ಸಡಗರ ಸಂಭ್ರಮದಿಂದ ವಾಸವಿ ದೇವಿ ಗಂಗೆಸ್ಥಳ ಮೆರವಣಿಗೆ
Vasavi Devi Gangesthala procession with great enthusiasm
ಲೋಕದರ್ಶನ ವರದಿ
ಕಂಪ್ಲಿ 26: ಸಮೀಪದ ಚಿಕ್ಕಜಂತಕಲ್ ಗ್ರಾಮದಲ್ಲಿ ಆರ್ಯ ವೈಶ್ಯ ಸಮಾಜ ಬಾಂಧವರು ಅರಾಧ್ಯ ದೇವತೆ ಶ್ರೀ ವಾಸವಿ ಜಯಂತ್ಯೋತ್ಸವ ಪ್ರಯುಕ್ತ ದೇವಿಯ ಗಂಗೆಸ್ಥಳ ಹಾಗೂ ಉತ್ಸವ ಮೆರವಣಿಗೆ ಶ್ರದ್ಧಾ-ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಭಾನುವಾರ ಜರುಗಿತು. ಇಲ್ಲಿನ ತುಂಗಭದ್ರ ನದಿ ತಟದಲ್ಲಿ ಗಂಗೆಪೂಜೆ ಶ್ರದ್ದೆಯಿಂದ ನೆರವೇರಿಸಿದ ನಂತರ ಆರಂಭಗೊಂಡ ಗಂಗೆಸ್ಥಳ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಗ್ರಾಮ ದೇವತೆ ಶ್ರೀ ದ್ಯಾವಮ್ಮ ದೇವಸ್ಥಾನ, ಬಸವೇಶ್ವರ ದೇವಸ್ಥಾನದ ಮೂಲಕ ಸಂಚರಿಸಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸಮುದಾಯ ಭವನ ಬಳಿ ಸಂಪನ್ನಗೊಂಡಿತು.
ಈ ಮೆರವಣಿಗೆಯಲ್ಲಿ ಮಹಿಳೆಯರ ಕುಂಭ, ಕಳಸ, ತಾಷಾರಾಂಡೋಲ್, ಮಂಗಳವಾದ್ಯ ಸೇರಿ ವಿವಿಧ ಕಲಾ ಪ್ರಕಾರಗಳು ಮೆರಗು ನೀಡಿದವು. ನಂತರ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಂತರ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರ್ಯವೈಶ್ಯ ಸಮಾಜದ ಗ್ರಾಮ ಘಟಕ ಅಧ್ಯಕ್ಷ ಪಾನಗಂಟಿ ರಾಮಮೂರ್ತಿ ಚಾಲನೆ ನೀಡಿ ಮಾತನಾಡಿ, ವಾಸವಿ ದೇವಿಯ ಆರಾಧನೆಯಿಂದ ಮಾನಸಿಕ ನೆಮ್ಮದಿ ಜತೆಗೆ ಜೀವನೋಲ್ಲಾಸಕ್ಕೆ ನಾಂದಿಯಾಗಲಿದೆ ಎಂದರು.
ನಂತರ ಯುವ ಮುಖಂಡ ಪಾನಗಂಟಿ ರಾಘವೇಂದ್ರ ಮಾತನಾಡಿ, ದೇವಿಯ ಆರಾಧನೆಯೇ ನಮ್ಮ ಬದುಕಿಗೆ ದಾರಿ ದೀಪ, ದೇವಿಯ ಆಶೀರ್ವಾದಿಂದ ಜೀವನ ಪಾವನವಾಗಿದೆ ಎಂದರು.ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಉಪಾಧ್ಯಕ್ಷ ಸೌದ್ರಿ ನಾಗರಾಜ, ಮುಖಂಡರಾದ ಬದ್ರಿನಾಥ, ಸೌದ್ರಿ ಶ್ರೀನಿವಾಸ, ಸೌದ್ರಿ ಶೇಖರ್ಪ, ನವೀನ್ಚಂದ್ರ, ಅರುಣಾ ರಾಘವೇಂದ್ರ, ಅಶ್ವರ್ಯ ಸೌದ್ರಿ, ಸಂಗೀತ ಸೌದ್ರಿ, ಪದ್ಮಾ ಸೌದ್ರಿ, ಸುರೇಖಾ ಪಾನಗಂಟಿ, ಮಹಿಳೆಯರು, ಯುವಕರು, ಮಕ್ಕಳು ಪಾಲ್ಗೊಂಡಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 