಕಿತ್ತೂರು ಚನ್ನಮ್ಮನ 200ನೇವಿಜಯೋತ್ಸವ ಕಾರ್ಯಕ್ರಮವನ್ನು ಒಂದು ದಿನದ ಮಟ್ಟಿಗೆ ಬೈಲಹೊಂಗಲ ಚನ್ನಮ್ಮಾಜಿ ಸಮಾಧಿ ಮುಂದೆ ಜರಗಿಸುವಂತೆ ಆಗ್ರಹಿಸಿ ವೀರ ರಾಣಿ ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಸಮಿತಿ ಹಾಗೂ ಚನ್ನಮಾಜಿ ಅಭಿಮಾನ ಬಳಗದಿಂದ ಉಪವಿಭಾಗಧಿಕಾರಿಗಳು ಸೇರಿದಂತೆ ಅವರ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿಗಳು ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಸಹೇಬ ಪಾಟೀಲ ಅವರಿಗೆ ಮನವಿ ಅರ್ಪಿಸಿದರು.

ಮನವಿ ಅರ್ಪಿಸಿ ನ್ಯಾಯವಾದಿ ಎಫ್‌.ಎಸ್‌.ಸಿದ್ದನಗೌಡರ ಹಾಗೂ ಮುರಗೇಶ ಗೂಂಡ್ಲೂರ ಮಾತನಾಡಿ, ನಮ್ಮ ನಾಡಿನ ಹಾಗೂ ದೇಶದ ಪ್ರಥಮ ಸ್ವಾತಂತ್ರ್ಯ ಹೊರಾಟಗಾರತಿ ಕ್ರಾಂತೀವೀರ ಸುಪುತ್ರಿ ವೀರರಾಣಿ ಕಿತ್ತೂರು ಚೆನ್ನಮ್ಮನ 200ವರ್ಷದ ವಿಜಯೋತ್ಸವ ಕಿತ್ತೂರು ನಾಡಿನಲ್ಲಿ ಅಕ್ಟೋಬರ್ 23,24 ಮತ್ತು 25 ರಂದು ಆಚರಿಸುತ್ತಿರುವದು ಶ್ಲಾಘನೀಯ.  ಆದರೆ, ಚನ್ನಮ್ಮಾಜಿಯ ವೀರಸಮಾಧಿ ಸ್ಥಳ ಬೈಲಹೊಂಗಲದಲ್ಲಿ ಸರ್ಕಾರ ಯಾವುದೆ ಕಾರ್ಯಕ್ರಮ ಹಮ್ಮಿಕೊಳ್ಳದೆ ನಿರ್ಲಕ್ಷವಹಿಸಿರುವದು ಬಹಳ ಕೇದಕರ.ಆದ್ದರಿಂದ ಅಕ್ಟೋಬರ್ 22ರಂದು ಬೈಲಹೊಂಗಲದಲ್ಲಿ 200 ನೇ ಕಿತ್ತೂರು ವಿಜಯೋತ್ಸವ ನಿಮಿತ್ಯ ವಿಶೇಷ ಕಾರ್ಯಕ್ರಮವನ್ನು ಬೈಲಹೊಂಗಲ ನಗರದಲ್ಲಿರುವ ಚನ್ನಮ್ಮಾಜಿಯವರ ಸಮಾಧಿ ಸ್ಥಳದಲ್ಲಿ ವಿಜೃಂಭಣೆಯಿಂದ ಹಮ್ಮಿಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತೆವೆ ಎಂದರು.ಮಾಜಿ ಜಿಪಂ ಸದಸ್ಯ ಶಂಕರ ಮಾಡಲಗಿ, ಮಾಜಿ ಪುರಸಭೆ ಉಪಾಧ್ಯಕ್ಷ ಮಹೇಶ ಹರಕುಣಿ ಮಾತನಾಡಿ, ದೇಶವೆ ವಿಜೃಂಭಿಸಬೇಕಾದ ಈ ಉತ್ಸವದಲ್ಲಿ ಬೈಲಹೊಂಗಲ ನಿರ್ಲಕ್ಷಿಸಿರುವದು ಸರ್ಕಾರಕ್ಕೆ ಶೋಭೆಯಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡುಸಮಾಧಿ ಸ್ಥಳದಲ್ಲಿ ಭವ್ಯ ಅಲಂಕಾರಗೊಳಿಸಿಬೇಕು. ಸಮಾಧಿ ಸ್ಥಳದ ಸ್ವಚ್ಚತಾ ಕಾರ್ಯಹಮ್ಮಿಕೊಂಡು ಸುಂದರವಾಗಿಸುವದು, ಅಕ್ಟೋಬರ್ 22 ರಂದು ಬೆಳಿಗ್ಗೆ ಪಟ್ಟಣದಲ್ಲಿ ಶಾಲಾ-ಕಾಲೇಜು, ಎನ್ ಸಿಸಿ, ಸ್ಕೌಟ್ ಗೈಡ್ಸ್‌ ಮಕ್ಕಳ, ಪಥ ಸಂಚಲನ, ರೂಪಕಗಳು ಹಾಗೂ ಚನ್ನಮ್ಮನ ಚರಿತ್ರ ಬಿಂಬಿತ ಇತಿಹಾಸದ ಗೊಷ್ಠಿಗಳು ಹಾಗೂ ಒಂದು ದಿನದ ರಸಮಂಜರಿ, ಕಿರು ನಾಟಕ, ಚನ್ನಮ್ಮನ ಮೇಲಿನ ಜಾನಪದ ಸಾಹಿತ್ಯದ ಹಾಡು, ಲೇಜರ್ ಶೋ, ಭಜನೆ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಸರ್ಕಾರ ಈ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯವಹಿಸಿದ್ದೆ ಆದರೆ ಬೈಲಹೊಂಗಲ ನಾಡಿನ ಜನ ಹಾಗೂ ಚನ್ನಮ್ಮನ ಅಭಿಮಾನಿಗಳು ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಆದ್ದರಿಂದ ಚನ್ನಮ್ಮಾಜಿಯ ಸಮಾಧಿ ಸ್ಥಳದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವದರೊಂದಿಗೆ ಚನ್ನಮ್ಮಳ ಸಮಾಧಿ ಸ್ಥಳದ ಮಹತ್ವ ನಾಡಿನ ಯುವ ಪಿಳಿಗೆಗೆ ತಿಳಿಸಬೇಕೆಂದರು.

ಪ್ರತಿಭಟಣೆಯಲ್ಲಿ ಸುನಿಲ ಪಾಟೀಲ, ಮಹಾಂತೇಶ ಮತ್ತಿ ಕೊಪ್ಪ, ಪರ್ವತಗೌಡ ಪಾಟೀಲ,ಈರಣ್ಣ ಬೆಟಗೇರಿ, ಶ್ರೀಶೈಲ ಶರಣಪ್ಪನವರ, ಸುಭಾಷ ತುರಮರಿ, ಮಹೇಶ ಕೊಟಗಿ, ಬಿ.ಬಿ.ಸಂಗನಗೌಡರ, ಶ್ರೀಕಾಂತ ಶಿರಹಟ್ಟಿ, ಸುನಿಲ ಮರಕುಂಬಿ, ಸಿದ್ದರೋಢ ಹೊಂಡಪ್ಪನವರ, ಮಹಾಂತೇಶ ಅಕ್ಕಿ, ರವೀಂದ್ರ ರೆಣಕೆ, ಸಿ.ಜಿ.ಉಂಡಿ, ಎಮ್‌.ಆರ್‌.ಉಪ್ಪಿನ, ವಿ.ಪಿ.ಈಟಿ, ಗೌಡಪ್ಪ ಹೊಸಮನಿ, ರವಿ ತುರಮರಿ, ಸಂತೋಷ ಕೊಳವಿ, ಬಸವರಾಜ ದೊಡಮನಿ, ಸ್ವಾಭಿಮಾನ ಕ್ರಿಯಾಶೀಲ ಗೆಳೆಯರ ಬಳಗದ ಸದಸ್ಯರು ಮಾಜಿ ಯೋಧರು ಇದ್ದರು(ವರದಿ ಈರಣ್ಣಾ ಹುಲ್ಲೂರ)