ಬೆಳಗಾವಿ 06 : ಬೆಂಗಳೂರಿನಲ್ಲಿ ಇತ್ತೀಚೆಗೆ ಏರಿ್ಡಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಬೆಳಗಾವಿಯ ವೇದಾ (ಕೋಮಲ) ಅವರು ಮಿಸ್ ಆ್ಯಂಡ ಮಿಸೆಸ್ ಇಂಡಿಯಾ ರೋಲ್ ಮಾಡಲ್-2024 ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಚಲನಚಿತ್ರ ನಿರ್ಮಾಕರು ಹಾಗೂ ಫ್ಯಾಶನ ಲೋಕದಲ್ಲಿ ಹೆಸರು ಮಾಡಿರುವ ನಂದಿನಿ ನಾಗರಾಜ್ ಅವರು ಇತ್ತೀಚೆಗೆ ಬೆಂಗಳೂರಿನ ಲಲಿತ ಅಶೋಕ ಹೊಟೇಲನಲ್ಲಿ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಟ್ಟು 30 ಸ್ಪರ್ಧಾಳುಗಳಲ್ಲಿ ವೇದಾ(ಕೋಮಲ) ಅವರು, ವಿವಾಹಿತರ ವಿಭಾಗದಲ್ಲಿ ಮಿಸೆಸ್ ಕರ್ವಿ ಇಂಡಿಯಾ ಹಾಗೂ ಮಿಸೆಸ್ ಎಲಿಗೆಂಟ ರೋಲ್ ಮಾಡಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಬೆಳಗಾವಿಯ ರೇಖಾ ಹಾಗೂ ಬಸವರಾಜ ಮಟ್ಟಿ ಅವರು ಸುಪುತ್ರಿಯಾಗಿದ್ದಾರೆ.