ಬೆಂಗಳೂರು, 3: ಮಹಾರಾಷ್ಟ್ರದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇದರಿಂದ ಕರ್ನಾ ಟಕಕ್ಕೂ ಅಪಾಯ ಉಂಟಾಗುವ ಸಾಧ್ಯತೆಯಿದೆ. ನೆರೆಯ ಮಹಾರಾಷ್ಟ್ರಕ್ಕೆ ತಾಗಿಕೊಂಡಿರುವ ಉತ್ತರ ಕರ್ನಾ ಟಕದ ಜಿಲ್ಲೆಗಳಲ್ಲೂ ಪ್ರವಾಹದ ಭೀತಿ ಎದುರಾಗಿದೆ.
ಇಂದು ಸತಾರಾ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಜಲಾಶಯದಿಂದ ನೀರು ಬಿಡಲಾಗಿದೆ. ಇಂದು ಹೆಚ್ಚುವರಿ 10,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುವುದು ಎಂದು ಮಹಾರಾಷ್ಟ್ರ ನೀರಾವರಿ ಅಧಿಕಾರಿಗಳು ಕನರ್ಾಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 105 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ಕೊಯ್ನಾ ಡ್ಯಾಂ ಶೇ.80 ರಷ್ಟು ಭರ್ತಿ ಯಾಗಿದೆ. 2.20 ಲಕ್ಷ ಕ್ಯೂಸೆಕ್ ನೀರು ಕೃಷ್ಣೆಯ ಒಳ ಹರಿವು ಇದ್ದು, ಕೊಯ್ನಾ ಜಲಾಶಯದಿಂದ ನೀರು ಬಿಟ್ಟರೆ ಪ್ರವಾಹ ಉಂಟಾಗಲಿದೆ. ಇದರಿಂದ ಬೆಳಗಾವಿಯ 37 ಗ್ರಾಮಗಳಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಅಲ್ಲದೆ, ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಉತ್ತರ ಕರ್ನಾ ಟಕದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಬಳ್ಳಾರಿಯ ಕೆಲವು ಭಾಗಗಳಲ್ಲಿ ಕೃಷ್ಣಾ ನದಿಯ ನೆರೆ ನೀರು ಜಮೀನುಗಳಿಗೆ ನುಗ್ಗಿ ಭಾರೀ ಹಾನಿಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿಮರ್ಾಣವಾಗಿದೆ. ಇಲ್ಲಿನ ಜಮೀನುಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬಾಗಲಕೋಟೆಯಲ್ಲಿ ಜಮೀನು ನಾಶ:
ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ದೇಗುಲದ ಸುತ್ತಲೂ ನೀರು ಆವರಿಸಿರುವುದರಿಂದ ಭಕ್ತರು ಪರದಾಡುವಂತಾಗಿದೆ. ನಾರಾಯಣಪುರ ಡ್ಯಾಂಗೆ ನೀರು ಬಿಟ್ಟ ಪರಿಣಾಮ ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ತೊಗರಿ, ಸಜ್ಜೆ, ಕಬ್ಬು ಬೆಳೆ ನಾಶವಾಗಿದೆ.
ಬೆಳಗಾವಿ, 03: ಮಹಾರಾಷ್ಟ್ರದ ಜಲಾಶಯಗಳಿಂದ ಬಿಡಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಅಂದಾಜು 4.00 ಅಡಿಗಳಷ್ಟು ನೀರು ಏರಿಕೆ ಆಗುವ ಸಂಭವವಿರುತ್ತದೆ. ಆದರಿಂದ ನದಿಗಳ ಪಾತ್ರಗಳಲ್ಲಿರುವ ಜನರು ತಮ್ಮ ಅಗತ್ಯ ಸಾಮಗ್ರಿಗಳೊಂದಿಗೆ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಜನ ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಲ್ಲಿ ಜಿಲ್ಲಾಡಳಿತ ವತಿಯಿಂದ ಎಲ್ಲಾ ಅಗತ್ಯವಾದ ರೀತಿಯ ಸಹಕಾರಗಳನ್ನು ನೀಡಲಾಗುವುದು. ಜಿಲ್ಲಾಡಳಿತವು ರಕ್ಷಣಾ ಸಾಮಗ್ರಿಗಳೊಂದಿಗೆ ತಂಡಗಳನ್ನು ರಚಿಸಿ ಸಿದ್ಧತೆಯಲ್ಲಿಟ್ಟುಕೊಂಡಿದ್ದು, ಪ್ರವಾಹದ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ.
ಸಾರ್ವಜನಿಕರು ಸಹಾಯದ ಅಗತ್ಯವೆನಿಸಿದಲ್ಲಿ ಈ ಕೆಳಕಂಡ ಕಾಯರ್ಾಲಯಗಳ ನಿಯಂತ್ರಣ ಕೊಠಡಿಗಳನ್ನು ಸಂಪಕರ್ಿಸಬಹುದಾಗಿದೆ.
ಕಾರ್ಯಾ ಲಯಗಳ ನಿಯಂತ್ರಣ ಕೊಠಡಿಗಳು ಹಾಗೂ ದೂರವಾಣಿ ಸಂಖ್ಯೆ:
ಜಿಲ್ಲಾಧಿಕಾರಿಗಳ ಕಾರ್ಯಾ ಲಯ ಬೆಳಗಾವಿ 0831-2407290, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಬೆಳಗಾವಿ 0831-2405231, ತಹಶೀಲ್ದಾರ ಕಾಯರ್ಾಲಯ ಚಿಕ್ಕೋಡಿ 08338-272228, ತಹಶೀಲ್ದಾರ ಕಾರ್ಯಾ ಲಯ ರಾಯಬಾಗ 08331-225482, ತಹಶೀಲ್ದಾರ ಕಾಯರ್ಾಲಯ ಅಥಣಿ 08289-251146, ತಹಶೀಲ್ದಾರ ಕಾಯರ್ಾಲಯ ನಿಪ್ಪಾಣಿ 08338-220395
ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಕೃಷ್ಣಾ ನದಿ, ವೇದಗಂಗಾ ಹಾಗೂ ದೂಧಗಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ದಿನಾಂಕ:03.08.2019ರಂದು ಮುಂಜಾನೆ 10.00ಗಂಟೆಗೆ ಲಬ್ಯವಿರುವ ಮಾಹಿತಿಯ ಪ್ರಕಾರ ಮಹಾರಾಷ್ಟ್ರದ ಜಲಾಶಯಗಳಿಂದ ಒಟ್ಟು 205118 ಕ್ಯೂಸೆಕ್ಸ್ ನೀರು ಬರುತ್ತಿದೆ.
ಈ ಕೆಳಕಂಡ ರಸ್ತೆ, ಸೇತುವೆಗಳು ಜಲಾವೃತವಾಗಿದ್ದು, ಇವುಗಳಿಗೆ ಪಯರ್ಾಯ ರಸ್ತೆಗಳ ಮೂಲಕ ಸಂಚಾರ ಜಾಯಲ್ಲಿದೆ. ಕಲ್ಲೋಳ- ಯಡೂರ ತಾ:ಚಿಕ್ಕೋಡಿ (ಕೃಷ್ಣಾ ನದಿ)ಕಾರದಗಾ-ಭೋಜ ತಾ:ಚಿಕ್ಕೋಡಿ (ವೇದಗಂಗಾ+ದೂದಗಂಗಾ ನದಿ), ಮಲಿಕವಾಡ-ದತ್ತವಾಡ ತಾ:ಚಿಕ್ಕೋಡಿ (ದೂದಗಂಗಾ ನದಿ), ಭೋಜವಾಡಿ-ಕುನ್ನೂರ ತಾ: ಚಿಕ್ಕೋಡಿ (ವೇದಗಂಗಾ ನದಿ), ಸಿದ್ನಾಳ-ಅಕ್ಕೋಳ ತಾ: ಚಿಕ್ಕೋಡಿ (ವೇದಗಂಗಾ ನದಿ), ಜತ್ರಾಟ-ಭೀವಶಿ ತಾ: ಚಿಕ್ಕೋಡಿ (ವೇದಗಂಗಾ ನದಿ), ಸದಲಗಾ-ಬೋರಗಾಂವ ತಾ:ಚಿಕ್ಕೋಡಿ (ವೇದಗಂಗಾ+ದೂದಗಂಗಾ ನದಿ), ಯಕ್ಸಂಬಾ-ದಾನವಾಡ ತಾ:ಚಿಕ್ಕೋಡಿ (ದೂದಗಂಗಾ ನದಿ), ಕುಡಚಿ ಸೇತುವೆ ತಾ: ರಾಯಬಾಗ (ಕೃಷ್ಣಾ ನದಿ), ರಾಯಬಾಗ-ಚಿಂಚಲಿ ತಾ:ರಾಯಬಾಗ (ಕೃಷ್ಣಾ ನದಿ), ನದಿ ಇಂಗಳಗಾಂವ-ತೀರ್ಥ ತಾ:ಅಥಣಿ (ಕೃಷ್ಣಾ ನದಿ), ಸಪ್ತಸಾಗರ-ಬನದವಸತಿ ತಾ:ಅಥಣಿ (ಕೃಷ್ಣಾ ನದಿ), ಕೊಕಟನೂರ-ಶಿರಹಟ್ಟಿ ತಾ:ಅಥಣಿ (ಕೃಷ್ಣಾ ನದಿ), ಜುಂಜರವಾಡ-ತುಬಚಿ ತಾ:ಅಥಣಿ (ಕೃಷ್ಣಾ ನದಿ), ಖವಟಕೊಪ್ಪ-ಶೇಗುಣಸಿ ತಾ:ಅಥಣಿ (ಕೃಷ್ಣಾ ನದಿ), ಉಗಾರ ಕೆ.ಎಚ್ ಉಗಾರ ಬಿ.ಕೆ, ರಸ್ತೆ ತಾ: ಕಾಗವಾಡ (ಕೃಷ್ಣಾ ನದಿ) ನದಿ ದಂಡೆಗಳ ಮೇಲಿರುವ ಪಂಪಸೆಟ್ಗಳನ್ನು ಹೊರತೆಗೆಯುವ ಪ್ರಯತ್ನಗಳನ್ನು ಮಾಡಬಾರದೆಂದು ಹಾಗೂ ಮೇಲೆ ವಿವರಿಸಿದ ರಸ್ತೆ, ಸೇತುವೆಗಳ ಮೇಲೆ ಸಾರ್ವಜನಿಕರು ಸಂಚಾರ ಮಾಡದಂತೆ ಜಿಲ್ಲಾಧಿಕಾರಿಗಳಾದ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.